Sania Mirza: ಸಾನಿಯಾ ಮಿರ್ಜಾ ಎರಡನೇ ಮದುವೆ: ಅಭಿಮಾನಿಗಳಿಗೆ ಸಿಕ್ಕ ಸುಳಿವೇನು..?
ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಮೊದಲ ಪತಿಗೆ ವಿಚ್ಛೇಧನ ನೀಡಿ ಬಹು ದಿನಗಳು ಕಳೆದಿದ್ದು, ಎರಡನೇ ಮದುವೆ ವಿಚಾರ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಈಗೀಗ ಸಾನಿಯಾ ಮಿರ್ಜಾ ಎರಡನೇ ಮದುವೆ ವಿಚಾರ ಜೋರಾಗಿ ಕೇಳಿ ಬರುತ್ತಿದ್ದು, ಒಂಟಿಯಾಗಿ ಇರುವ ಸಾನಿಯಾ ಮಿರ್ಜಾ ಸದ್ಯದಲ್ಲೇ ಜಂಟಿಯಾಗುತ್ತಾರೆ ಎನ್ನುವ ಸುಳಿವು ಸಿಗುತ್ತಿದೆ.
ಸಾನಿಯಾ ಮಿರ್ಜಾಗೆ ವಿಚ್ಛೇಧನ ನೀಡಿದ ಬಳಿಕ ಶೋಯೆಬ್ ಮಲೀಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಇಂತಹ ಸಮಯದಲ್ಲಿ ಸಾನಿಯಾ ಮಿರ್ಜಾ ಕೂಡ ಎರಡನೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದ್ದವು. ಮೊದಮೊದಲು ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮದ್ ಶಮಿ ಅವರೊಂದಿಗೆ ಸಾನಿಯಾ ಮಿರ್ಜಾ 2ನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಸನಾ ಜಾವೇದ್ ಅವರ ಮೊದಲ ಪತಿ ಉಮೈರ್ ಜಸ್ವಾಲ್ ಜೊತೆಗೆ ಎರಡನೇ ಮದುವೆ ಆಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಸಾನಿಯಾ ಮಿರ್ಜಾ ಮದುವೆ?
ಈ ಗಾಸಿಪ್ ಹರಡಲು ಕಾರಣಗಳು ಕೂಡ ಇದೆ. ಸನಾ ಜಾವೇದ್ ಸಾನಿಯಾ ಮಿರ್ಜಾ ಮೊದಲ ಪತಿ ಶೋಯೆಬ್ ಮಲೀಕ್ ಜೊತೆ ಮದುವೆಯಾದ ಬಳಿಕ ಉಮೈರ್ ಜಸ್ವಾಲ್ ಕೂಡ ಹೊಸ ಜೀವನದತ್ತ ಮುಖ ಮಾಡಿದ್ದರು. ಅಂತೆಯೇ ಅವರ ಎರಡನೇ ವಿವಾಹ ಕೂಡ ಆಗಿದ್ದು, ಮದುವೆ ಫೋಟೋವನ್ನು ಶೇರ್ ಮಾಡಿರುವ ಉಮೈರ್ ಜಸ್ವಾಲ್ ವಧುವಿನ ಮಾಹಿತಿಯನ್ನು ಬಹಳ ಗೌಪ್ಯವಾಗಿ ಇಟ್ಟಿದ್ದಾರೆ. ಹೀಗಾಗಿ ಅದು ಸಾನಿಯಾ ಮಿರ್ಜಾ ಫೋಟೋಗಳು ಎಂದು ಕೆಲವರು ಊಹಿಸಿದ್ದರು. ಈ ಬಗ್ಗೆ ಗಾಸಿಪ್‌ಗಳು ಕೂಡ ಹರಿದಾಡುತ್ತಿದೆ.
'ಸ್ವಲ್ಪ ತಾಳ್ಮೆ ಇರಲಿ...'
ಆದರೆ ಈ ಮಧ್ಯೆ ಸಾನಿಯಾ ಎರಡನೇ ಮದುವೆಯಾಗಿರಬಹುದು ಅಥವಾ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನುವುದು ಬಹುತೇಕ ಖಚಿತವಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. 'ಸ್ವಲ್ಪ ತಾಳ್ಮೆ ಇರಲಿ, ಎಲ್ಲವೂ ಮುಗಿದು ಹೋಯಿತು ಅಂದಾಗ, ದೇವರು ಖಂಡಿತಾ ಪವಾಡ ಸೃಷ್ಟಿ ಮಾಡುತ್ತಾನೆ' ಎಂದು ಬರೆದುಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಹುಶಃ ಸಾನಿಯಾ ಮಿರ್ಜಾ ಬದುಕಿಗೆ ಹೊಸ ಪ್ರೀತಿಯ ಆಗಮನ ಆಗಿರಬಹುದು ಎಂದು ಹಲವರು ಊಹಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ಸಾನಿಯಾ ಮಿರ್ಜಾ ಸದ್ಯದಲ್ಲೇ ನೀಡುವ ಸಾಧ್ಯತೆ ಇದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಸಾನಿಯಾ ಮಿರ್ಜಾ ಆಗಾಗ ತಮ್ಮ ಫೋಟೋಗಳನ್ನು ಹಾಗೂ ಮಗನ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಮಗನ ಹುಟ್ಟುಹಬ್ಬದ ಸುಂದರ ಫೋಟೋಗಳನ್ನು ಕೂಡ ಸಾಯಿಯಾ ಮಿರ್ಜಾ ಶೇರ್ ಮಾಡಿದ್ದರು.












Click it and Unblock the Notifications