'ಇನ್ಸ್ಟಾಗ್ರಾಮ್‌ನಲ್ಲಿ ದುಡ್ಡು ಹಾಕಿ ಅಂದ್ರೆ ನಾನಂತೂ ಹಾಕಲ್ಲ': ತನಿಷಾ ಹೀಗಂದಿದ್ಯಾಕೆ?

ಇತ್ತೀಚಿಗೆ ಜನರು ಸೆಲೆಬ್ರೆಟಿಗಳನ್ನು ತಲುಪಲು ಸುಲಭವಾದ ಮಾರ್ಗವೆಂದರೆ ಅದು ಸಾಮಾಜಿಕ ಜಾಲತಾಣ. ಮೊದಲಿನಂತೆ ಸೆಲೆಬ್ರೆಟಿಗಳ ಮನೆ ಬಾಗಿಲಿಗೆ ಹೋಗಿ ಕಾದು ಅವರನ್ನು ಭೇಟಿಯಾಗಬೇಕು ಎನ್ನುವುದಿಲ್ಲ. ಅಥವಾ ಪತ್ರ ಬರೆಯಬೇಕು ಎನ್ನುವುದಿಲ್ಲ. ಇಂದಿನ ಈ ಡಿಜಿಟಲ್‌ ಯುಗದಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ನೇರವಾಗಿ ಸೆಲೆಬ್ರೆಟಿಗಳಿಗೆ ಮೆಸೇಜ್‌ಗಳನ್ನು ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು.

ಕೆಲವು ಸೆಲೆಬ್ರೆಟಿಗಳು ತಮ್ಮ ಫ್ಯಾನ್ಸ್‌ಗಳ ಮೆಸೇಜ್‌ಗಳಿಗೆ ರೀಪ್ಲೇ ಕೂಡ ಮಾಡುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಂಡಿರುವ ಕೆಲ ನೆಟ್ಟಿಗರು ಸೆಲೆಬ್ರೆಟಿಗಳಿಗೆ ಮನಬಂದಂತೆ ಮೆಸೇಜ್‌ಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ಹಣದ ಸಹಾಯವನ್ನೂ ಕೂಡ ಕೇಳುತ್ತಾರೆ. ಇದೀಗ ಬಿಗ್‌ ಬಾಸ್‌ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಇದೇ ವಿಚಾರವಾಗಿ ಮಾತನಾಡಿದ್ದಾರೆ.

Tanisha Kuppanda Rejects Money Requests on Instagram A Clear Message

ಇನ್ಸ್ಟಾಗ್ರಾಮ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಬಿಗ್‌ ಬಾಸ್‌ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಉತ್ತರ ಕೊಟ್ಟಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ವೈಯಕ್ತಿಕವಾಗಿ ಮಾಡುವ ಮೆಸೇಜ್‌ಗಳಿಗೆ ಉತ್ತರ ಕೊಡಿ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಈ ವೇಳೆ ತನಿಷಾ ಮುಖ್ಯವಾದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಆ ರೀತಿ ಮೆಸೇಜ್‌ ಮಾಡುವವರಿಗೆ ಬಹಳ ಮುಖ್ಯವಾದ ಸೂಚನೆಯೊಂದನ್ನು ನೀಡಿದ್ದಾರೆ.

'ನನ್ನ ಇನ್ಸ್ಟಾಗ್ರಾಮ್‌ಗೆ ಬರುವ ಸಾಮಾನ್ಯವಾದ ಬೇಡಿಕೆ ಎಂದರೆ ನನ್ನ ಕುಟುಂಬದಲ್ಲಿ ಸಮಸ್ಯೆ ಆಗಿದೆ. ನನ್ನ ಆರೋಗ್ಯ ಸರಿ ಇಲ್ಲ. ಅಪ್ಪಗೆ ಹುಷಾರಿಲ್ಲ, ಅಮ್ಮನಿಗೆ ಹುಷಾರಿಲ್ಲ ಸೇರಿದಂತೆ ಒಂದಿಷ್ಟು ವಿಚಾರಗಳನ್ನು ಹೇಳಿಕೊಂಡು ನೀವು ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದೀರಾ. ನನಗೆ ಅರ್ಥವಾಗುತ್ತದೆ. ನಾನು ಸಹಾಯ ಮಾಡುತ್ತೇನೆ. ಆದರೆ ನೀವು ನನ್ನನ್ನು ಭೇಟಿ ಮಾಡಬೇಕು. ಇಲ್ಲ ಅದಕ್ಕೆ ಬೇಕಾದ ದಾಖಲೆಗಳ ಬಗ್ಗೆ ನೀವು ನಮ್ಮ ಮ್ಯಾನೇಜರ್‌ ಹತ್ತಿರ ಮಾತನಾಡಬೇಕು'.

Tanisha Kuppanda Rejects Money Requests on Instagram A Clear Message

'ಇಲ್ಲ ಅಂತಂದ್ರೆ ಇನ್ಸ್ಟಾಗ್ರಾಮ್‌ನಲ್ಲಿ ನಂಬರ್‌ ಕಳುಹಿಸಿ ದುಡ್ಡು ಹಾಕಿ ಅಂದ್ರೆ ಖಂಡಿತವಾಗಿಯೂ ದೇವರಾಣೆ ನಾನು ದುಡ್ಡು ಹಾಕಲ್ಲ. ನಾನು ಖಂಡಿತವಾಗಿಯೂ ಅದನ್ನು ಮಾಡುವುದಿಲ್ಲ. ನೀವು ಯಾವ ಉದ್ದೇಶಕ್ಕೆ ಕೇಳುತ್ತಿದ್ದೀರಾ ಎನ್ನುವುದು ಕೂಡ ಮುಖ್ಯ. ಬಹಳಷ್ಟು ಜನ ನಾನು ಗಾಡಿ ತೆಗೆದುಕೊಳ್ಳಬೇಕು. ಇನ್ನೊಂದಷ್ಟು ಜನ ನಾನು ಹೋಟೆಲ್‌ ಮಾಡಬೇಕು, ಇನ್ನೊಂದಷ್ಟು ಜನ ನಾನು ಇಎಂಐ ಕಟ್ಟಬೇಕು. ನನಗೆ ಬಟ್ಟೆ ತೆಗೆದುಕೊಳ್ಳಬೇಕು, ವಾಚ್‌ ತೆಗೆದುಕೊಳ್ಳಬೇಕು ಅಂತೆಲ್ಲಾ ಮೆಸೇಜ್‌ ಮಾಡುತ್ತೀರಾ. ನಿಮ್ಮ ತಂದೆ-ತಾಯಿಯೇ ನಿಮಗೆ ಕೊಡಿಸಲಿಲ್ಲ ಎಂದ ಮೇಲೆ ನ್ಯಾನ್ಯಾಕೆ ನಿಮಗೆ ಕೊಡಿಸಲಿ' ಎಂದು ಪ್ರಶ್ನಿಸಿದ್ದಾರೆ.

'ನಾನು ಖಂಡಿತಾ ಆ ರೀತಿ ಮಾಡುವುದಿಲ್ಲ. ನಿಜವಾಗಿಯೂ ಯಾರಿಗಾದರೂ ಸಹಾಯ ಬೇಕಿದೆಯಾ. ಅಂತವರು ನನ್ನ ತಂಡವನ್ನು ಅಥವಾ ನನ್ನನ್ನು ಭೇಟಿಯಾದರೆ ನನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತೇನೆ. ಹಾಗಂತ ಸಿಕ್ಕ ಸಿಕ್ಕವರಿಗೆ ಕೊಡಲು ನಮ್ಮ ತಂದೆ-ತಾತ ಮಾಡಿ ಇಟ್ಟಿಲ್ಲ. ನನಗೆ ಕೊಡಬೇಕು ಅನಿಸಿದರೆ ಖಂಡಿತಾ ನನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತೇನೆ. ದಯವಿಟ್ಟು ಹಣ ಕೇಳಿಕೊಂಡು ನನಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್‌ ಮಾಡಬೇಡಿ' ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+