Vishal: ನಟ ವಿಶಾಲ್ ಚೆನ್ನೈ ಆಸ್ಪತ್ರೆಗೆ ದಾಖಲು, ಹೆಲ್ತ್ ಬುಲೆಟಿನ್‌ನಲ್ಲಿ ಶಾಕಿಂಗ್ ವಿಚಾರ ರಿವೀಲ್
ತಮಿಳು ನಟ ವಿಶಾಲ್ ಅವರು ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಅವರು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟ ವಿಶಾಲ್ ಅವರು ಕೈ ನಡುಗುತ್ತಿತ್ತು. ಅಲ್ಲದೆ ಮುಕ್ತವಾಗಿ ಮಾತನಾಡಲು ಕೂಡ ಅವರು ಒದ್ದಾಡುತ್ತಿದ್ದರು. ಇದನ್ನು ಕಂಡು ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.
ತಮಿಳು ನಟ ವಿಶಾಲ್ ಅವರು ಮದಗಜ ರಾಜ ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ್ದರು. ವೇದಿಕೆ ಮೇಲೆ ಅವರು ಮೈಕ್ ಹಿಡಿಯಲು ಕೂಡ ಸಾಧ್ಯವಾಗದ ಸ್ಥತಿಯಲ್ಲಿ ಕಾಣಿಸಿಕೊಂಡರು. ವೈರಲ್ ಫೀವರ್‌ನಿಂದಾಗಿ ಅವರ ಕೈ ನಡುಗುತ್ತಿತ್ತು.

ಬಳಿಕ ಅವರು ಆ ಕಾರ್ಯಕ್ರಮ ಮುಗಿಸಿ ನೇರವಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಎಂದು ವರದಿಯಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲೂ ವಿಶಾಲ್ ಅವರದ್ದು ಎನ್ನಲಾದ ಹೆಲ್ತ್ ಬುಲೆಟಿನ್ ಫೋಟೋ ಹರಿದಾಡಿತ್ತು. ಇದರ ಪ್ರಕಾರ ವಿಶಾಲ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವುದು ದೃಢವಾಗಿದ್ದು, ವಿಶಾಲ್ ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ,.
ವಿಶಾಲ್ ಅವರು ಪ್ರೀರಿಲೀಸ್ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ವಿಶಾಲ್ ಮೈಕ್ರೊಫೋನ್ ಹಿಡಿಯುವಾಗ ಕೈಗಳು ನಡುಗುತ್ತಿದ್ದಂತೆ, ಮಾತನಾಡಲು ಹೆಣಗಾಡುತ್ತಿದ್ದರು. ತಮ್ಮ ಆರೋಗ್ಯ ಸರಿ ಇಲ್ಲದಿದ್ದರೂ ವಿಶಾಲ್ ಈ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಸಹಾಯಕನ ನೆರವಿನಿಂದ ವಿಶಾಲ್ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಅಭಿಮಾನಿಗಳು ವಿಶಾಲ್ ಅವರಿಗೆ ಏನಾಯಿತು? ಬೇಗ ಗುಣಮುಖರಾಗಿ ಬನ್ನಿ ಎಂದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ಈ ಕಾರ್ಯಕ್ರಮದ ನಂತರ ವಿಶಾಲ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶಾಲ್ ಅವರು ವೈರಲ್ ಫೀವರ್‌ನಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ ಸಂಪೂರ್ಣವಾಗಿ ಬೆಡ್ ರೆಸ್ಟ್ ಅಗತ್ಯವಿದೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ವಿಶಾಲ್ ಅವರು ಇನ್ನೂ ಹಲವು ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರಬೇಕು ಎಂದೂ ಹೇಳಲಾಗಿದೆ. ಹೀಗಾಗಿ ವಿಶಾಲ್ ಅವರು ಸದ್ಯ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಸುಂದರ್ ಅವರು ನಿರ್ದೇಶನದ ಮದಗಜರಾಜ ಸಿನಿಮಾದಲ್ಲಿ ನಟ ವಿಶಾಲ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಂತಾನಂ, ವರಲಕ್ಷ್ಮಿ ಶರತ್‌ಕುಮಾರ್, ಸತೀಶ್, ನಿತಿನ್ ಸತ್ಯ, ಸೋನು ಸೂದ್, ಅಂಜಲಿ ಮತ್ತು ಮಣಿವಣ್ಣನ್, ಮನೋಬಾಲಾ, ಮಾಯಿಲ್‌ಸಾಮಿ ಮತ್ತು ಚಿಟ್ಟಿ ಬಾಬು ಕೂಡ ನಟಿಸಿದ್ದಾರೆ. ಈ ಸಿನಿಮಾ ಬರೋಬ್ಬರಿ 12 ವರ್ಷಗಳಿಂದ ವಿಳಂಬವಾಗಿದೆ. ಮದಗಜ ರಾಜ ಚಿತ್ರವು ಜನವರಿ 12ರಂದು ತೆರೆಗೆ ಬರಲಿದೆ.












Click it and Unblock the Notifications