ಮಾಜಿ ಸಿಎಂ ಹೆಂಡತಿ ಮೇಲೆ ನನಗೆ ಕ್ರಶ್ ಇದೆ: ಖ್ಯಾತ ನಟಿ ಶಾಕಿಂಗ್ ಹೇಳಿಕೆ
ಸಾಮಾನ್ಯವಾಗಿ ಹುಡುಗಿಯ ಮೇಲೆ ಹುಡುಗನಿಗೆ ಅಥವಾ ಹುಡುಗನ ಮೇಲೆ ಹುಡುಗಿಗೆ ಕ್ರಶ್ ಆಗುತ್ತೆ. ಈಗಿನ ಯುವಜನರಿಗಂತೂ ಕ್ರಶ್ ಇದ್ದೇ ಇರ್ತಾರೆ. ಈ ಕ್ರಶ್ ಅನ್ನ ಆಕರ್ಷಣೆ ಅಂತಲೂ ಕರೆಯುತ್ತಾರೆ. ಈಗ ಅಚ್ಚರಿ ಅಂದರೆ ಪ್ರಸ್ತುತ ಸಂಸದೆಯೂ ಆಗಿರುವ ಖ್ಯಾತ ರಾಜಕಾರಣಿಯ ಪತ್ನಿ ಮೇಲೆ ನನಗೆ ಕ್ರಶ್ ಆಗಿದೆ ಎಂದಿದ್ದಾರೆ ಖ್ಯಾತ ನಟಿ. ಈ ಹೇಳಿಕೆ ಕೇಳಿ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಈ ನಟಿಗೆ ಮತ್ತೊಬ್ಬ ಮಹಿಳೆ ಮೇಲೆ ಕ್ರಶ್ ಆಗೋದಾ? ಎನ್ನುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟಿ ಸ್ವರಾ ಭಾಸ್ಕರ್ ಅವರು ಈ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ನಟಿ ಸ್ವರಾ ಭಾಸ್ಕರ್ ಅವರು ನೀಡಿರುವ ಹೇಳಿಕೆಗಳು ಮತ್ತೊಮ್ಮೆ ವಿವಾದಕ್ಕೆ ಸಿಲುಕಿವೆ. ಲೈಂಗಿಕತೆ ಕುರಿತು ಅವರು ನೀಡಿರುವ ಹೇಳಿಕೆಗಳು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗಳಿಗೂ ಕಾರಣವಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಅವರ ಪತಿ ಫಹಾದ್ ಅಹ್ಮದ್ ಅವರು "ನಾವೆಲ್ಲರೂ ದ್ವಿಲಿಂಗಿಗಳು", ಭಿನ್ನಲಿಂಗೀಯತೆ ನಮ್ಮ ಮೇಲೆ ಹೇರಿದ ಸಿದ್ಧಾಂತ ಎಂದು ಹೇಳಿದ್ದಾರೆ.

'ಜನರು ನಿಜವಾಗಿಯೂ ತಮ್ಮ ಇಚ್ಛೆಯಂತೆ ಬದುಕಲು ಸ್ವತಂತ್ರರಾಗಿದ್ದರೆ, ಎಲ್ಲರೂ ದ್ವಿಲಿಂಗಿಗಳಾಗಿರುತ್ತಿದ್ದರು ಎಂದು ಸ್ವರಾ ಭಾಸ್ಕರ್ ಹೇಳಿದ್ದಾರೆ. ಹುಡುಗ ಹಾಗೂ ಹುಡುಗಿಯ ಸಂಬಂಧಗಳ ಕಲ್ಪನೆಯನ್ನು (ಭಿನ್ನಲಿಂಗೀಯತೆ) ಸಾವಿರಾರು ವರ್ಷಗಳಿಂದ ನಮ್ಮ ಮೇಲೆ ಹೇರಲಾಗಿದೆ. ಮಾನವ ಜನಾಂಗವನ್ನು ಮುಂದುವರಿಸುವುದಕ್ಕಾಗಿಯೇ ಭಿನ್ನಲಿಂಗೀಯತೆಯನ್ನು ಸಾಮಾನ್ಯ ನಿಯಮವನ್ನಾಗಿ ಮಾಡಲಾಗಿದೆ ಎಂದು ವಾದಿಸಿದ್ದಾರೆ. ಜನರನ್ನು ಅವರವರ ವಿವೇಚನೆಗೆ ಬಿಟ್ಟರೆ, ಅವರೆಲ್ಲರೂ ದ್ವಿಲಿಂಗಿಗಳೇ, ಆದರೆ ಭಿನ್ನಲಿಂಗೀಯತೆ ಎಂಬುದು ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬೇರೂರಿರುವ ಒಂದು ಸಿದ್ಧಾಂತ' ಎಂದಿದ್ದಾರೆ.
'ಡಿಂಪಲ್ ಯಾದವ್ ನನ್ನ ಕ್ರಶ್'
ಅದೇ ಸಂದರ್ಶನದಲ್ಲಿ ಸ್ವರಾ ಭಾಸ್ಕರ್ ಅವರಿಗೆ ನಿಮ್ಮ ಕ್ರಶ್ ಯಾರು? ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಸ್ವರಾ, 'ನನಗೂ ಕ್ರಶ್ ಇದ್ದಾರೆ, ಅದು ಬೇರೆ ಯಾರೂ ಅಲ್ಲ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಎಂದಿದ್ದಾರೆ. ಈ ಹೆಸರು ಹೇಳಿರುವುದರಿಂದ ಉತ್ತರ ಪ್ರದೇಶದಲ್ಲಿ ನನ್ನ ಪತಿಯ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಬಹುದು' ಎಂದೂ ಸ್ವರಾ ನಗುತ್ತಾ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಖತ್ ಟ್ರೋಲ್ ಮಾಡಲಾಗುತ್ತಿದೆ.

ಡಿಂಪಲ್ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಹಾಗೂ ಉತ್ತರ ಪ್ರದೇಶದ ಮೈನ್ಪುರಿ ಕ್ಷೇತ್ರದ ಸಂಸದೆಯೂ ಆಗಿದ್ದಾರೆ. ಅವರು ಈ ಹಿಂದೆ ಎರಡು ಬಾರಿ ಕನೌಜ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಡಿಂಪಲ್ ಯಾದವ್ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಕೂಡ. ಇದೀಗ ಸ್ವರಾ ಭಾಸ್ಕರ್ ಅವರ ಹೇಳಿಕೆಯು ವಿವಾದದಕ್ಕೆ ಕಾರಣವಾಗಿದೆ.












Click it and Unblock the Notifications