'ನೀನು ಸುಮ್ಮನೆ ಇರು': ಸುಕೃತಾ ಮಾತಿಗೆ ರಚಿತಾ ರಾಮ್‌ ಗರಂ?

ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ 2 ಕಾರ್ಯಕ್ರಮದಲ್ಲಿ ಆಧುನಿಕ ರಿಲೇಶನ್ಶಿಪ್ಗಳ ಬಗ್ಗೆ ಕೆಲವು ಇಂಟ್ರಸ್ಟಿಂಗ್‌ ವಿಚಾರಗಳನ್ನು ಪ್ರಸ್ತಾಪ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಯಾರಿಗೆ ಗೊತ್ತಿರದ ಜೆನ್-ಜಿ ಜನರೇಷನ್‌ನಲ್ಲಿ ಸಂಬಂಧಗಳಲ್ಲಿ ಇರುವ ವಿವಿಧ ಮಜಲುಗಳನ್ನು ನಟಿ ಸುಕೃತಾ ನಾಗ್‌ ಆಗಾಗ ವಿವರಿಸುತ್ತಾರೆ. ಈಗಾಗಲೇ ಸಿಚ್ಯುವೇಶನ್ಶಿಪ್, ಬೆಂಚಿಂಗ್ ಎಂಬೆಲ್ಲಾ ಹೊಸ ಪದಗಳ ಅರ್ಥಗಳನ್ನು ವಿವರಿಸಿದ್ದರು.

ಮೊದಲ ಮೊದಲು ನಟಿ ಸುಕೃತಾ ನಾಗ್‌ ಹೇಳಿಕೊಡುತ್ತಿದ್ದ ಜೆನ್-ಜಿ ಜನರೇಷನ್‌ನ ಸಂಬಂಧಗಳ ಬಗ್ಗೆ ಬಹಳ ಗಮನಕೊಟ್ಟು ಕೇಳುತ್ತಿದ್ದ ಭರ್ಜರಿ ಬ್ಯಾಚುಲರ್ಸ್ 2 ಕಾರ್ಯಕ್ರಮದ ತೀರ್ಪುಗಾರರಾದ ನಟ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್‌, ಈಗೀಗ ಸಾಕಮ್ಮ ಸಾಕು ನಿನ್ನ ಪಾಠ ಎನ್ನುತ್ತಿದ್ದು, ಸುಕೃತಾ ನಾಗ್‌ ಪೂಕಿ ಮ್ಯಾನ್ ವರ್ಷನ್‌ಗೆ ಕೊಟ್ಟ ವಿವರಣೆ ನೋಡಿ ರವಿಚಂದ್ರನ್ ಇವಳನ್ನು ಕಳುಹಿಸಿಬಿಡಿ ಎಂದಿದ್ದಾರೆ.

Sukrutha Nag Discusses Modern Relationships in Bharjari Bachelors 2

ರಕ್ಷಕ್ ಬುಲೆಟ್ ತಮ್ಮ ಮೆಂಟರ್‌ ರಮೋಲ ಅವರಿಗಾಗಿ ನಯ-ವಿನಯದಿಂದ ನಡೆದುಕೊಳ್ಳುತ್ತಾರೆ. ಇದನ್ನು ನೋಡಿದ ಸುಕೃತಾ 'ರಕ್ಷಕ್ ಈಗ ಜಂಟಲ್‌ಮೆನ್‌, ಹುಡುಗರ ಪೂಕಿ ವರ್ಷನ್' ಎಂದು ಹೇಳಿದ್ದಾರೆ. ಈ ವೇಳೆ ರಚಿತಾ ರಾಮ್‌ 'ನೀನು ಸುಮ್ಮನೆ ಕುಳಿತುಕೋ ಯಾವುದು ಇದು ಪೂಕಿ ಪದ' ಎಂದಿದ್ದಾರೆ.

ಈ ವೇಳೆ ರವಿಚಂದ್ರನ್ ಮಾತನಾಡಿದ್ದು, ಇವಳು ಇದ್ಯಾವುದೋ ಪೂಕಿ ವರ್ಷನ್ ಎನ್ನುವುದನ್ನು ಹಿಡಿದುಕೊಂಡು ಬಂದುಬಿಟ್ಟಳು. ಈ ವೇಳೆ ಸುಕೃತಾ ಪೂಕಿ ವರ್ಷನ್ ವಿವರಿಸಲು ಮುಂದಾಗಿದ್ದು, ರವಿಚಂದ್ರನ್ ಸಾಕಮ್ಮ, ನಿನ್ನ ಪೂಕಿ ವರ್ಷನೂ ಬೇಡ, ಯಾವುದೂ ಬೇಡ, ನಾವು ಇರುವ ವರ್ಷನೇ ನಮಗೆ ಸಾಕು. ನಿನ್ನ ವರ್ಷನ್‌ಗೆ ಬರುವುದೇ ಇಲ್ಲ ನಾವು. ಏ..ಕಳಸ್ರಯ್ಯ ಇವಳನ್ನು, ಇವಳು ಇಲ್ಲದೇ ಇರುವ ವರ್ಷನ್ ಮಾಡಿ ಹಾಕುತ್ತಾಳೆ ನಮ್ಮನ್ನು ಎಂದಿದ್ದಾರೆ.

Sukrutha Nag Discusses Modern Relationships in Bharjari Bachelors 2

ಜಂಟಲ್‌ಮೆನ್‌ ಹುಡುಗರಿಗೆ ಜಂಟಲ್‌ಮೆನ್‌ ಅಂತಾನೇ ಹೇಳಬಹುದು, ಅದೇನದು ಪೂಕಿ ಜಂಟಲ್‌ಮೆನ್‌ ಎನ್ನುವುದು, ಅವನು ಪೂಕಿ ಜಂಟಲ್‌ಮೆನ್‌ ಆದರೆ ನಾವೇನು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸುಕೃತಾ ಬಿದ್ದು ಬಿದ್ದು ನಕ್ಕಿದ್ದು, ಬೇರೆ ಏನೋ ಇರುವ ಹಾಗಿದೆ ಅದಕ್ಕೆ ಅಷ್ಟೊಂದು ನಗುತ್ತಿದ್ದೀಯಾ ಎಂದಿದ್ದಾರೆ. ಈ ವೇಳೆ ನಿರೂಪಕ ನಿರಂಜನ್‌ ದೇಶಪಾಂಡೆ ಕ್ರೇಜಿ ವರ್ಷನ್ ಆಫ್‌ ಜಂಟಲ್‌ಮೆನ್‌ ಎಂದಿದ್ದಾರೆ. ಈ ವೇಳೆ ಇವನೊಬ್ಬ ಎಂದು ಹೇಳಿರುವ ಪ್ರೋಮೋ ವಿಡಿಯೋ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+