Get Updates
Get notified of breaking news, exclusive insights, and must-see stories!

ರಾಜ ರಾಣಿ ರಿಯಾಲಿಟಿ ಶೋನಲ್ಲಿ ರೀಲ್ಸ್‌ ಜೋಡಿ:ಇವರ ಪರಿಚಯ ಇದೆಯಾ?

ಕನ್ನಡ ಕಿರುತೆರೆಯಲ್ಲಿ ಜನರ ಮನ ಗೆದ್ದಿದ್ದ ಜೋಡಿ ರಿಯಾಲಿಟಿ ಶೋಗಳಲ್ಲಿ ರಾಜಾ ರಾಣಿ ಸಖತ್‌ ಹಿಟ್‌ ಆಗಿತ್ತು. ರಾಜಾ ರಾಣಿ ಶೋನ ಮೊದಲ ಹಾಗೂ ಎರಡನೇ ಆವೃತ್ತಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ರಾಜಾ ರಾಣಿ ಶೋ ಆರಂಭವಾಗುತ್ತಿದ್ದು, ರಾಜಾ ರಾಣಿ ರೀಲೋಡೆಡ್ ಎಂದು ವಿಶೇಷವಾಗಿ ಹೆಸರಿಡಲಾಗಿದೆ.

ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳು ಸಖತ್‌ ವೈರಲ್‌ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಮತ್ತೆ ನಟಿ ಅನುಪಮಾ ಗೌಡ ನಿರೂಪಕಿಯಾಗಿದ್ದು, ಎಂದಿನಂತೆ ಸೃಜನ್ ಲೋಕೇಶ್, ಹಾಗೂ ಹಿರಿಯ ನಟಿ ತಾರಾ ಅನುರಾಧ ಜಡ್ಜ್ ಆಗಿದ್ದಾರೆ. ಆದರೆ ಈ ಬಾರಿಯ ವಿಶೇಷವೆಂದರೆ ನಟಿ ಅದಿತಿ ಪ್ರಭುದೇವ ಕೂಡ ರಾಜಾ ರಾಣಿ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದಾರೆ.

Socila Media Viral Couple Participated In Raja Rani Reality Show

ಜೂನ್ 8ರಿಂದ ಶನಿವಾರ - ಭಾನುವಾರ ರಾತ್ರಿ 7.30ಗೆ ಈ ಶೋ ಪ್ರಸಾರ ಆಗಲಿದ್ದು, ಜೋಡಿಗಳ ಪರಿಚಯದ ಪ್ರೋಮೋಗಳು ವೈರಲ್‌ ಆಗುತ್ತಿದೆ. ಈ ಬಾರಿ ರಾಜಾ ರಾಣಿಯಲ್ಲಿ ರೀಲ್ಸ್ ಜೋಡಿ ಭಾಗಿಯಾಗುತ್ತಿದ್ದಾರೆ. ಹಳೆಯ ಕನ್ನಡ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿರುವ ವೈಲಾ-ಗೋವಿಂದ ರಾಜ್‌ ದಂಪತಿ ಮಸ್ತ್ ಡ್ಯಾನ್ಸ್ ಮೂಲಕ ರಾಜಾ ರಾಣಿ ಶೋಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

43 ವಯಸ್ಸಿನ ವೈಲಾ ಹಾಗೂ 51 ವಯಸ್ಸಿನ ಗೋವಿಂದ ರಾಜ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಹಿಟ್‌ ಜೋಡಿ. ಇದೀಗ ಇವರು ರಾಜಾ ರಾಣಿಗೂ ಎಂಟ್ರಿ ಕೊಟ್ಟಿದ್ದು, ಗ್ರಾಂಡ್‌ ಓಪನಿಂಗ್‌ ಸಂಚಿಕೆಯಲ್ಲಿ ಜೀವ ಹೂವಾಗಿದೆ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಜೊತೆಗೆ ಈ ವಯಸ್ಸಿಗೆ ನಮಗೆ ಈ ವೇದಿಕೆ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದಾರೆ.

Socila Media Viral Couple Participated In Raja Rani Reality Show

ಇನ್ನು ಚಿಕ್ಕ ಚಿಕ್ಕ ರೀಲ್ಸ್‌ ಮಾಡಿಕೊಂಡಿದ್ದೇವು. ಇಲ್ಲಿ ತನಕ ಬರುತ್ತೇವೆ ಅಂತಾ ಅಂದುಕೊಂಡೇ ಇರಲಿಲ್ಲ ಎಂದು ವೈಲಾ-ಗೋವಿಂದ ರಾಜ್‌ ದಂಪತಿ ಕಣ್ಣೀರು ಹಾಕಿದ್ದಾರೆ. ಈ ಮುದ್ದಾದ ಜೋಡಿಗೆ ಜಡ್ಜ್‌ಗಳು ಕೂಡ ಫಿದಾ ಆಗಿದ್ದು, ನಿಮ್ಮಿಬ್ಬರನ್ನು ನೋಡಿ ತುಂಬಾ ಖುಷಿ ಆಯ್ತು ಎಂದಿದ್ದಾರೆ. ಇನ್ನು ನಿರೂಪಕಿ ಅನುಪಮ ಅವರ ಈ ವಯಸ್ಸಲ್ಲೂ ಇಷ್ಟು ರೊಮ್ಯಾಂಟಿಕ್ ಹೇಗೆ ಎಂಬ ಪ್ರಶ್ನೆಗೆ ಗೋವಿಂದ ರಾಜ್‌ ಅವರು ಹುಣಸೆ ಮರ ಮುಪ್ಪಾದರೂ ಹುಳಿ ಹೋಗುತ್ತದೆಯೇ ಎಂದು ತಮಾಷೆ ಮಾಡಿದ್ದಾರೆ. ಸದ್ಯ ವೈಲಾ-ಗೋವಿಂದ ರಾಜ್‌ ದಂಪತಿ ಪ್ರೋಮೋ ವೈರಲ್‌ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+