Bigg Boss: ಮುಂದಿನ ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಜಾಗಕ್ಕೆ ಬರ್ತಿರೋದು ಯಾರು ಗೊತ್ತಾ?

ಬಿಗ್‌ಬಾಸ್‌ ಸೀಸನ್‌-11 ಗ್ರ್ಯಾಂಡ್‌ ಫಿನಾಲೆ ಇತ್ತೀಚೆಗೆ ಮುಗಿದಿದೆ. ಸತತವಾಗಿ ಬಿಗ್‌ಬಾಸ್‌ ನಿರೂಪಣೆ ಮಾಡಿಕೊಂಡು ಬಂದಿದ್ದ ನಟ ಕಿಚ್ಚ ಸುದೀಪ್‌ ಮುಂದಿನ ಸೀಸನ್‌ಗೆ ಬರುತ್ತಿಲ್ಲ. ಇದನ್ನು ಖುದ್ದು ಅವರೇ ಖಚಿತಪಡಿಸಿದ್ದಾರೆ. ಹೀಗಾಗಿ ಮುಂದಿನ ಸೀಸನ್‌ ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ಬದಲಿಗೆ ಇನ್ಯಾರು ಬರಲಿದ್ದಾರೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಲೀಡ್‌ ನಟರ ಹೆಸರುಗಳಂತೂ ಈ ವಿಚಾರದಲ್ಲಿ ಓಡಾಡುತ್ತಿವೆ. ಸುದೀಪ್‌ ಅವರ ಜಾಗಕ್ಕೆ ಯಾರು ಬರ್ತಾರೋ ಅನ್ನೋ ಸುಳಿವು ಇಲ್ಲಿದೆ..

ಬಿಗ್‌ಬಾಸ್‌ ಕಾರ್ಯಕ್ರಮವು ಹಲವು ಕಾರಣಗಳಿಂದ ಜನಮನ್ನಣೆ ಗಳಿಸಿರುವುದು ಗೊತ್ತಿರುವ ವಿಚಾರ. ಇನ್ನು ಸುದೀಪ್‌ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂಬ ಕಾರಣದಿಂದಲೂ ಬಿಗ್‌ಬಾಸ್‌ ಮನೆಮಾತಾಗಿರುವುದೂ ಸತ್ಯ. ಆದರೆ ಸುದೀಪ್‌ ಅವರು ಬಿಗ್‌ಬಾಸ್‌ ನಿರೂಪಣೆಗೆ ಗುಡ್‌ಬೈ ಹೇಳಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಕಿಚ್ಚನಿಲ್ಲದ ಬಿಗ್‌ಬಾಸ್‌ ಏನ್‌ ಮಜಾ ಇರುತ್ತೆ ಗುರೂ.. ಎನ್ನುವ ಮಾತುಗಳೂ ಕೇಳಿಬರುತ್ತಿವೆ.

Six Actors In Talks To Replace Sudeep As Kannada Bigg Boss Host

ಮತ್ತೊಂದೆಡೆ ಕಿಚ್ಚನಷ್ಟು ಸೊಗಸಾಗಿ ಬಿಗ್‌ಬಾಸ್‌ ಕಾರ್ಯಕ್ರಮ ನಡೆಸಿಕೊಡುವ ಸಾಮರ್ಥ್ಯ ಯಾವ ನಟರಿಗಿದೆ? ಎಂಬ ಕುತೂಹಲ ಕೂಡ ಎಲ್ಲರಲ್ಲಿದೆ. ಸದ್ಯ ಈಗಷ್ಟೇ ಗ್ರ್ಯಾಂಡ್‌ ಫಿನಾಲೆ ಮುಗಿದಿರುವುದರಿಂದ ಮುಂದಿನ ಸೀಸನ್‌ವರೆಗೆ ಈ ಕುತೂಹಲ ಹಾಗೇ ಇರುವ ಸಾಧ್ಯತೆ ಇದೆ. ವಾಹಿನಿ ಕೂಡ ಮುಂದಿನ ಸೀಸನ್‌ ಯಾರು ನಡೆಸಿಕೊಡ್ತಾರೆ ಎಂದು ಇನ್ನೂ ರಿವೀಲ್‌ ಮಾಡಿಲ್ಲ.

ಆದರೆ, ಸುದೀಪ್‌ ಅವರ ಬದಲಿಗೆ ಯಾರು ಬಿಗ್‌ಬಾಸ್‌ ಹೋಸ್ಟ್‌ ಮಾಡ್ತಾರೆ ಎಂಬ ಪ್ರಶ್ನೆಗೆ ಹಲವರ ಹೆಸರುಗಳು ಚಾಲ್ತಿಯಲ್ಲಿವೆ. ಕನ್ನಡ ಚಿತ್ರರಂಗದ ಆರು ಪ್ರಮುಖ ನಟರ ಹೆಸರುಗಳು ಬಿಗ್‌ಬಾಸ್‌ ನಿರೂಪಕರಾಗುವ ರೇಸ್‌ಗೆ ಬಂದಿವೆ. ನಟ ರಮೇಶ್‌ ಅರವಿಂದ್‌, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ರಾಕಿಂಗ್‌ ಸ್ಟಾರ್‌ ಯಶ್‌, ನಟ ರಿಷಬ್‌ ಶೆಟ್ಟಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹೆಸರು ಸದ್ಯ ಮುನ್ನೆಲೆಗೆ ಬಂದಿವೆ.

Six Actors In Talks To Replace Sudeep As Kannada Bigg Boss Host

ರಮೇಶ್‌ ಅರವಿಂದ್‌, ನಟ ಗಣೇಶ್‌ ಹಾಗೂ ಶಿವಣ್ಣ ಅವರಿಗೆಲ್ಲ ಈಗಾಗಲೇ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿರುವ ಅನುಭವವಿದೆ. ಹಾಗಾಗಿ ಪ್ರಮುಖವಾಗಿ ಇವರ ಹೆಸರುಗಳೇ ಹೆಚ್ಚಾಗಿ ಹೇಳಿ ಬರುತ್ತಿವೆ. ಇನ್ನು ರಾಕಿಂಗ್‌ ಸ್ಟಾರ್‌ ಯಶ್‌ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರು ಬಿಗ್‌ಬಾಸ್‌ ಹೋಸ್ಟ್‌ ಮಾಡ್ತಾರಾ ಅನ್ನೋದು ಅನುಮಾನ ಎನ್ನಲಾಗುತ್ತಿದೆ. ಮೊದಲಿನಿಂದಲೂ ರಿಷಬ್‌ ಶೆಟ್ಟಿ ಅವರ ಹೆಸರು ಕೂಡ ಬಿಗ್‌ಬಾಸ್‌ ನಿರೂಪಣೆ ವಿಚಾರದಲ್ಲಿ ಸದ್ದು ಮಾಡುತ್ತಲೇ ಇದೆ.

ಈ ಆರು ಮಂದಿಯಲ್ಲೇ ಒಬ್ಬರು ಬಿಗ್‌ಬಾಸ್‌ ನಿರೂಪಣೆ ಮಾಡೋದಂತೂ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಮುಂದಿನ ಸೀಸನ್‌ ಶುರುವಾಗುವ ತನಕ ವಾಹಿನಿ ಕೂಡ ಹೊಸ ನಿರೂಪಕರ ಹೆಸರನ್ನು ರಿವೀಲ್‌ ಮಾಡುವುದಿಲ್ಲ. ಹಾಗಾಗಿ ಅಧಿಕೃತವಾಗಿ ವಾಹಿನಿಯೇ ಮುಂದಿನ ಬಿಗ್‌ಬಾಸ್‌ ಸೀಸನ್‌ನ ಹೊಸ ನಿರೂಪಕರನ್ನು ಪರಿಚಯಿಸಲಿದೆ. ಆದರೆ, ಸದ್ಯ ಈ ರೇಸ್‌ನಲ್ಲಿ ಈ ಎಲ್ಲರ ನಟರ ಹೆಸರುಗಳಂತೂ ಚಾಲ್ತಿಯಲ್ಲಿದೆ. ಆದರೆ, ಇವರಲ್ಲಿ ಯಾರಿಗೆ ಒಲಿಯಲಿದೆ ಬಿಗ್‌ಬಾಸ್‌ ಕಾರ್ಯಕ್ರಮ ನಡೆಸಿಕೊಡುವ ಅದೃಷ್ಟ ಎನ್ನುವ ಕುತೂಹಲವಂತೂ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+