Sonu Nigam: ಸೋನು ನಿಗಮ್‌ಗೆ ಗಂಭೀರ ಆರೋಗ್ಯ ಸಮಸ್ಯೆ: ಆಸ್ಪತ್ರೆಗೆ ದಾಖಲು!
Sonu Nigam: ಸಿಂಗರ್ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಮುಂಗಾರು ಮಳೆ ಸಿನಿಮಾದ ನಂತರದ ದಿನಗಳಲ್ಲಿ ಸೋನು ನಿಗಮ್ ಅವರು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಅವರಿಗೆ ಇರುವ ಅಭಿಮಾನದ ಬಗ್ಗೆ ಕನ್ನಡಿಗರಲ್ಲೂ ಅಪಾರ ಗೌರವ ಹಾಗೂ ಹೆಮ್ಮೆ ಇದೆ. ಒಳ್ಳೆಯ ಹಾಡುಗಳ ಮೂಲಕ ಹಾಗೂ ಸಿಂಪ್ಲಿಸಿಟಿಯಿಂದ ಜನರ ಮನಸ್ಸಿಗೆ ಹತ್ತಿರುವಾಗಿದ್ದಾರೆ. ಸೋನು ನಿಗಮ್ ಅವರು ಇದೀಗ ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಸೋನು ನಿಗಮ್ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟ ಖ್ಯಾತ ಗಾಯಕ. ಸೋನು ಅವರು ಸಮಾಜದಲ್ಲಿ ನಡೆಯುವ ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಚರ್ಚೆಗೆ ಗುರಿಯಾಗಿದ್ದು ಸಹ ಇದೆ.
ಆದರೆ ಜನ ಇವರ ಹಾಡುಗಳಿಗೆ ಫಿದಾ ಆಗಿರುವುದರಿಂದ ಆ ವಿಚಾರಗಳು ಹೆಚ್ಚು ಚರ್ಚೆಯಾಗಿಲ್ಲ. ಅಲ್ಲದೆ ಖ್ಯಾತ ಗಾಯಕರಾದರೂ ನಯ - ವಿನಯದಿಂದ ನಡೆದುಕೊಳ್ಳುವ ಅವರ ನಡೆ ಎಲ್ಲರಿಗೂ ಇಷ್ಟ. ಎಲ್ಲರಿಗೂ ಇಷ್ಟವಾಗುವ ಹಾಗೂ ಎಲ್ಲರೂ ಮೆಚ್ಚಿಕೊಳ್ಳುವ ಸೋನು ನಿಗಮ್ ಅವರು ಇದೀಗ ಬ್ಯಾಡ್‌ನ್ಯೂಸ್‌ವೊಂದನ್ನು ಕೊಟ್ಟಿದ್ದಾರೆ.
ಹೌದು ಸೋನು ನಿಗಮ್ ಅವರು ಗಂಭೀರ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ದೊಡ್ಡ ಪರ್ಫಾರ್ಮೆನ್ಸ್ ಶೋನಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋದ ಮೂಲಕ ಅವರಿಗೆ ಎದುರಾದ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಅವರು ಹಾಡುವಾಗಲೇ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಸೋನು ನಿಗಮ್‌ಗೆ ಆರೋಗ್ಯ ಸಮಸ್ಯೆ!
ಗಾಯಕ ಸೋನು ನಿಗಮ್ ಅವರಿಗೆ ತೀವ್ರ ಬೆನ್ನು ಹುರಿ ಕಾಣಿಸಿಕೊಂಡಿದೆ. ಅವರು ನಡೆದಾಡಲು ಸಹ ಕಷ್ಟಪಟ್ಟಿದ್ದಾರೆ. ಸೋನು ನಿಗಮ್ ಅವರಿಗೆ ಸ್ಥಳೀಯರು ಹಾಗೂ ಸಹಾಯಕ ಸಿಬ್ಬಂದಿ ನೆರವಾಗಿದ್ದಾರೆ. ಶೋನಲ್ಲಿ ಹಾಡು ಹಾಡುವಾಗಲೇ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ಹಾಡುವಾಗ ಯಾರೋ ಬೆನ್ನಿಗೆ ಸೂಜಿಯಿಂದ ಚುಚ್ಚಿದ ಅನುಭವ ಆಗಿರುವುದಾಗಿಯೂ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಅತಿಯಾದ ಬೆನ್ನು ನೋವಿನಿಂದ ಅವರು ಶೋ ಸ್ಟೇಜ್‌ನ ಹಿಂಭಾಗದಲ್ಲಿ ನಡೆಯುವುದಕ್ಕೂ ಕಷ್ಟಪಟ್ಟಿರುವ ವಿಡಿಯೋ ವೈರಲ್ ಆಗಿದೆ.
ಸರಸ್ವತಿ ಕೈಹಿಡಿದಳು: ಸರಸ್ವತಿ ಕೈಹಿಡಿದಳು ಎಂದು ಸೋನು ನಿಗಮ್ ಅವರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಬೆನ್ನು ಹುರಿಗೆ ಅವರು ಪರದಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಜನ ಇದನ್ನು ನೋಡಿ ಶಾಕ್ ಆಗಿದ್ದಾರೆ. ಮಧುರ ಹಾಗೂ ಸದಾ ಮೆಲುಕು ಹಾಕುವ ಹಾಡುಗಳನ್ನು ಸೋನು ನಿಗಮ್ ಅವರು ಹಾಡಿದ್ದಾರೆ. ಅವರಿಗೆ ಕನ್ನಡದಲ್ಲೂ ಅಪಾರ ಪ್ರಮಾಣದ ಅಭಿಮಾನಿಗಳು ಇದ್ದಾರೆ.
ಇನ್ನು ಸೋನು ನಿಗಮ್ ಅವರ ಆರೋಗ್ಯ ಸುಧಾರಿಸಲಿ ಅವರು ಬೇಗ ಮೊದಲಿನಂತೆ ಆಗಲಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸೋನು ನಿಗಮ್ ಹಾಗೂ ಕನ್ನಡಿಗರ ನಡುವೆ ಅವಿನಾಭಾವ ಸಂಬಂಧವಿದೆ. ಸೋನು ನಿಗಮ್ ಅವರಿಗೆ ಕನ್ನಡಿಗರು ಹಾಗೂ ಕನ್ನಡ ಹಾಡಿನ ಬಗ್ಗೆ ಅವರಿಗೆ ಅಪಾರ ಅಭಿಮಾನ ಇದೆ. ಇದೇ ಕಾರಣಕ್ಕೆ ಅವರು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.












Click it and Unblock the Notifications