ಅಪ್ಪು ಸಾವಿನ ವಿಚಾರ ಸೋದರತ್ತೆ ನಾಗಮ್ಮಗೆ ಗೊತ್ತಿಲ್ಲ ಯಾಕೆ: ಶಿವಣ್ಣ, ಗೀತಕ್ಕ ಹೇಳಿದ್ದೇನು?

ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಮೆಚ್ಚಿನ ಅಪ್ಪು, ಕನ್ನಡ ಚಿತ್ರರಂಗದ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಅಗಲಿಕೆಯ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಕೂಡ ಅವರ ಸೋದರತ್ತೆ ನಾಗಮ್ಮ ಅವರಿಗೆ ಮಾತ್ರ ಈ ವಿಚಾರ ಗೊತ್ತಿಲ್ಲ. 93 ವರ್ಷ ನಾಗಮ್ಮ ಅವರಿಗೆ ಈ ಆಘಾತಕಾರಿ ವಿಷಯ ಹೇಳುವುದು ಬೇಡ ಎಂದು ನಿರ್ಧರಿಸಿರುವ ಕುಟುಂಬಸ್ಥರು ಕಳೆದ ಮೂರು ವರ್ಷಗಳಿಂದ ಈ ಗುಟ್ಟನ್ನು ಕಾಪಾಡಿಕೊಂಡು ಬಂದಿದ್ದಾರೆ.

ನಾಗಮ್ಮ ಇಂದಿಗೂ ಅಪ್ಪು ನಮ್ಮ ಜೊತೆಯಲ್ಲೇ ಇದ್ದಾರೆ ಎಂದುಕೊಂಡು ಇತ್ತೀಚಿಗೆ ನಡೆದ ಅವರ ಐವತ್ತನೇ ವರ್ಷದ ಹುಟ್ಟುಹಬ್ಬಕ್ಕೆ ವಿಡಿಯೋ ಮೂಲಕ ವಿಶೇಷವಾಗಿ ಶುಭಾಶಯ ಕೋರಿದ್ದರು. 'ಅಪ್ಪು ಚೆನ್ನಾಗಿದಿಯಾ ಮಗನೇ, ನೀನು ಇನ್ನು ಮಗು ಅಂದುಕೊಂಡಿದ್ದೇನೆ ನಾನು. ಒಂದು ಸಾರಿ ಬಂದು ನನ್ನ ನೋಡಿಕೊಂಡು ಹೋಗು ಕಂದಾ. ನಿನ್ನನ್ನು ನೋಡಿ ಬಿಡುತ್ತೇನೆ' ಎಂದಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು.

Shivarajkumar Talks About Why doesn t Nagamma know about Appu death

ನಾಗಮ್ಮ ಅವರಿಗೆ ಅಪ್ಪು ಇಲ್ಲದ ವಿಚಾರ ಗೊತ್ತಿಲ್ಲ ಎನ್ನುವುದರ ಬಗ್ಗೆ ನಟ ಶಿವ ರಾಜ್‌ಕುಮಾರ್ ಮಾತನಾಡಿದ್ದು, 'ಅವರಿಗೆ 93 ವರ್ಷ. ಹೀಗಾಗಿ ಅವರಿಗೆ ಅಪ್ಪು ಇಲ್ಲ ಎನ್ನುವ ವಿಚಾರ ಗೊತ್ತಾಗುವುದೂ ಕೂಡ ಬೇಡ. ಅಪ್ಪು ಹೋಗಿ ಮೂರಿಂದ ನಾಲ್ಕು ವರ್ಷ ಆಗುತ್ತಾ ಬಂತು ಅವರಿಗೆ ಇನ್ನೂ ಗೊತ್ತಾಗಿಲ್ಲ. ಅವರಿಗೆ ಗೊತ್ತಾಗುವುದು ಬೇಡ, ಅವರು ನಮಗೆ ಆಶೀರ್ವಾದ ಮಾಡುತ್ತಲೇ ಇರಬೇಕು. ಅವರಿಗೆ ಗೊತ್ತಾದರೆ ತುಂಬಾ ಕಷ್ಟ ಇದೆ' ಎಂದರು.

'ನಾವು ಅಲ್ಲಿಗೆ ಹೋದಾಗ ಆ ವಿಷಯ ಬರುವುದೇ ಇಲ್ಲ. ನನಗೂ ಒಂದೊಂದು ಸಲ ಅನಿಸುತ್ತದೆ ಅವರಿಗೆ ಈ ವಿಷಯ ಗೊತ್ತಿದೆಯಾ ಅಂತಾ. ಮನೆಯವರು ನನಗೆ ಗೊತ್ತಿಲ್ಲ ಅಂತಾನೇ ಅಂದುಕೊಳ್ಳಲಿ ಅಂತಾ ಹಾಗೇ ಇದ್ದಾರಾ ಅಂತಾನೂ ಅನಿಸುತ್ತದೆ. ಅವರಿಗೆ ಗೊತ್ತಿದ್ದರೂ ಇರಬಹುದು, ಇಲ್ಲ ಅಂದರೆ ಇಲ್ಲ. ಅವರಿಗೆ ನಾನು ಅಪ್ಪು ಇಲ್ಲದನ್ನು ನೋಡಿಲ್ಲ, ನನ್ನ ಪಾಲಿಗೆ ಇದ್ದಾನೆ ಎನ್ನುವ ಭಾವನೆ ಇದ್ದರೂ ಇರಬಹುದು' ಎಂದು ಶಿವಣ್ಣ ಹೇಳಿದ್ದಾರೆ.

Shivarajkumar Talks About Why doesn t Nagamma know about Appu death

ಇನ್ನು ಗೀತಾ ಶಿವ ರಾಜ್‌ಕುಮಾರ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು, 'ಅವರಿಗೆ ಎರಡು ಮೂರು ವರ್ಷದಿಂದ ತುಂಬಾನೇ ಹುಷಾರಿಲ್ಲ. ಅವರಿಗೆ ಅಪ್ಪು ಇಲ್ಲದ ವಿಷಯ ಗೊತ್ತಾದರೆ ತಡೆಯುವ ಶಕ್ತಿ ಇದೆಯೋ ಇಲ್ಲವೋ ಅಂತಾ ಮನೆಯವರು ಹೇಳುವುದೇ ಬೇಡ ಅಂತಾ ನಿರ್ಧರಿಸಿದರು' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+