Shiva Rajkumar: ಡಾಲಿಯ ಹೊಸ ಸಿನಿಮಾದಲ್ಲಿ ಅಣ್ಣಾವ್ರ ಗೆಟಪ್‌ನಲ್ಲಿ ಬಂದ ಶಿವಣ್ಣ
ಟಗರು ಸಿನಿಮಾದಲ್ಲಿ ನಟ ಶಿವಣ್ಣ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಮತ್ತೊಂದು ಸಿನಿಮಾದಲ್ಲಿ ಇಬ್ಬರೂ ನಟರು ಜೊತೆಯಾಗಿದ್ದಾರೆ. ಹೇಮಂತ್ ಎಂ.ರಾವ್ ನಿರ್ದೇಶನದ 666 Operation Dream Theatre ಸಿನಿಮಾ ಸೆಟ್ಟೇರಿದ್ದು, ಇದರಲ್ಲಿ ಡಾಲಿ-ಶಿವಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದಲ್ಲಿ ಡಾಲಿಯ ಲುಕ್ ರಿವೀಲ್ ಆಗಿತ್ತು. ಇಂದು ಶಿವರಾಜ್ ಕುಮಾರ್ ಅವರ ಲುಕ್ ಕೂಡ ರಿವೀಲ್ ಆಗಿದ್ದು, ಚಿತ್ರತಂಡ ಪೋಸ್ಟರ್ ಹಂಚಿಕೊಂಡಿದೆ. ಇದು ಥೇಟ್ ಡಾ.ರಾಜ್‌ಕುಮಾರ್ ಅವರ ಗೆಟಪ್ ಹೋಲುತ್ತಿರುವುದು ಗಮನ ಸೆಳೆದಿದೆ.
ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 'ಟಗರು' ನಂತರ ಈ ಜೋಡಿ ಮತ್ತೆ ಒಂದಾಗಿ ಬರುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. 666 Operation Dream Theatre ಚಿತ್ರವು ಪ್ರೇಕ್ಷಕರನ್ನು 1970ರ ದಶಕದ ಸ್ಟೈಲಿಷ್ ಸ್ಪೈ-ಥ್ರಿಲ್ಲರ್ ಜಗತ್ತಿಗೆ ಕರೆದೊಯ್ಯುತ್ತದೆ. ಈ ಚಿತ್ರದಲ್ಲಿ ಅಪರೂಪದ ರೆಟ್ರೋ ಲುಕ್ ಮತ್ತು ಆಕ್ಷನ್-ಕ್ರೈಂ ಕಥಾಹಂದರವಿದೆ. ಈ ಚಿತ್ರದ ಅನಿಮೇಟೆಡ್ ಟೈಟಲ್ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಧನಂಜಯ್ ಅವರ ಸ್ಟೈಲಿಷ್ ಫಸ್ಟ್ ಲುಕ್ ಪೋಸ್ಟರ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ.

ಡಾ.ರಾಜ್‌ಕುಮಾರ್ ನಟಿಸಿದ್ದ ಆಪರೇಷನ್ ಡೈಮೆಂಡ್ ರಾಕೆಟ್ ಸಿನಿಮಾವನ್ನೇ ಇದು ಹೋಲುತ್ತಿದ್ದು, ಶಿವಣ್ಣನ ಲುಕ್ ಅಣ್ಣಾವ್ರನ್ನ ನೆನಪಿಸುತ್ತಿದೆ. ಈ ಫೋಟೋವನ್ನು ಶಿವಣ್ಣ ಹಾಗೂ ಡಾಲಿ ಶೇರ್ ಮಾಡಿಕೊಂಡಿದ್ದಾರೆ. ಡ್ರೀಮ್ ಥಿಯೇಟರ್‌ಗೆ ಒಬ್ಬನೇ ರಾಜ! ಫಸ್ಟ್ ಲುಕ್ ಅನಾವರಣ 666 ಆಪರೇಷನ್ ಡ್ರೀಮ್ ಥಿಯೇಟರ್‌ನಿಂದ ನಮ್ಮ ಶಿವಣ್ಣ ಎಂದು ಡಾಲಿ ಬರೆದುಕೊಂಡಿದ್ದಾರೆ.
ಚಿತ್ರವು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಮತ್ತಷ್ಟು ತೆಲುಗು ನಟರನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೇಮಂತ್ ರಾವ್, ಶಿವರಾಜ್ ಕುಮಾರ್ ಮತ್ತು ಧನಂಜಯ್ ಕಾಂಬಿನೇಷನ್ ಜೊತೆಗೆ ಈ ಚಿತ್ರವನ್ನು 2025ರ ಅತ್ಯಂತ ನಿರೀಕ್ಷಿತ ಕನ್ನಡ-ತೆಲುಗು ಥ್ರಿಲ್ಲರ್ ಎನ್ನಲಾಗುತ್ತಿದೆ.
ವೈಶಾಖ್ ಜೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದು ರೆಟ್ರೋ ಸ್ಪೈ ಥ್ರಿಲ್ಲರ್ ಕಥೆ ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಅವರ ಅಭಿನಯ, ಹೇಮಂತ್ ರಾವ್ ಅವರ ನಿರ್ದೇಶನ ಇರುವುದರಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಡಾಲಿ ಹಾಗೂ ಶಿವರಾಜ್‌ಕುಮಾರ್ ಅವರಿಗೆ ಟಾಲಿವುಡ್‌ನಲ್ಲೂ ಬೇಡಿಕೆ ಇರುವುದರಿಂದ ತೆಲುಗು ಭಾಷೆಯಲ್ಲೂ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಟಗರು ಜೋಡಿ ಮತ್ತೆ ಮೋಡಿ ಮಾಡುವುದು ಫಿಕ್ಸ್ ಎನ್ನುತ್ತಿದ್ದಾರೆ ಶಿವಣ್ಣ-ಡಾಲಿ ಫ್ಯಾನ್ಸ್.












Click it and Unblock the Notifications