ಬುರ್ಜ್ ಖಲೀಫಾದ ಮೇಲೆ ಮಿಂಚಿದ ಶಾರುಖ್ ಖಾನ್: ಹೇಗಿದೆ 'ಜವಾನ್' ಟ್ರೈಲರ್?
ಪಠಾಣ್ ಚಿತ್ರದ ಬಳಿಕ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜವಾನ್' ತೆರೆಕಾಣಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ನಿನ್ನೆ(ಆಗಸ್ಟ್ 31) 'ಜವಾನ್' ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದ ಮೇಲೆ ಬಹುನಿರೀಕ್ಷಿತ ಸಿನಿಮಾ 'ಜವಾನ್' ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.
Of Justice & A Jawan.
— Shah Rukh Khan (@iamsrk) August 31, 2023
Of Women & their Vengeance.
Of a Mother & A Son.
And of course, a lot of Fun!!!
Ready Ahhh!!!#JawanTrailer out now! #Jawan releasing worldwide on 7th September, 2023 in Hindi, Tamil & Telugu. pic.twitter.com/WwU95DJcK2
ಈ ಹಿಂದೆ ತಿಳಿಸಿದಂತೆ ಶಾರುಖ್ ಖಾನ್ ಆಗಸ್ಟ್ 31ರ ರಾತ್ರಿ ದುಬೈಗೆ ಆಗಮಿಸಿ 'ಜವಾನ್' ಟ್ರೈಲರ್ ಬಿಡುಗಡೆಯ ಸಂಭ್ರಮವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿದರು. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡದಲ್ಲಿ 'ಜವಾನ್' ಲುಕ್‌ನಲ್ಲಿ ಶಾರುಖ್ ಖಾನ್ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

ಗಗನಚುಂಬಿ ಕಟ್ಟಡದ ಮೇಲೆ ಟ್ರೈಲರ್ ಲಾಂಚ್ ಆಗುತ್ತಿದ್ದಂತೆ ಚಿತ್ರತಂಡದ ಹಾಗೂ ಶಾರುಖ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನು ಈ ಹಿಂದೆ ಶಾರುಖ್ ಖಾನ್ 'ನಿಮ್ಮೊಂದಿಗೆ 'ಜವಾನ್' ಆಚರಿಸಲು ನಾನು ಆಗಸ್ಟ್ 31 ರಂದು ರಾತ್ರಿ 9 ಗಂಟೆಗೆ ಬುರ್ಜ್ ಖಲೀಫಾಗೆ ಬರುತ್ತಿದ್ದೇನೆ' ಎಂದು ತಿಳಿಸಿದ್ದರು. ಹೀಗಾಗಿ ಸಾವಿರಾರು ಅಭಿಮಾನಿಗಳು 'ಜವಾನ್' ಟ್ರೈಲರ್ ಬಿಡುಗಡೆಗೆ ಆಗಮಿಸಿದ್ದರು. ಅಲ್ಲದೇ ಬಾಲಿವುಡ್ ಕಿಂಗ್ ಹೇಳಿದಂತೆ ಅಭಿಮಾನಿಗಳು ಕೆಂಪು ಬಣ್ಣದ ಬಟ್ಟೆ ಧರಿಸಿ ಬಂದಿದ್ದರು.
'ಜವಾನ್' ಟ್ರೈಲರ್ ಇದೀಗ ಯುಟ್ಯೂಬ್‌ನಲ್ಲಿ ಟ್ರೆಂಡ್‌ನತ್ತ ಸಾಗುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ದುಪ್ಪಟ್ಟಾಗಿದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶಾರುಖ್ ಖಾನ್ ಡೈಲಾಗ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾ ಬಿಡುಗಡೆಯಾದ ಮೇಲೆ ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆಗಳ ಅಬ್ಬರ ಜೋರಾಗುವುದರಲ್ಲಿ ಎರಡು ಮಾತಿಲ್ಲ.

ಶಾರುಖ್ ಖಾನ್ ಅವರ 2023ರ ಎರಡನೇ ಚಿತ್ರ ಜವಾನ್ ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ತಮಿಳು ನಿರ್ದೇಶಕ ಅಟ್ಲಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್ ಮೂಲಕವೇ ಸಿನಿಪ್ರಿಯರಿಗೆ ಕಿಕ್ ಏರಿಸಿರುವ ಜವಾನ್ ಚಿತ್ರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.











Click it and Unblock the Notifications