ತೆಲುಗಿನಲ್ಲಿ ಪ್ರತಿಯೊಬ್ಬ ಕಲಾವಿದರನ್ನು ಕೂಡ ಗುರುತಿಸುತ್ತಾರೆ- ನಟಿ ನಿಶಾ ರವಿಕೃಷ್ಣನ್
ಬೆಂಗಳೂರು, ಆಗಸ್ಟ್ 28: ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಅಮೂಲ್ಯ ಪಾತ್ರದಿಂದ ಜನಪ್ರಿಯತೆ ಪಡೆದಿದ್ದ ನಿಶಾ ರವಿಕೃಷ್ಣನ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಸದ್ಯ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿಶಾ ತೆಲುಗು ಕಿರುತೆರೆಯಲ್ಲೂ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯ ಧಾರವಾಹಿಗಳಲ್ಲಿ ನಟಿಸುತ್ತಿರುವ ಅವರು, ತೆಲುಗಿನಲ್ಲಿ ತಮ್ಮನ್ನು ಹೇಗೆ ಜನ ಒಪ್ಪಿಕೊಂಡರು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ನಿಶಾ ರವಿಕೃಷ್ಣನ್, 'ಇಲ್ಲಿ ಹೇಗೆ ಗಟ್ಟಿಮೇಳದ ಅಮೂಲ್ಯ ಆಗಿ ಗುರುತಿಸುತ್ತಿದ್ದರೋ, ತೆಲುಗಿನಲ್ಲಿ ಕೂಡ ಜನ ಅಷ್ಟೇ ಗುರುತಿಸುತ್ತಾರೆ. ಅಮ್ಮಾಯಿಗಾರುಯಿಂದ ಜನ ನನ್ನನ್ನು ತುಂಬಾ ಗುರುತಿಸುತ್ತಾರೆ. ಎಲ್ಲೇ ಹೋದರೂ ಅಮ್ಮಾಯಿಗಾರು ಅಂತಲೇ ಫೇಮಸ್ ಆಗಿದೆ. ಆ ರೀತಿಯ ಗುರುತಿಸುವಿಕೆ ನನಗೆ ತೆಲುಗಿನ ಕಿರುತೆರೆಯಲ್ಲಿ ಸಿಕ್ಕಿದೆ' ಎಂದರು.

'ಪ್ರತಿಯೊಬ್ಬ ಕಲಾವಿದರನ್ನು ಕೂಡ ಅಲ್ಲಿ ಗುರುತಿಸುತ್ತಾರೆ. ಇಲ್ಲಿ ಸಿಗುವ ಪ್ರೀತಿಯನ್ನೇ ಅಲ್ಲಿನ ಜನರು ನೀಡುತ್ತಿದ್ದಾರೆ. ತುಂಬಾ ಖುಷಿಯಾಗುತ್ತದೆ. ಇದು ಇಂಥರಾ ವಿಭಿನ್ನವಾದ ಅನುಭವ. ಕನ್ನಡ ಹಾಗೂ ತೆಲುಗು ಎರಡೂ ಧಾರಾವಾಹಿಗಳನ್ನು ಎಂಜಾಯ್ ಮಾಡುತ್ತಾ ಮಾಡುತ್ತಿದ್ದೇನೆ. ಇನ್ನು ಹೆಚ್ಚಿನ ಭಾಷೆಯಲ್ಲಿ ನಟನೆ ಮಾಡಬೇಕು ಎನ್ನುವುದು ನನ್ನ ಆಸೆಯಾಗಿದೆ' ಎಂದು ಹೇಳಿದರು.
ತಮ್ಮ ಗಾಯನ ಕಲೆ ಬಗ್ಗೆ ಮಾತನಾಡಿ ನಿಶಾ, ನಾನು ಏನು ದೊಡ್ಡ ಸಿಂಗರ್ ಅಲ್ಲ. ಅಮ್ಮ ನಾನು ಚಿಕ್ಕವಳಿದ್ದಾಗಲೇ ಸಂಗೀತ ಕ್ಲಾಸ್‌ಗೆ ಹಾಕಿದರು. ಹೀಗಾಗಿ ಶಾಸ್ತ್ರೀಯ ಸಂಗೀತ ನಾನು ಕಲಿತಿದ್ದೇನೆ. ಆದರೆ ಸಂಪೂರ್ಣವಾಗಿ ಮುಗಿಸಿಲ್ಲ. ನಟನೆ ಮಾಡುತ್ತಿರುವುದರಿಂದ ಸಂಗೀತ ಮುಗಿಸಲು ಆಗಲಿಲ್ಲ. ಹಾಡುವುದನ್ನು ಒಂದು ಹವ್ಯಾಸ ತರ ಇಟ್ಟುಕೊಂಡಿದ್ದೇನೆ. ಕನ್ನಡ ಹಾಗೂ ತೆಲುಗಿನಲ್ಲಿ ನನ್ನ ಪ್ರತಿಭೆ ಗುರುತಿಸಿ ಪ್ರತಿ ವೇದಿಕೆಯಲ್ಲಿ ಹಾಡಲು ನನಗೆ ಅವಕಾಶ ಕೊಡುತ್ತಿರುವುದು ನನ್ನ ಒಂದು ದೊಡ್ಡ ಖುಷಿ ಎಂದರು.

ನಾವು ಮೂಲತಃ ಮಲಯಾಳಿ ಕುಟುಂಬದವರು. ಮಲಯಾಳಂಯಿಂದ ಸದ್ಯ ಯಾರೂ ಕರೆಯುತ್ತಿಲ್ಲ. ಮಲಯಾಳಿ ಮುಖ ತರ ಕಾಣಿಸುತ್ತಿಲ್ಲವೋ ನನಗೆ ಗೊತ್ತಿಲ್ಲ. ನನ್ನ ಮಾತೃ ಭಾಷೆ ಮಲಯಾಳಂ ಆಗಿರುವುದರಿಂದ ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ಮಾಡಲು ತುಂಬಾ ಇಷ್ಟ ಇದೆ. ಮುಂದಿನ ದಿನಗಳಲ್ಲಿ ನೋಡೋಣ. ಅಲ್ಲಿಂದ ಕರೆದರೆ ಖಂಡಿತಾ ಹೋಗುತ್ತೇನೆ ಎಂದರು.
ಎರಡೂ ಧಾರಾವಾಹಿಗಳಿಗೆ ಸಮಯ ನೀಡುವ ಬಗ್ಗೆ ಮಾತನಾಡಿದ ಅವರು, ಕನ್ನಡ ಹಾಗೂ ತೆಲುಗು ಎರಡೂ ಧಾರಾವಾಹಿಗಳನ್ನು ಒಟ್ಟಿಗೆ ಮಾಡುತ್ತಿರುವುದರಿಂದ ಶೂಟಿಂಗ್ ಡೇಟ್‌ಗಳನ್ನು ನಿರ್ವಹಿಸುವುದು ತುಂಬಾ ಕಷ್ಟವಾಗುತ್ತಿದೆ. ಪ್ರತಿ ದಿನ ಓಡಾಟ ಎನ್ನುವಂತಾಗಿದೆ. ನಮ್ಮ ನಿರ್ಮಾಪಕರ ಬೆಂಬಲದಿಂದ ಎಲ್ಲಾ ಸಾಧ್ಯವಾಗುತ್ತಿದೆ. ನಮಗೆ ಕಷ್ಟ ಕೊಡದೇ ಅವರೇ ಕಷ್ಟ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಚಿಕ್ಕವಳಿರುವಾಗಿನಿಂದಲೂ ಟೈಂ ಮ್ಯಾನೇಜ್ ಮಾಡಿ ಅಭ್ಯಾಸ. ಅವಗಿಂದಾನೂ ನಾನು ಬ್ಯೂಸಿ. ಹಾಗಾಗಿ ಎರಡೂ ಪ್ರಾಜೆಕ್ಟ್‌ಗಳನ್ನು ಸರಿಯಾಗಿ ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications