ಶೋಕಿಗಾಗಿ 5 ದುಬಾರಿ ಕಾರು ತಂದಿದ್ದೆ, ಈಗ ಮಾರಿಕೊಂಡೆ: ಸೀತಾರಾಮ ಸೀರಿಯಲ್‌ ನಟನ ಬದುಕಲ್ಲಿ ಆಗಿದ್ದೇನು?

‌ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ಕನ್ನಡದ ಜನಪ್ರಿಯ ಸೀತಾರಾಮ ಧಾರಾವಾಹಿಯಲ್ಲಿ ನಟ ಗಗನ್‌ ಚಿನ್ನಪ್ಪ ಕೂಡ ಸಾಕಷ್ಟು ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ಗಗನ್‌ ಅವರು ತಮ್ಮ ಬದುಕಿನ ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ನೋಡಲು ಖಡಕ್‌ ಹೀರೋ ರೀತಿ ಇರುವ ಗಗನ್‌ ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡ ಕಡಿಮೇನಿಲ್ಲ. ಇತ್ತೀಚೆಗಷ್ಟೇ ಸೀರಿಯಲ್‌ ಕೊನೆಯ ದಿನ ಬಿಕ್ಕಿಬಿಕ್ಕಿ ಅತ್ತಿದ್ದ ಅವರು ತಮ್ಮ ಕಾರುಗಳನ್ನು ಮಾರಿಕೊಳ್ಳುವ ಸ್ಥಿತಿಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಗಗನ್‌ ಅವರ ಲೈಫಲ್ಲಿ ಆಗಿದ್ದೇನು ಗೊತ್ತಾ?

ಹುಡುಗಾಟದಲ್ಲಿ ನಾನು ಐದು ಕಾರುಗಳನ್ನು ಖರೀದಿಸಿದ್ದೆ. ಈಗ ಎಲ್ಲವನ್ನೂ ಮಾರಿಕೊಂಡು ಎರಡೇ ಕಾರು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಬಿಎಂಡಬ್ಲ್ಯು ಸೇರಿದಂತೆ ದುಬಾರಿ ಕಾರುಗಳನ್ನು ಮಾರಿಕೊಂಡೆ. ಈಗ ಒಂದು ಥಾರ್‌ ಹಾಗು ಇನ್ನೊಂದು ಕಾರಷ್ಟೇ ಇದೆ. ನಿಜ ಹೇಳಬೇಕು ಅಂದ್ರೆ ಪಾರ್ಕಿಂಗ್‌ ಜಾಗಕ್ಕೇ 15 ಸಾವಿರ ರೂಪಾಯಿ ಪಾವತಿ ಮಾಡ್ತಿದ್ದೆ. ಆಗ ನನಗೆ ಶೋಕಿ ಜಾಸ್ತಿ ಆಯ್ತು ಎಂದು ಗೊತ್ತಾಗಿ, ಅದನ್ನೆಲ್ಲ ಕಟ್‌ ಮಾಡೋಣ ಎಂದು ಕಾರುಗಳನ್ನ ಮಾರಿಕೊಂಡೆ ಎಂದು ಗಗನ್‌ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Seetha Raama Serial Actor Gagan Chinnappa Forced To Sell His Cars Kannada TV Actor Struggles

ಈ ಲೈಫ್‌ಸ್ಟೈಲ್‌ ಬೇಡ ಅನಿಸಿ, ಈ ರೀತಿ ಮಾಡಿದೆ. ನಾನು ನನ್ನ ಆಡಿ ಕಾರನ್ನು ಕೂಡ ನನಗೆ ಗೊತ್ತಿರುವವರಿಗೇ ಮಾರಿದೆ. ಈಗ ಕೂರ್ಗ್‌ನಲ್ಲಿ ಮನೆ ಕಟ್ಟಿಸುತ್ತಿದ್ದೀನಿ. ಮೊದಲು ಒಂದು ಸೈಟ್‌ ಖರೀದಿಸಿದ್ದೆ. ಈಗ ಅದರಲ್ಲೇ ಮನೆ ಕಟ್ಟುತ್ತಿದ್ದೀನಿ. ಅಪ್ಪ ಅಮ್ಮ ಎಲ್ಲ ಕೊಡಗಿನಲ್ಲೇ ಇದ್ದಾರೆ. ನಾನು ಪಿಯುಸಿಯಿಂದಲೂ ಒಂಟಿಯಾಗಿದ್ದೇನೆ. ನಾನು ಕೆಲಸ ಬಿಟ್ಟಾಗ ಎಲ್ಲರಂತೆ ನನ್ನ ಪೋಷಕರು ಕೂಡ ಆತಂಕಕ್ಕೆ ಒಳಗಾಗಿದ್ರು. ನನಗೆ ಚಿಕ್ಕವನಿಂದಲೂ ಶ್ರೀಮಂತನಾಗಬೇಕು, ನನ್ನ ಕೆರಿಯರ್‌ ಹೀಗಿರಬೇಕು ಎಂದು ಕನಸು ಕಂಡಿದ್ದೆ ಎಂದು ಹೇಳಿದ್ದಾರೆ.

ಆರು ವರ್ಷ ರಿಲೇಷನ್‌ಶಿಪ್‌ನಲ್ಲಿದ್ದೆ

ಸೀತಾರಾಮ ಸೀರಿಯಲ್‌ನಲ್ಲಿ ನನಗೆ ತುಂಬಾ ಸ್ಕ್ರೀನ್‌ಸ್ಪೇಸ್‌ ಸಿಕ್ಕಿತು. ಈಗ ಕೊಡಗಿನಲ್ಲಿ ನನ್ನ ತಂದೆಯನ್ನ ಜನ ಗುರುತಿಸುತ್ತಾರೆ. ಗಗನ್‌ ತಂದೆ ಅಂತಾರೆ. ನಾನು ಆರು ವರ್ಷ ರಿಲೇಷನ್‌ಶಿಪ್‌ನಲ್ಲಿದ್ದೆ. ಆಮೇಲೆ ಬ್ರೇಕಪ್‌ ಆಯ್ತು. ನಿಜ ಹೇಳಬೇಕು ಅಂದ್ರೆ ಆಗೆಲ್ಲ ಗುರಿ, ಸಾಧನೆ ಬಗ್ಗೆ ಯೋಚನೆ ಇರಲಿಲ್ಲ, ಬರೀ ಹುಡುಗಾಟ ಇತ್ತು, ಆಗೆಲ್ಲ ಒಂದು ಫ್ಲೋನಲ್ಲಿ ಮೂವ್‌ ಆಗ್ತಿರುತ್ತೆ ಎಂದಿದ್ದಾರೆ.

ಒಬ್ಬ ಮನುಷ್ಯನಿಗೆ ಜೀವನದಲ್ಲಿ ಹೀಗಾಗಬೇಕು ಅನ್ನೋ ಹಸಿವಿರಬೇಕು. ಉದಾಹರಣೆಗೆ ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಈಗ ಎಲ್ಲೋ ಇದ್ದಾರೆ. ಅವರು ಈಗ ಎಲ್ಲರಿಗೂ ಒಂದು ಮಾದರಿ ಇದ್ದಂತೆ. ಯಶ್‌ ಈಗ ನನ್ನ ವಯಸ್ಸಿನವರಿಗೆ ಒಂದೊಳ್ಳೆ ಉದಾಹರಣೆ ಎಂದರೆ ತಪ್ಪಾಗಲ್ಲ. ಅವರನ್ನ ಈಗ ಟಚ್‌ ಮಾಡೋಕೆ ಆಗಲ್ಲ, ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅದೇ ರೀತಿ ನಾವೂ ನಮ್ಮ ಶ್ರಮ ಪಡಬೇಕು ಎಂದು ಗಗನ್‌ ಚಿನ್ನಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+