Ragini Dwivedi: ವ್ಯಕ್ತಿಯ ಕಪಾಳಕ್ಕೆ ಸರಿಯಾಗಿ ಬಾರಿಸಿದ ನಟಿ ರಾಗಿಣಿ ದ್ವಿವೇದಿ
ಸ್ಯಾಂಡಲ್‌ವುಡ್‌ನ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಅವರು ಫುಲ್ ಗರಂ ಆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದಾ ಸ್ಮೈಲ್ ಮಾಡಿಕೊಂಡಿರುತ್ತಿದ್ದ ರಾಗಿಣಿ ಅವರು ಕೋಪಗೊಂಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ರಾಗಿಣಿ ಅವರು ವ್ಯಕ್ತಿಯೊಬ್ಬರ ಕಪಾಳಕ್ಕೆ ಸರಿಯಾಗಿ ಬಾರಿಸಿದ್ದು, ಎಲ್ಲರ ಮುಂದೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಈ ಘಟನೆ ನಡೆದಿದ್ದು ಎಲ್ಲಿ, ನಟಿ ಕೋಪಗೊಂಡಿದ್ದೇಕೆ ಎಂಬ ವಿವರ ಇಲ್ಲಿದೆ..
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ನಟಿ ರಾಗಿಣಿ ದ್ವಿವೇದಿ ಅವರು ಕೋಪಗೊಂಡಿದ್ದು ತೀರಾ ಕಡಿಮೆ ಎನ್ನುತ್ತಾರೆ ಬಲ್ಲವರು. ಆದರೆ, ವೈರಲ್ ಆಗಿರುವ ವಿಡಿಯೋ ನಟಿ ಭಾರಿ ಕೋಪಗೊಂಡಿದ್ದಾರೆ. ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿ ಜೋರಾಗಿ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಇಷ್ಟಕ್ಕೂ ರಾಗಿಣಿ ಅವರಿಂದ ಕಪಾಳಕ್ಕೆ ಬಾರಿಸಿಕೊಂಡ ಆ ವ್ಯಕ್ತಿ ಮಾಡಿದ ತಪ್ಪೇನು ಏನು ಗೊತ್ತಾ?

ಇತ್ತೀಚೆಗೆ ನಟಿ ರಾಗಿಣಿ ಅವರು ಪಾಲ್ಗೊಂಡಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಟಿಯನ್ನು ಕಂಡ ಕೂಡಲೇ ಅಲ್ಲಿದ್ದ ಜನರೆಲ್ಲ ಮುತ್ತಿಕೊಂಡಿದ್ದಾರೆ. ಈ ವೇಳೆ ಕೆಲವರು ರಾಗಿಣಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕೂಡ ಮುಗಿಬಿದ್ದಿದ್ದಾರೆ. ಆದರೆ ವ್ಯಕ್ತಿಯೊಬ್ಬ ರಾಗಿಣಿ ಅವರ ಕೈ ಹಿಡಿದು ಎಳೆದಾಡಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ರಾಗಿಣಿ, ಅಲ್ಲೆ ಎಲ್ಲರ ಮುಂದೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಏನೋ...ಯಾಕೆ? ಎಂದು ರಾಗಿಣಿ ಸಿಟ್ಟಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಾಗಿಣಿ ಅವರ ಈ ಅವತಾರ ಕಂಡು ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ಇನ್ನು ರಾಗಿಣಿ ಕೈ ಹಿಡಿದು ಎಳೆದಾಡಿದವನು ಅಭಿಮಾನಿ ಎಂದು ಹೇಳಲಾಗುತ್ತಿದೆ. ಉಳಿದವರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಏಕಾಏಕಿ ಬಂದಿ ಕೈಹಿಡಿದು ಎಳೆದಾಡಿದ್ದಾನೆ. ಇದರಿಂದ ರಾಗಿಣಿ ಅವರು ಸಿಟ್ಟು ನೆತ್ತಿಗೇರಿತ್ತು, ಹಾಗಾಗಿ ಯಾಕೋ..? ಎಂದು ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ರಾಗಿಣಿ ಗರಂ ಆದ ಕೂಡಲೇ ಅಲ್ಲಿದ್ದವರೆಲ್ಲ ಸೈಲೆಂಟ್ ಆಗಿದ್ದಾರೆ. ಆದರೆ ಈ ಘಟನೆ ನಡೆದಿರುವುದು ಎಲ್ಲಿ ಎಂಬ ನಿಖರ ಮಾಹಿತಿ ಇಲ್ಲ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಡ್ರಗ್ಸ್ ಕೇಸ್‌ನಿಂದ ರಾಗಿಣಿ ರಿಲೀಫ್:
ನಟಿ ರಾಗಿಣಿ ದ್ವಿವೇದಿ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿತ್ತು. ಡ್ರಗ್ಸ್ ಜಾಲದಲ್ಲಿ ಮುಖ್ಯ ಆರೋಪಿ ಎಂದು ಇವರು ಜೈಲಿಗೂ ಹೋಗಬೇಕಾಯಿತು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಇತ್ತೀಚೆಗೆ ಈ ಕೇಸ್ ಬಗ್ಗೆ ತೀರ್ಪು ಪ್ರಕಟಿಸಿದ್ದ ಕೋರ್ಟ್ ರಾಗಿಣಿ ಅವರು ನಿರ್ದೋಷಿ ಎಂದು ಹೇಳಿತ್ತು. ಇದರಿಂದ ತುಪ್ಪದ ಹುಡುಗಿ ಮೇಲಿದ್ದ ಡ್ರಗ್ಸ್ ಕಳಂಕ ಕೂಡ ಮುಕ್ತವಾಗಿತ್ತು.
ಕೋವಿಡ್ ಸಮಯದಲ್ಲೇ ರಾಜ್ಯದಲ್ಲಿ ಈ ಡ್ರಗ್ಸ್ ಕೇಸ್ ಕೂಡ ಸಖತ್ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಚಿತ್ರರಂಗದ ಹಲವರ ಬಗ್ಗೆ ಹೆಸರು ಕೇಳಿಬಂದಿತ್ತು. ಈ ಕೇಸ್‌ನಲ್ಲಿ ರಾಗಿಣಿ ಅವರ ಹೆಸರು ಕೇಳಿಬಂದಿದ್ದರಿಂದ 2020ರಲ್ಲಿ ಅವರು ಅರೆಸ್ಟ್ ಕೂಡ ಮಾಡಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದಿದ್ರು. ಈ ಪ್ರಕರಣವು ಸದ್ಯ ಇತ್ಯರ್ಥವಾಗಿದೆ. ರಾಗಿಣಿ ಅವರು ಈ ಕೇಸ್‌ನಲ್ಲಿ ನಿರಪರಾಧಿ ಎಂದು ತೀರ್ಪು ಬಂದಿದೆ. ನಟಿ ರಾಗಿಣಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ ಅವರ ನಿರ್ದೋಷಿ ಎಂದು ಹೈಕೋರ್ಟ್ ಹೇಳಿದೆ. ಇದರಿಂದ ರಾಗಿಣಿ ಅವರಿಗೆ ಕಳಂಕದಿಂದ ಬಿಗ್ ರಿಲೀಫ್ ಸಿಕ್ಕಿದೆ.












Click it and Unblock the Notifications