ಶ್ರುತಿ ನಾಯ್ಡು ಲೀಗಲ್‌ ನೋಟಿಸ್‌ ಬಗ್ಗೆ ನಟ ಪ್ರೇಮ್‌ ಹೇಳಿದ್ದೇನು?

ಸ್ಯಾಂಡಲ್‌ವುಡ್‌ ನಟ 'ನೆನಪಿರಲಿ' ಪ್ರೇಮ್‌ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಪ್ರೇಮ್‌ ನಟನೆಯ ಸಿನಿಮಾ ಪೋಸ್ಟರ್‌ ವಿಚಾರವಾಗಿ ವಿವಾದದ ಕಿಡಿ ಹೊತ್ತಿಕೊಂಡಿದೆ. ಖ್ಯಾತ ನಿರ್ಮಾಪಕಿ ಹಾಗೂ ನಿರ್ದೇಶಕಿ ಶ್ರುತಿ ನಾಯ್ಡು ಅವರು ಪ್ರೇಮ್‌ಗೆ ಲೀಗಲ್‌ ನೋಟಿಸ್‌ ಕಳಿಸುವುದಾಗಿ ಹೇಳಿದ್ದಾರೆ. ಹುಟ್ಟುಹಬ್ಬದ ದಿನವೇ ನಟ ಪ್ರೇಮ್‌ ಅವರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಶ್ರುತಿ ನಾಯ್ಡು ಅವರು ಆರೋಪಗಳ ಸಂಬಂಧ ನಟ ಮೌನ ಮುರಿದಿದ್ದಾರೆ.

ಶ್ರುತಿ ನಾಯ್ಡು ಅವರ ಪತಿ ರಮೇಶ್‌ ಇಂದಿರಾ ಅವರು ರಾಜಕಾರಣಿ ಪಾತ್ರದಲ್ಲಿರುವ ಫೋಟೋಗೆ ಬೆಂಕಿ ಹಚ್ಚಿ, ಅದರಿಂದ ಪ್ರೇಮ್‌ ಸಿಗಾರ್‌ ಹಚ್ಚಿಸಿಕೊಳ್ಳುತ್ತಿರುವ ಪೋಸ್ಟರ್‌ ನಿನ್ನೆ ಅವರ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್‌ ಮಾಡಲಾಗಿತ್ತು. ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಟನೆಯ 'ಸ್ಪಾರ್ಕ್' ಸಿನಿಮಾದಲ್ಲಿ ಪ್ರೇಮ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರತಂಡ ಈ ಪೋಸ್ಟರ್ ಹಂಚಿಕೊಂಡಿತ್ತು.

Sandalwood-actor-prem-faces-legal-trouble-over-movie-poster

ಆದರೆ ಈ ಪೋಸ್ಟರ್‌ನಲ್ಲಿ ಬಳಕೆಯಾಗಿರುವ ರಮೇಶ್‌ ಇಂದಿರಾ ಫೋಟೋಗೆ ಅನುಮತಿ ಪಡೆದಿಲ್ಲ. ಪೋಸ್ಟರ್‌ನಲ್ಲಿ ರಮೇಶ್‌ ಇಂದಿರಾ ಅವರನ್ನು ವಿಲನ್‌ ಆಗಿಯೂ ತೋರಿಸಲಾಗಿದೆ ಎಂದು ಅವರ ಪತ್ನಿ ಶ್ರುತಿ ನಾಯ್ಡು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ರಮೇಶ್‌ ಇಂದಿರಾ ಅವರ ಪರವಾಗಿ ಚಿತ್ರತಂಡಕ್ಕೆ ಹಾಗೂ ಪ್ರೇಮ್‌ ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸುತ್ತಿದ್ದೇನೆ ಎಂದೂ ಶ್ರುತಿ ಹೇಳಿದ್ದರು. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಇದೇ ವಿಚಾರ ದೊಡ್ಡ ವಿವಾದ ಸೃಷ್ಟಿಸಿ ಚರ್ಚೆಯಲ್ಲಿದೆ.

ಈ ಪೋಸ್ಟರ್‌ನಲ್ಲಿರುವ ರಮೇಶ್‌ ಇಂದಿರಾ ಅವರ ಫೋಟೋ ಭೀಮಾ ಚಿತ್ರದ್ದು ಎನ್ನಲಾಗಿದೆ. ಅಲ್ಲಿ ರಾಜಕಾರಣಿ ಪಾತ್ರ ನಿರ್ವಹಿಸಿದ್ದ ರಮೇಶ್‌ ಅವರ ಫೋಟೋವನ್ನೇ ಈ ಪೋಸ್ಟರ್‌ನಲ್ಲಿ ಬಳಸಲಾಗಿದೆ. ಆದರೆ ರಮೇಶ್ ಇಂದಿರಾ ಆಗಲಿ, ಭೀಮಾ ಸಿನಿಮಾದ ನಿರ್ದೇಶಕ, ನಿರ್ಮಾಪಕರ ಅನುಮತಿ ಪಡೆಯದೆ ಪೋಸ್ಟರ್ನಲ್ಲಿ ಅವರ ಫೋಟೊ ಬಳಸಲಾಗಿದೆ ಎಂದು ಶ್ರುತಿ ನಾಯ್ಡು ದೂರಿದ್ದರು.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಈ ಚಿತ್ರ ತಂಡದವರು ತುಂಬಾ ಅನೈತಿಕವಾಗಿ ನಡೆದುಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್‌ನಲ್ಲಿ ಪತ್ರಿಕೆಯ ಕಟಿಂಗ್‌ನಲ್ಲಿರುವ ನಟನ (ರಮೇಶ್‌ ಇಂದಿರಾ) ಅವರ ಅನುಮತಿ ಪಡೆಯದೇ ಇರುವುದು, ಈ ಪೋಸ್ಟರ್‌ ಬಗ್ಗೆ ಯಾರೇ ಆದರೂ ಕಾಳಜಿ ವಹಿಸಿಲ್ಲ ಎಂದು ಶ್ರುತಿ ನಾಯ್ಡು ಗಂಭೀರ ಆರೋಪ ಮಾಡಿದ್ದರು. ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ಪತಿ ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದು. ಅನುಮತಿ ಪಡೆಯದೆ ಫೋಟೋ ಬಳಸಿದ್ದಕ್ಕಾಗಿ ರಮೇಶ್ ಇಂದಿರಾ ಪರವಾಗಿ ಚಿತ್ರತಂಡ ಮತ್ತು ನಟ ಪ್ರೇಮ್‌ ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸಲಾಗುತ್ತಿದೆ ಎಂದು ಶ್ರುತಿ ಬರೆದುಕೊಂಡಿದ್ದರು.

Sandalwood-actor-prem-faces-legal-trouble-over-movie-poster

ಪೋಸ್ಟರ್‌ ಬಗ್ಗೆ ಪ್ರೇಮ್‌ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಪ್ರೇಮ್‌, "ಈ ವಿಚಾರದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಈ ಸಿನಿಮಾ ನಿರ್ದೇಶಕರ ಜೊತೆಗೆ ಮಾತನಾಡುತ್ತೇನೆ. ಅಸಲಿಗೆ ವಿಷಯ ಏನು ಎಂದು ತಿಳಿದುಕೊಂಡು ನಂತರ ಇದರ ಬಗ್ಗೆ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ. ನಾನು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಬ್ಯುಸಿಯಾಗಿದ್ದ ಕಾರಣ ನಿರ್ದೇಶಕರ ಜೊತೆಗೂ ಮಾತನಾಡಲು ಆಗಲಿಲ್ಲ ಎಂದು ಪ್ರೇಮ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+