Kiccha Sudeep: 'ತಾಳಿ ಕಟ್ಟಿಲ್ಲ ಆದರೂ ಇನ್ನೊಂದು ಮದುವೆ ಆಗಿದೆ'
ಸುದೀಪ್ ಸರ್‌ಗೆ ಒಬ್ಬ ನಟಿಯ ಜೊತೆ ಸಂಬಂಧ ಇತ್ತು. ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎನ್ನುವ ಗಾಸಿಪ್ ಇದೆ ಎನ್ನುವ ನಿರೂಪಕರ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ನೇರವಾಗಿ ಹೌದು ಎನ್ನುವ ಉತ್ತರ ಕೊಟ್ಟಿದ್ದಾರೆ. ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್ ಜೊತೆ ನಡೆದ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
'ದೇವಸ್ಥಾನದಲ್ಲಿ ಮದುವೆಯಾಗಿರುವುದು ಹೌದು. ಆದರೆ ಇವತ್ತಿಗೂ ಅವರು ಮನೆಗೆ ಬಂದಿಲ್ಲ. ಆ ನಟಿ ಯಾರು? ಎಲ್ಲಿ ಮದುವೆ ಆಯ್ತು? ಎನ್ನುವುದೆಲ್ಲಾ ಗೊತ್ತಿಲ್ಲ ಆದರೆ ಆಗಿದೆ. ಇನ್ನೊಂದು ನಾನು ಯಾವ ದೇವಸ್ಥಾನಕ್ಕೂ ಹೋಗಿಲ್ಲ. ತಾಳಿನೂ ಕಟ್ಟಿಲ್ಲ. ಆದರೂ ಮದುವೆ ಆಗಿದೆ. ಆ ಸಮಯದಲ್ಲಿ ವರ್ಚುಲ್ ಇರಲಿಲ್ಲ. ಹೀಗಾಗಿ ವರ್ಚುಲ್ ಮದುವೆನಾ ಎನ್ನುವುದು ಸಹ ಗೊತ್ತಿಲ್ಲ. ಈಗ ಆಗಿದ್ದರೆ ಅದನ್ನಾದರೂ ನಂಬ ಬಹುದಿತ್ತು' ಎನ್ನುವ ಮೂಲಕ ಸುದೀಪ್ ತಮ್ಮ ಬಗ್ಗೆ ಇರುವ ಈ ಗಾಸಿಪ್ ಅನ್ನು ತೆಗೆದು ಹಾಕಿದ್ದಾರೆ.

'ಆ ಬಗ್ಗೆ ಪೇಪರ್‌ನಲ್ಲಿ ಒಂದು ಬರಹ ಬರುತ್ತದೆ. ಯಾವುದೋ ಕಲಾವಿದ ಹೀಗೆ ಹೋಗಿ ಮದುವೆಯಾಗಿದ್ದಾನಂತೆ ಎಂದು. ನಾನು ಕೂಡ ಯಾರಪ್ಪ ಇದು ಅಂತಾ ತುಂಬಾ ಗಂಭೀರವಾಗಿ ಓದುತ್ತಿದ್ದೆ. ಆ ವೇಳೆ ನನ್ನ ಪಕ್ಕ ಪ್ರಿಯಾ ಕುಳಿತಿದ್ದರು. ನಾನು ಅವರಿಗೂ ಹೇಳುತ್ತಿದ್ದೆ. ನೋಡು ಯಾರೋ ಬಂದು ಹೀಗೆ ಮದುವೆಯಾಗಿದ್ದಾರೆ ನೋಡು ಎಂದು. ಕೊನೆಯಲ್ಲಿ ಓದುವಾಗ ಅದು ನಾನೇ. ಓದಿದ ಮೇಲೆ ನಾನು ಪ್ರಿಯಾ ಅವರ ಮುಖ ನೋಡಿದೆ.

ಅವರು ಏನು ಬರೆದಿದ್ದಾರೆ ಇವರು ಅಂತಾ ಕೇಳಿದರು. ನಾನು ನಂಗೆ ಗೊತ್ತಿಲ್ಲ ಅಂದೆ. ಕೊನೆಗೆ ಆ ಪೇಪರ್ ಅವರಿಗೆ ಪ್ರಿಯಾ ಮುಂದೆನೇ ಕಾಲ್ ಮಾಡಿ ಕೇಳಿದೆ. ಅದಕ್ಕೆ ಅವರು ಹಾಗಲ್ಲ ಹೀಗಲ್ಲ ಅಂದು ಹೆದರಿಕೊಂಡಿದ್ದರು. ಅದಕ್ಕೆ ನಾನು ಎಲ್ಲಾ ಒಕೆ. ಹೆಂಡತಿಯನ್ನು ಮನೆಗೆ ಕಳುಹಿಸಪ್ಪ ಅಂದೆ. ಅಷ್ಟೆಲ್ಲಾ ಕಷ್ಟ ಪಟ್ಟು ತಾಳಿ ಕಟ್ಟಿದ್ದೇನೆ ಎಂದರೆ ಮನೆಗೆ ಕಳುಹಿಸಿಕೊಡು ಅಂದೆ. ಅವರು ಸಾರಿ ಸರ್ ಹೀಗೆ ಕೇಳಿದೆವು ಅಂದರು. ಅದಕ್ಕೆ ನಾನು ಸ್ವಲ್ಪ ಹುಷಾರಾಗಿರಿ ಹೀಗೆಲ್ಲಾ ಹಾಕಿದಾಗ ಮನೆಗಳು ಮುರಿದು ಹೋಗುತ್ತದೆ ಅಂತಾ ಹೇಳಿದ್ದೆ' ಎಂದು ನಟ ಕಿಚ್ಚ ಸುದೀಪ್ ಈ ಹಿಂದೆ ತಮ್ಮ ಬಗ್ಗೆ ಬಂದ ಗಾಸಿಪ್ ಬಗ್ಗೆ ವಿವರಿಸಿದರು.












Click it and Unblock the Notifications