ಡಾಲಿ ಧನ್ಯತಾಗೆ ಪ್ರಪೋಸ್‌ ಮಾಡಿದ್ದು ಹೇಗೆ ಗೊತ್ತಾ? ಯಾವ ಸಿನಿಮಾಗೂ ಕಮ್ಮಿ ಇಲ್ಲ

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ ಅವರು ಧನ್ಯತಾ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಫೆಬ್ರವರಿ 16ರಂದು ಡಾಲಿ ಹಾಗೂ ಧನ್ಯತಾ ಅವರ ವಿವಾಹ ಮೈಸೂರಿನಲ್ಲಿ ನೆರವೇರಲಿದೆ. ಪ್ರೇಮಿಗಳ ದಿನದ ಆಸುಪಾಸಿನಲ್ಲೇ ಈ ಜೋಡಿ ಮದುವೆ ನಡೆಯಲಿದ್ದು, ಡಾಲಿ ಫುಲ್‌ ರೊಮ್ಯಾಂಟಿಕ್‌ ಆಗಿದ್ದಾರೆ. ತನ್ನ ಭಾವಿ ಪತ್ನಿಗೆ ಮುದ್ದಾಗಿ ಪ್ರಪೋಸ್‌ ಮಾಡಿರುವ ವಿಡಿಯೋ ಹಂಚಿಕೊಂಡು ಎಲ್ಲರ ಗಮನ ಸೆಳೆಸಿದ್ದಾರೆ.

ಧನಂಜಯ್‌ ಅವರ ಡಾಲಿ ಪಿಚ್ಚರ್ಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಈ ತಮ್ಮ ಪ್ರಪೋಸ್‌ ವಿಡಿಯೋ ಹಂಚಿಕೊಂಡಿದ್ದಾರೆ. ಮೊದಲಿಗೆ ಡಾಲಿ ಯಾವುದೋ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಂತೆ ಈ ವಿಡಿಯೋ ಮೂಡಿಬಂದಿದೆ. ಬೈಬೈ ಬ್ಯಾಚುಲರ್‌ ಎಂಬ ಹೆಸರಿನಲ್ಲಿ ತಮ್ಮ ಪ್ರಪೋಸ್‌ ವಿಡಿಯೋ ಹಂಚಿಕೊಂಡಿದ್ದಾರೆ.

Sandalwood Actor Dhananjay Shares Proposal Video With Dhanyatha

ವಿಡಿಯೋದಲ್ಲಿ ತಮ್ಮ ಬದುಕಿನ ಹಾದಿಯನ್ನು ಉಲ್ಲೇಖಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಎಂತಲೇ ಕರೆಸಿಕೊಂಡಿದ್ದ ಡಾಲಿ ಅವರು ತಮ್ಮ ಬ್ಯಾಚುಲರ್‌ ಜೀವನ ಹೇಗಿತ್ತು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹೃದಯ ಕದ್ದಿರುವ ಪ್ರೇಯಸಿಗೆ ಸ್ತೆತಸ್ಕೋಪಿನ ಚಿಹ್ನೆ ಇರುವ ಉಂಗುರ ತೊಡಿಸಿ ಪ್ರಪೋಸ್‌ ಮಾಡಿದ್ದಾರೆ.

ಇನ್ಮೇಲೆ ಸಿಂಗಲ್‌ ಲೈಫಿಗೆ ಶುಭಂ ಹೇಳುವ ಸಮಯ ಬಂದಾಯ್ತು. ನೂರು ಬ್ಯಾಚುಲರ್‌ ಪಾರ್ಟಿಗಳೇ ಬರಲಿ, ಸಾವಿರ ಸೋಲೋ ಟ್ರಿಪ್‌ಗಳೇ ಇರಲಿ, ನಿನ್‌ ಜೊತೆ ರೀಲ್ಸ್‌ ಮಾಡಿಕೊಂಡೇ ಇರ್ತೀನಿ. ಎಲ್ಲರೂ ಬನ್ನಿ ನಾವಿಬ್ಬರೂ ಹಸೆಮಣೆ ಏರುವಾಗ ನೀವೆಲ್ಲ ಸಾಕ್ಷಿಯಾಗಬೇಕು ಎಂದು ಡಾಲಿ ಮುದ್ದಾಗಿ ಆಹ್ವಾನ ನೀಡಿದ್ದಾರೆ.

ಜೋಡಿಯಾಗಿ ಸಪ್ತಪದಿ ತುಳಿಯುತ್ತಿದ್ದರೆ ನೀವು ಅಕ್ಷತೆ ಹಾಕಿ ಶುಭಕೋರಬೇಕು. ಮಿಸ್‌ ಮಾಡದೆ ಬಂದು ಆಶೀರ್ವಾದ ಮಾಡಿ, ಹೋಳಿಗೆ ಊಟ ಮಾಡಿಕೊಂಡು ಹೋಗಿ ಎಂದಿದ್ದಾರೆ. ಬ್ಯಾಚುಲರ್‌ ಆಗಿ ಉಳಿಯುವ ಗಂಡಿಗೆ ಬೆಲೆ ಇಲ್ಲ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾನೀಗ ಉತ್ತು ಬಿತ್ತಬೇಕಿರುವುದು ಪ್ರೀತಿಯ ತೋಟ ಎಂದು ಧನ್ಯತಾ ಅವರ ಕೆನ್ನೆಗೆ ಕಿಸ್‌ ಕೊಟ್ಟಿದ್ದಾರೆ. ಮಿಸ್ಟರ್‌ ಅಂಡ್‌ ಮಿಸಸ್‌ ಜಿಂಗೋ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದೆ ಎಂದು ಕರೆದಿದ್ದಾರೆ.

Sandalwood Actor Dhananjay Shares Proposal Video With Dhanyatha

ಮೈಸೂರಿನಲ್ಲಿ ಫೆಬ್ರವರಿ 15 ಹಾಗೂ 16ರಂದು ಡಾಲಿ-ಧನ್ಯತಾ ಮದುವೆ ನಡೆಯಲಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನ ನಟ-ನಟಿಯರು, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಎಸ್‌ ಯಡಿಯೂರಪ್ಪ, ಎಚ್‌.ಡಿ.ದೇವೇಗೌಡ, ಹಾಗೂ ಸಿನಿಮಾ ರಂಗದ ಬಹುತೇಕರಿಗೆ ಡಾಲಿ ಜೋಡಿ ಖುದ್ದಾಗಿ ತೆರಳಿ ಆಮಂತ್ರಣ ನೀಡಿದೆ. ಇತ್ತೀಚೆಗೆ ಹಿಟ್‌ ಕಂಡ ಪುಷ್ಪ-2 ಚಿತ್ರತಂಡಕ್ಕೂ ಡಾಲಿ ಆಹ್ವಾನ ಕೊಟ್ಟು ಬಂದಿದ್ದರು.

ಈಗಾಗಲೇ ಹಿರಿಯರಿಗೆ, ಗಣ್ಯರಿಗೆ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಲಾಗಿದೆ. ಮೈಸೂರಿನ ಚಾಮುಂಡೇಶ್ವರಿಯ ಮುಂದೆ ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿದ್ದರು. ನಮ್ಮ ಮದುವೆ ಮೈಸೂರಿನಲ್ಲೇ ನಡೆಯುತ್ತಿದ್ದು, ಎಲ್ಲರೂ ಬಂದು ಆಶೀರ್ವಾದ ಮಾಡಿ. ನಿಮಗೆಲ್ಲರಿಗೂ ಲಗ್ನಪತ್ರಿಕೆ ಕೊಡುತ್ತಿದ್ದೇನೆ ಎಂದು ಕರೆಯೋಲೆ ನೀಡಿದ್ದರು.

ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಅವರೊಂದಿಗೆ ಮದುವೆ ಫಿಕ್ಸ್‌ ಆಗಿದೆ ಎಂದು ಡಾಲಿ ಅನೌನ್ಸ್‌ ಮಾಡಿದ್ದರು. ಬಳಿಕ ಇಬ್ಬರೂ ಸಿಂಪಲ್‌ ಆಗಿ ಎಂಗೇಜ್‌ಮೆಂಟ್‌ ಕೂಡ ಆಗಿದ್ದರು. ಈಗ ಮೈಸೂರಿನಲ್ಲಿ ಮದುವೆ ನಡೆಯುತ್ತಿದ್ದು, ಮದುವೆ ಆಮಂತ್ರಣವನ್ನು ತುಂಬಾ ಸಿಂಪಲ್‌ ಆಗಿ ಕೈಬರಹದಲ್ಲಿ ಬರೆಸಿ ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+