Prashanth Neel: ಲವ್‌ ಸ್ಟೋರಿ ಸಿನಿಮಾ ಮಾಡ್ತೀನಿ ಎಂದ ಕೆಜಿಎಫ್ ಪ್ರಶಾಂತ್ ನೀಲ್; ಸಿನಿಮಾ ಹೆಸರೇನು ಗೊತ್ತಾ?

ಉಗ್ರಂ, ಕೆಜಿಎಫ್, ಸಲಾರ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ತನಗೆ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಆಕ್ಷನ್, ಥ್ರಿಲ್ಲರ್ ಸಿನಿಮಾಗಳಿಂದಲೇ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನೀಲ್ ತನಗೆ ಲವ್‌ ಸ್ಟೋರಿ ಮಾಡುವ ಆಸೆ ಇದೆ ಎಂದರು.

ತಮ್ಮ ನಿರ್ದೇಶನದ ಮೊದಲ ಸಿನಿಮಾ ಉಗ್ರಂ ಬಿಡುಗಡೆಯಾಗಿ 10 ವರ್ಷ ತುಂಬಿದ ಹಿನ್ನಲೆಯಲ್ಲಿ ಆಂಕರ್ ಅನುಶ್ರೀಯವರ ಯೂಟ್ಯೂಬ್ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಶಾಂತ್ ನೀಲ್ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 Salaar and KGF Director Prashanth Neel Expresses Intent to Create a Movie on Love Story

ಉಗ್ರಂ ಸಿನಿಮಾದ ನೆನಪುಗಳನ್ನು ಮೆಲುಕು ಹಾಕಿರುವ ಅವರು ಆರಂಭದ ದಿನಗಳಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಉಗ್ರಂ ಸಿನಿಮಾ ಮಾಡಲು ಪಟ್ಟ ಕಷ್ಟಗಳು, ಕೆಟ್ಟ ಅನುಭವಗಳನ್ನು ನೆನಪಿಸಿಕೊಂಡು ಪ್ರಶಾಂತ್ ನೀಲ್ ಮತ್ತು ನಾಯಕ ಶ್ರೀಮುರಳಿ ಕಣ್ಣೀರು ಹಾಕಿದ್ದಾರೆ.

ಲವ್‌ ಸ್ಟೋರಿ ಮಾಡೇ ಮಾಡ್ತೀನಿ

ಉಗ್ರಂ ಬಳಿಕ ಮಾಡಿದ ಕೆಜಿಎಫ್ ಸಿನಿಮಾ ಪ್ರಶಾಂತ್ ನೀಲ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ, ಹಣ ತಂದುಕೊಟ್ಟಿದೆ. ಕೆಜಿಎಫ್ 2 ಸಿನಿಮಾ ₹1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ನೀಲ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.

ಕೆಜಿಎಫ್ 2 ಬಳಿಕ ಪ್ರಭಾಸ್‌ಗಾಗಿ ಸಲಾರ್ ಸಿನಿಮಾ ನಿರ್ದೇಶನ ಮಾಡಿರುವ ಪ್ರಶಾಂತ್ ನೀಲ್ ಮೊದಲ ತೆಲುಗು ಸಿನಿಮಾದಲ್ಲಿ ಕೂಡ ಗೆಲುವು ಕಂಡಿದ್ದಾರೆ. ಸದ್ಯ ಸಲಾರ್ 2 ಮತ್ತು ಇನ್ನೂ ಹೆಸರಿಡದ ಜೂ. ಎನ್‌ಟಿಆರ್ ಸಿನಿಮಾಗೆ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ.

ಆಕ್ಷನ್, ಥ್ರಿಲ್ಲರ್ ಸಿನಿಮಾಗಳಿಗೆ ಹೆಸರಾಗಿರುವ ಅವರು ಈಗ ಲವ್‌ ಸ್ಟೋರಿ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ನನಗೆ ಲವ್‌ ಸ್ಟೋರಿ ಸಿನಿಮಾ ಮಾಡಲು ಬರಲ್ಲ ಎಂದು ಎಲ್ಲರೂ ಗೇಲಿ ಮಾಡುತ್ತಾರೆ ಆದರೆ ಅವರಿಗೆಲ್ಲಾ ಉತ್ತರ ಕೊಡುತ್ತೇನೆ. ಮುಂದೊಂದು ದಿನ ಲವ್‌ ಸ್ಟೋರಿ ಕುರಿತ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಉಗ್ರಂ ಸಿನಿಮಾ ಮಾಡುವ ಸಂದರ್ಭದಲ್ಲೇ ಪ್ರೇಮಕಥೆಯೊಂದನ್ನು ಸಿದ್ದ ಮಾಡಿಕೊಂಡಿದ್ದೇನೆ ಎಂದ ಅವರು ಅದಕ್ಕೆ "ಆ ಹುಡುಗಿ ನೀನೆ" ಎಂದು ಹೆಸರು ಕೂಡ ಇಟ್ಟಿದ್ದೇನೆ ಎಂದು ಹೇಳಿದರು.

ತಮ್ಮ ನೆಚ್ಚಿನ ನಿರ್ದೇಶಕ ಉಪೇಂದ್ರ ಎಂದು ಹೇಳಿದ್ದಾರೆ. ತರ್ಲೆ ನನ್ ಮಗ ರೀತಿಯ ಸಿನಿಮಾ ಮಾಡಿದ್ದ ಅವರು ಓಂ ರೀತಿಯ ಸಿನಿಮಾ ಮಾಡುತ್ತಾರೆ ಅದಕ್ಕೆ ಅವರು ನನ್ನ ನೆಚ್ಚಿನ ನಿರ್ದೇಶಕ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+