Toxic: ಯಶ್‌ "ಟಾಕ್ಸಿಕ್‌" ಸಿನಿಮಾದಲ್ಲಿ ಕನ್ನಡದ ಬಹುಬೇಡಿಕೆ ನಟಿ; ಈ ಅದೃಷ್ಟ ಒಲಿದಿದ್ದು ಯಾರಿಗೆ?

ನಟ ರಾಕಿಂಗ್‌ ಸ್ಟಾರ್‌ ಯಶ್ ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಸಖತ್‌ ಬ್ಯುಸಿ ಆಗಿದ್ದಾರೆ. ಇದರಲ್ಲಿ ಬಹುನಿರೀಕ್ಷಿಯ ಟಾಕ್ಸಿಕ್‌ ಸಿನಿಮಾ ಕೂಡ ಒಂದು. ಕೆಜಿಎಫ್‌-2 ಬಳಿಕ ತೆರೆಗೆ ಬರಲಿರುವ ಯಶ್‌ ನಟನೆಯ ಬಿಗ್‌ ಪ್ರಾಜೆಕ್ಟ್‌ನಲ್ಲಿ ಹಲವು ಟಾಪ್‌ ನಟಿಯರು ಇರುವುದು ಮತ್ತೊಂದು ಹೈಲೈಟ್‌ ಆಗಿದೆ. ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಪರಭಾಷಾ ನಿರ್ದೇಶಕರಾದ ಕಾರಣ ಬೇರೆ ಚಿತ್ರರಂಗಗಳ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇಂತಹ ದೊಡ್ಡ ಸಿನಿಮಾದಲ್ಲಿ ಕನ್ನಡದ ನಟಿಯರಿಗೆ ಯಾಕೆ ಅವಕಾಶ ಕೊಡಲಿಲ್ಲ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು. ಈ ಆಸೆ ಕೊನೆಗೂ ಈಡೇರಿದ್ದು, ಕನ್ನಡದ ಸದ್ಯದ ಬಹು ಬೇಡಿಕೆಯ ನಟಿ ಟಾಕ್ಸಿಕ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು ಹೀಗೊಂದು ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಟಾಕ್ಸಿಕ್‌ ಸಿನಿಮಾದಲ್ಲಿ ಈಗಾಗಲೇ ಖ್ಯಾತ ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ನಟಿಸುತ್ತಿದ್ದಾರೆ ಎಂದು ಘೋಷಣೆಯಾಗಿದೆ. ಈಗಾಗಲೇ ಈ ನಟಿಯರು ಶೂಟಿಂಗ್‌ ಮುಗಿಸಿದ್ದು, ಯಶ್‌ಗೆ ಯಾರು ನಾಯಕಿ? ಏನು ಕಥೆ ಎಂಬ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಎಲ್ಲರೂ ಪರಭಾಷೆಗಳ ನಟಿಯರೇ ಇದ್ದಾರೆ, ಕನ್ನಡದ ನಟಿಯೂ ಇದ್ದಿದ್ದರೆ ಚೆನ್ನಾಗಿ ಇರ್ತಿತ್ತು ಎಂದು ಯಶ್‌ ಫ್ಯಾನ್ಸ್‌ ಆಸೆ ಬಿಚ್ಚಿಟ್ಟಿದ್ದರು. ಈಗ ಕೊನೆಗೂ ಆ ಆಸೆ ಈಡೇರುವ ಸೂಚನೆ ಸಿಕ್ಕಿದೆ. ಕನ್ನಡ ಟಾಪ್‌ ನಟಿಗೆ ಈ ಅದೃಷ್ಟ ಒಲಿದಿದೆಯಂತೆ.

Rukmini Vasanth To Star With Yash In Upcoming Movie Toxic

ಯಾರು ಆ ನಟಿ?

ಕನ್ನಡದಲ್ಲಿ ಸದ್ಯ ಹಲವು ನಟಿಯರಿದ್ದಾರೆ. ಈ ಪೈಕಿ ನಟಿ ರುಕ್ಮಿಣಿ ವಸಂತ್‌ಗೆ ಫುಲ್‌ ಡಿಮ್ಯಾಂಡ್‌ ಹೆಚ್ಚಾಗಿದೆ. ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳ ಹಲವು ಸಿನಿಮಾಗಳಲ್ಲಿ ರುಕ್ಮಿಣಿ ಬ್ಯುಸಿಯಾಗಿದ್ದಾರೆ. ಇನ್ನು ಬೀರ್‌ಬಲ್‌, ಸಪ್ತಸಾಗರದಾಚೆ ಎಲ್ಲೋ, ಬೈರತಿ ರಣಗಲ್‌, ಬಘೀರ ಸಿನಿಮಾಗಳಲ್ಲಿ ನಟಿಸಿದ ಬಳಿಕ ರುಕ್ಮಿಣಿ ಅವರಿಗೆ ಪರಭಾಷೆಗಳಿಂದಲೂ ಆಫರ್‌ಗಳು ಹೆಚ್ಚಾಗಿವೆ. ತಮಿಳು ಸಿನಿಮಾಗಳಲ್ಲಿ ಮಿಂಚಿರುವ ರುಕ್ಮಿಣಿ, ತೆಲುಗಿನಲ್ಲಿ ಪ್ರಶಾಂತ್‌ ನೀಲ್‌ ಆಕ್ಷನ್‌ ಕಟ್‌ ಹೇಳಲಿರುವ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾದಲ್ಲೂ ರುಕ್ಮಿಣಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕಾಂತಾರಾ ಚಾಪ್ಟರ್‌-1ರಲ್ಲೂ ರುಕ್ಮಿಣಿ ಇರುವುದು ಕನ್ಫರ್ಮ್‌ ಆಗಿದೆ. ಇದರೊಂದಿಗೆ ಅವರು ಯಶ್‌ ನಟನೆಯ ಟಾಕ್ಸಿಕ್‌ ಟೀಂ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಟಾಕ್ಸಿಕ್‌ ಸಿನಿಮಾದಲ್ಲಿ ರುಕ್ಮಿಣಿ ಅವರು ನಟಿಸುತ್ತಿದ್ದು, ಈಗಾಗಲೇ ಎರಡು ಶೆಡ್ಯೂಲ್‌ ಮುಗಿಸಿದ್ದಾರೆ ಎಂದು ವರದಿಯಾಗಿದೆ. ಈ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಯಶ್‌ ಜೊತೆಗೆ ರುಕ್ಮಿಣಿ ನಟಿಸುವುದು ನಿಜಕ್ಕೂ ಸಂತಸದ ವಿಚಾರ ಎಂದು ಹೇಳಲಾಗುತ್ತಿದೆ. ಆದರೆ ಟಾಕ್ಸಿಕ್‌ ತಂಡವು ಈ ವಿಚಾರವನ್ನು ಗೌಪ್ಯವಾಗಿ ಇಡಲಾಗಿದೆ, ರುಕ್ಮಿಣಿ ಅವರ ನಟನೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ರುಕ್ಮಿಣಿ ಅವರು ಕೂಡ ಈ ಬಗ್ಗೆ ಸೈಲೆಂಟಾಗಿಯೇ ಇದ್ದಾರೆ. ಮತ್ತೊಂದೆಡೆ ಟಾಕ್ಸಿಕ್‌ನಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೆಜಿಎಫ್‌ ಬಳಿಕ ಯಶ್‌ ನಟನೆಯ ಸಿನಿಮಾ ತೆರೆಗೆ ಬಂದು ಹಲವು ವರ್ಷಗಳು ಕಳೆದಿವೆ. ಹೀಗಾಗಿ ಟಾಕ್ಸಿಕ್‌ ಸಿನಿಮಾ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಟಾಕ್ಸಿಕ್‌ಗೆ ಆಕ್ಷನ್‌ ಕಟ್‌ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಈ ಬಿಗ್‌ ಬಜೆಟ್‌ ಸಿನಿಮಾ ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. 2026ರ ಮಾರ್ಚ್ 19ರಂದು ಈ ಸಿನಿಮಾ ತೆರೆಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+