Rakshit Shetty: ರಕ್ಷಿತ್ ಶೆಟ್ಟಿಗೆ ಎಐ ಫೋಟೋ ಬಳಸಿ ಹ್ಯಾಪಿ ಬರ್ತಡೇ ವಿಶ್ ಮಾಡಿದ ರಿಷಬ್ ಶೆಟ್ಟಿ, ಫೋಟೋ ವೈರಲ್!
Rakshit Shetty: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ನಟ ರಕ್ಷಿತ್ ಶೆಟ್ಟಿ ಅವರ ಜನ್ಮದಿನಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ಗೆ ಅಭಿಮಾನಿಗಳು ಭಿನ್ನವಾಗಿ ರಿಯಾಕ್ಟ್ ಮಾಡಿದ್ದಾರೆ. ರಕ್ಷಿತ್ ಹಾಗೂ ರಿಷಬ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಇಂದು ರಕ್ಷಿತ್ ಶೆಟ್ಟಿ ಅವರು ಜನ್ಮದಿನಾಚರಣೆಯ ಸಂಭ್ರಮದಲ್ಲಿ ಇದ್ದಾರೆ. ರಕ್ಷಿತ್ ಶೆಟ್ಟಿ ಅವರ ಗೆಳತನದ ಬಗ್ಗೆ ರಿಷಬ್ ಅವರು ಹಲವು ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಕಷ್ಟದ ಸಮಯದಲ್ಲಿ ಒಂದಾಗಿ ಸಾಗಿದ್ದನ್ನು ರಿಷಬ್ ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗಾ @rakshitshetty ✨ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲೂ ಇಂದು #HappyBirthday #RakshitShetty ಎನ್ನುವ ಹ್ಯಾಷ್ ಟ್ಯಾಗ್‌ಗಳು ವೈರಲ್ ಆಗುತ್ತಿವೆ.
ಎಐ ಫೋಟೋ: ಇನ್ನು ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದಕ್ಕೆ ರಿಷಬ್ ಶೆಟ್ಟಿ ಅವರು ಮಾಡಿರುವ ಪೋಸ್ಟ್‌ಗೆ ಎಐ ಕ್ರಿಯೇಟೆಡ್ ಫೋಟೋವನ್ನು ಬಳಸಲಾಗಿದೆ. ಇದು ಆಕರ್ಷಕವಾಗಿದೆ. ಅಲ್ಲದೇ ಈ ಹಿಂದೆ ರಿಷಬ್ ಅವರು ಹಾಗೂ ರಕ್ಷಿತ್ ಶೆಟ್ಟಿ ಅವರು ಒಂದಾಗಿ ಬೈಕ್‌ನಲ್ಲಿ ಹೋಗುವಾಗ ತೆಗೆದುಕೊಂಡಿರುವ ಸೆಲ್ಫಿ ಇದಾಗಿದೆ.
ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು.
— Rishab Shetty (@shetty_rishab) June 6, 2025
ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ.… pic.twitter.com/ZXdN9uTUOd
ಫ್ಯಾನ್ಸ್ ಹೇಳಿದ್ದೇನು: ಇನ್ನು ನಟರಾದ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರ ಬಾಂಧವ್ಯ ಹಾಗೂ ಪ್ರೀತಿ & ಆತ್ಮೀಯತೆಯ ವಿಶ್‌ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅವರು ಅವರ ಸಿನಿಮಾಗಳ ಬಗ್ಗೆ ಬೇಗ ಅಪ್ಡೇಟ್ಸ್ ಕೊಡಬೇಕು ಅಂತ ಡಿಮ್ಯಾಂಡ್ ಮಾಡಲಾಗಿದೆ. ಸ್ವಲ್ಪ ನಿಮ್ಮ ಫ್ರೆಂಡ್‌ಗೆ ಬೇಗ ಅಪ್ಡೇಟ್ ಕೊಡೋಕ್ ಹೇಳು ಅಣ್ಣ ಅಂತ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ನೀವೆಲ್ಲಾ ಎರಡು ಮೂರು ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಜನ ನಿಮ್ಮನ್ನ ಮರೆತು ಬಿಡ್ತಾರೆ. ಕರ್ನಾಟಕದಲ್ಲಿ ಚಿತ್ರಮಂದಿರಗಳು ಉಳಿಬೇಕೆಂದ್ರೆ ವರ್ಷಕ್ಕೆ ಎರಡಾದ್ರೂ ಸಿನಿಮಾ ಮಾಡ್ಲೇಬೇಕು. ಇಲ್ಲಂದ್ರೆ ನೀವು ಮಾಡಿರೋ ಸಿನಿಮಾ ಬಿಡುಗಡೆ ಮಾಡೋಕೆ ಥಿಯೇಟರ್‌ಗಳೇ ಮುಚ್ಚಿ ಹೋಗಿರ್ತವೆ. ನಮ್ಮೂರಲ್ಲಿ ಎರಡು ಥಿಯೇಟರ್ ಇದ್ವು, ಈಗ ಒಂದು ಇದೆ.😑 ಅಂತ ನಿಯತಿ ಎನ್ನುವ ಖಾತೆಯಿಂದ ಕಮೆಂಟ್ ಮಾಡಲಾಗಿದೆ.
ಅವರಿಗೆ ಬೇಗ ಸಿನಿಮಾ ಮಾಡೋಕೆ ಹೇಳಿ ಅಣ್ಣ.. ನಿಮ್ಮ ಮಾತು ಕೇಳ್ತಾರೆ ಅಲ್ವಾ..🥹 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ರಕ್ಷಿತ್ ಶೆಟ್ಟಿ ಅಣ್ಣ.. ಅಂತ ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.












Click it and Unblock the Notifications