Rishab Shetty remuneration: ಕಾಂತಾರ ಚಾಪ್ಟರ್‌-1 ಬಳಿಕ ನಟ ರಿಷಬ್‌ ಶೆಟ್ಟಿ ಸಂಭಾವನೆ ಭಾರೀ ಹೆಚ್ಚಳ: ವರದಿ

ನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಭಾರತೀಯ ಚಿತ್ರರಂಗದಲ್ಲಿ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. 'ಕಾಂತಾರ' ಹಾಗೂ ಅದರ ಪ್ರೇಕ್ವೆಲ್ 'ಕಾಂತಾರ-ಚಾಪ್ಟರ್ 1' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ, ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾಗಳಿಗೆ ಭಾರೀ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಗಳು ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಅಲ್ಲದೆ ಈಗ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಕೇಳಿದ್ದಾರೆ ಎಂಬುದು ಸಹ ರಿವೀಲ್‌ ಆಗಿದೆ.

ರಿಷಬ್ ಶೆಟ್ಟಿಯ ವೃತ್ತಿಜೀವನಕ್ಕೆ 'ಕಾಂತಾರ' ಸಿನಿಮಾಗಳು ಹೊಸ ದಿಕ್ಕನ್ನು ನೀಡಿದ್ದು ಗೊತ್ತೇ ಇದೆ. ನಿರ್ದೇಶನ ಮತ್ತು ನಾಯಕನಟನಾಗಿ ಅವರು ಕಟ್ಟಿದ ಕಾಂತಾರ ಪ್ರಪಂಚ ಕೇವಲ ವಿಮರ್ಶಾತ್ಮಕ ಪ್ರಶಂಸೆಯಷ್ಟೇ ಅಲ್ಲ, ಬಾಕ್ಸ್ ಆಫೀಸ್‌ನಲ್ಲೂ ದಾಖಲೆ ಗಳಿಕೆ ಮಾಡಿತು. ವರದಿಗಳ ಪ್ರಕಾರ, 'ಕಾಂತಾರ' ಚಿತ್ರದ ಲಾಭವನ್ನು ಹೋಂಬಾಳೆ ಫಿಲ್ಮ್ಸ್ ಜೊತೆ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ, ಒಬ್ಬ ಕಲಾವಿದನಾಗಿ ಅಷ್ಟೇ ಅಲ್ಲದೆ, ಸಿನಿಮಾ ವ್ಯವಹಾರ ತಿಳಿದ ವ್ಯಕ್ತಿಯಾಗಿಯೂ ಗಮನ ಸೆಳೆದಿದ್ದಾರೆ. ಕಾಂತಾರ ಬಳಿಕ ಮುಂದಿನ ಚಿತ್ರಗಳಿಗೆ ಅವರು ಬರೋಬ್ಬರಿ ₹80 ಕೋಟಿವರೆಗೆ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

Rishab Shetty

ಟಾಲಿವುಡ್‌ನಿಂದ ರಿಷಬ್‌ಗೆ ಹೆಚ್ಚು ಆಫರ್‌

'ಕಾಂತಾರ' ಯಶಸ್ಸಿನ ನಂತರ ರಿಷಬ್ ಶೆಟ್ಟಿಗೆ ವಿವಿಧ ಭಾಷೆಗಳ ಚಿತ್ರರಂಗಗಳಿಂದ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಿಂದ ದೊಡ್ಡ ಆಫರ್‌ಗಳು ಬಂದಿವೆ ಎನ್ನಲಾಗಿದೆ. ಇದೀಗ ಅವರು ಅಧಿಕೃತವಾಗಿ ಎರಡು ಭಾರೀ ಬಜೆಟ್ ತೆಲುಗು ಸಿನಿಮಾಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದು ಅವರು ಕನ್ನಡ ಚಿತ್ರರಂಗದ ಹೊರಗೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ ಎಂದು ಸಿನಿ ವಲಯ ಚರ್ಚೆಗಳು ಜೋರಾಗಿವೆ.

ರಿಷಬ್ ಶೆಟ್ಟಿ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಲಾಭ ಹಂಚಿಕೆ ಮಾದರಿಯನ್ನು ಕೈಬಿಟ್ಟು, ಪ್ರತಿ ಸಿನಿಮಾಗೆ ₹80 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ರಿಷಬ್ ಅವರ ಈ ನಿರ್ಧಾರ ನಿರ್ಮಾಪಕರಿಗೂ ಅಚ್ಚರಿ ಮೂಡಿಸಿದೆಯಂತೆ. ಆದರೆ ಈ ಕುರಿತಂತೆ ರಿಷಬ್ ಶೆಟ್ಟಿ ಅಥವಾ ಅವರ ತಂಡದಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಪ್ರಮುಖ ನಿರ್ಮಾಣ ಸಂಸ್ಥೆಗಳು ರಿಷಬ್ ಶೆಟ್ಟಿ ಅವರ ಕಥೆ ಆಯ್ಕೆ, ನಟನಾ ಸಾಮರ್ಥ್ಯ ಮತ್ತು ಜನರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಶಕ್ತಿ ಮೇಲೆ ಭಾರೀ ವಿಶ್ವಾಸ ಹೊಂದಿವೆ ಎನ್ನಲಾಗುತ್ತಿದೆ.

ಸಾಲು ಸಾಲು ಸಿನಿಮಾಗಳು

ರಿಷಬ್ ಶೆಟ್ಟಿಯ ಮುಂದಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪ್ರಮುಖವಾದುದು ತೆಲುಗು ಭಾಷೆಯ 'ಜೈ ಹನುಮಾನ್'. ಈ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದು, ಖ್ಯಾತ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಭಾರತೀಯ ಸಿನಿರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

ರಿಷಬ್ ಶೆಟ್ಟಿಯ ಸಂಭಾವನೆ ಬೇಡಿಕೆ ನಿಜವಾಗಿದೆಯೇ? ಅಥವಾ ಇದು ಕೇವಲ ಊಹಾಪೋಹವೇ? ಎಂಬ ಚರ್ಚೆಗಳು ಸಿನಿ ವಲಯದಲ್ಲಿ ಮುಂದುವರಿದಿವೆ. ಆದರೆ 'ಕಾಂತಾರ' ನಂತರ ರಿಷಬ್ ಶೆಟ್ಟಿ ಭಾರತೀಯ ಸಿನಿರಂಗದ ಅತ್ಯಂತ ಬೇಡಿಕೆಯ ನಟ-ನಿರ್ದೇಶಕರ ಪೈಕಿ ಒಬ್ಬರಾಗಿರುವುದಂತೂ ಸತ್ಯ. ಇನ್ನು ರಿಷಬ್‌ ಸಂಭಾವನೆ ಹೆಚ್ಚಿಸಿಕೊಂಡರೆ ತಪ್ಪೇನು? ಎಂದು ಜನ ಅವರ ಬೆನ್ನಿಗೆ ನಿಂತಿದ್ದಾರೆ. ರಿಷಬ್‌ ಶೆಟ್ಟಿಯ ಹವಾ ಈಗ ಕನ್ನಡ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+