Rashmika Mandanna: ನೆಚ್ಚಿನ ನಟನ ಸಿನಿಮಾದಲ್ಲೇ ವಿಲನ್‌ ಪಾತ್ರ ಒಪ್ಪಿಕೊಂಡ ರಶ್ಮಿಕಾ, ಶಾಕ್‌ನಲ್ಲಿ ಫ್ಯಾನ್ಸ್‌!

ನ್ಯಾಷನಲ್‌ ಕ್ರಶ್‌ ಖ್ಯಾತಿಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಫುಲ್‌ ಡಿಮ್ಯಾಂಡ್‌ನಲ್ಲಿರುವ ಟಾಪ್‌ ನಟಿಯರಲ್ಲಿ ಒಬ್ಬರು. ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಪುಷ್ಪ ಸಿನಿಮಾ ಬಳಿಕ ಶ್ರೀವಲ್ಲಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಮಿಳು ನಟ ಧನುಷ್ ಜೊತೆಗೆ‌ ನಟಿಸಿದ್ದ ಕುಬೇರ ಸಿನಿಮಾ ಕೂಡ ಸಕ್ಸಸ್‌ ಕಂಡಿದೆ. ತಮಿಳು, ತೆಲುಗು, ಬಾಲಿವುಡ್‌ನಲ್ಲಿ ಏಕಕಾಲಕ್ಕೆ ಮಿಂಚುತ್ತಿದ್ದಾರೆ ಕರ್ನಾಟಕದ ಬೆಡಗಿ. ಈಗ ಬಂದಿರುವ ಹೊಸ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ತುಸು ಬೇಸರವೂ ಉಂಟು ಮಾಡಬಹುದು. ಅಂತದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರಂತೆ ರಶ್ಮಿಕಾ. ಅದೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಕನ್ನಡದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ರಶ್ಮಿಕಾ ಅವರು ಬಳಿಕ ತೆಲುಗು ಸಿನಿಮಾಗಳಲ್ಲಿ ಸಾಲು ಸಾಲಾಗಿ ನಟಿಸಿ ದೊಡ್ಡಮಟ್ಟಕ್ಕೆ ಬೆಳೆದಿದ್ದಾರೆ. ಇಂದು ನಿರ್ದೇಶಕರ ನೆಚ್ಚಿನ ಆಯ್ಕೆಯ ನಟಿಯಾಗಿ ರಶ್ಮಿಕಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಒಂದು ರೀತಿ ಹೇಳುವುದಾದರೆ ಸಂಭಾವನೆ ವಿಚಾರದಲ್ಲೂ ರಶ್ಮಿಕಾ ಸ್ಟಾರ್‌ ನಟರಿಗೆ ಪೈಪೋಟಿ ನೀಡುತ್ತಿದ್ದಾರೆ. ಇಷ್ಟೆಲ್ಲ ಜನಪ್ರಿಯತೆ ಇರುವಾಗಲೇ ರಶ್ಮಿಕಾ ಅವರು ಶಾಕಿಂಗ್‌ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹೀರೋಯಿನ್‌ ಆಗಿ ಮಿಂಚಿರುವ ಅವರು ಇದೀಗ ವಿಲನ್‌ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ.

Rashmika Mandanna Turns Villain In Allu Arjun Atlee Much-Awaited Film

ನೆಚ್ಚಿನ ನಟನ ಎದುರೇ ವಿಲನ್‌!

ಹೌದು, ರಶ್ಮಿಕಾ ಮಂದಣ್ಣ ನೆಗೆಟಿವ್‌ ಪಾತ್ರಕ್ಕೆ ಒಪ್ಪಿಕೊಂಡಿದ್ದು, ಇದು ಕೂಡ ಹೈ ಬಜೆಟ್‌ ಸಿನಿಮಾದಲ್ಲಿ ಖಳನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪುಷ್ಪ ಖ್ಯಾತಿಯ ನಟ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅಲ್ಲು ಅರ್ಜುನ್‌ ಹಾಗೂ ಖ್ಯಾತ ನಿರ್ದೇಶಕ ಅಟ್ಲೀ ಅವರ ಬಹು ನಿರೀಕ್ಷಿತ ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಮುಖ್ಯ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ರಶ್ಮಿಕಾ ಸಂಪೂರ್ಣ ನೆಗೆಟಿವ್ ಶೇಡ್‌ನಲ್ಲಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಹೀರೋಯಿನ್‌ ಆಗಿ ಮಿಂಚಿರುವ ಹಲವು ನಟಿಯರು ತಮ್ಮ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣದೇ ಇದ್ದಾಗ, ತಮ್ಮ ಜನಪ್ರಿಯತೆ ತಗ್ಗಿದಾಗ ವಿಭಿನ್ನ ಪಾತ್ರಗಳಿಗೆ ಕೈಹಾಕುತ್ತಿದ್ದರು. ಈ ರೀತಿ ಹಲವು ನಟಿಯರು ಗೆದ್ದಿದ್ದೂ ಇದೆ. ಆದರೆ ರಶ್ಮಿಕಾ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ವಿಲನ್‌ ಪಾತ್ರ ಆರಿಸಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ನಟಿಯಾಗಿ ಹೃದಯದಲ್ಲಿರುವ ಅವರನ್ನು ವಿಲನ್‌ ಆಗಿ ಅವರ ಅಭಿಮಾನಿಗಳು ನಿಜಕ್ಕೂ ಒಪ್ಪಿಕೊಳ್ತಾರಾ? ಅನ್ನೋ ಚರ್ಚೆಗಳು ಕೂಡ ಜೋರಾಗಿದೆ.

Rashmika Mandanna Turns Villain In Allu Arjun Atlee Much-Awaited Film

ದೀಪಿಕಾ ಪಡುಕೋಣೆ, ಜಾಹ್ನವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಸೇರಿ ನಟಿಯರ ದಂಡೇ ಈ ಸಿನಿಮಾದಲ್ಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ 2027ರಲ್ಲಿ ತೆರೆಕಾಣಲಿದೆ. ಮುಂಬೈನಲ್ಲಿ ಎರಡು ಶೆಡ್ಯೂಲ್‌ಗಳು ಈಗಾಗಲೇ ಮುಗಿದಿವೆ ಮತ್ತು ಮುಂದಿನ ವರ್ಷವೂ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್‌ನಲ್ಲಿ ರಶ್ಮಿಕಾ ಅವರ ಪಾತ್ರದ ಶೂಟಿಂಗ್ ಆರಂಭವಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಡುವೆ ತೀವ್ರ ಆಕ್ಷನ್ ದೃಶ್ಯಗಳು ಮತ್ತು ಸಂಭಾಷಣೆಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಇನ್ನು ಖಳನಾಯಕಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಮೊದಲ ಬಾರಿಗೆ ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+