Ramya: ನನಗೆ ಮೋಸ ಆಗಿದೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದ ರಮ್ಯಾ!

ನಟಿ ರಮ್ಯಾ ಅವರು ನನಗೆ ಅನ್ಯಾಯವಾಗಿದೆ. ಆ ಅನ್ಯಾಯಕ್ಕೆ ಜಸ್ಟಿಸ್‌ ಸಿಗುವ ನಂಬಿಕೆ ಇದೆ ಎಂದು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಮೋಹಕ ತಾರೆ ನಟಿ ರಮ್ಯಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಈಗಲೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅವರು ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡುವುದಕ್ಕಾಗಿ ಕಾಯುತ್ತಿದ್ದಾರೆ. ಈ ರೀತಿ ಇರುವಾಗಲೇ ಸಿನಿಮಾರಂಗದಿಂದ ಆಗಿರುವ ಮೋಸದ ಬಗ್ಗೆ ಅವರು ಮಾತನಾಡಿದ್ದಾರೆ. ನನಗೆ ಅನ್ಯಾಯವಾಗಿದೆ. ಅದಕ್ಕೆ ನ್ಯಾಯ ಸಿಗುವ ವಿಶ್ವಾಸದಲ್ಲಿ ಇದ್ದೇನೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಿದ್ದೇನೆ ಎಂದಿದ್ದಾರೆ. ಈ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ನಟಿ ರಮ್ಯಾ ಅವರು ಕನ್ನಡ ಚಿತ್ರರಂಗದ ಎವರ್‌ ಗ್ರೀನ್‌ ನಟಿ. ಮೋಹಕ ನಟಿ ಅಂತಲೇ ಅವರು ಫೇಮಸ್‌. ಈಗ ಅವರು ನನಗೆ ಸಿನಿಮಾವೊಂದರಲ್ಲಿ ಅನ್ಯಾಯವಾಗಿದೆ. ಹೀಗಾಗಿ, ಕೋರ್ಟ್‌ ಮೊರೆ ಹೋಗಿದ್ದೇನೆ ಅಂತ ಹೇಳಿದ್ದಾರೆ. ಆ ಪ್ರಕರಣದಲ್ಲಿ ನನಗೆ ಮೋಸವಾಗಿದೆ. ನನಗೆ ಮೋಸ
ವಾಗಿರುವುದರಿಂದ ನಾನು ಫೈಟ್‌ ಮಾಡುತ್ತಿದ್ದೇನೆ. ನಾನು ನನಗೋಸ್ಕರ್‌ ಫೈಟ್‌ ಮಾಡದೆ ಇದ್ದರೆ, ಬೇರೆ ಯಾರು ಫೈಟ್ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

Ramya Says She Feels Injustice and Confident She Will Get Justice

ಹೌದು ನಟಿ ರಮ್ಯಾ ಅವರು ಹಾಸ್ಟೆಲ್ ಹುಡುಗರು ಸಿನಿಮಾದ ವಿಚಾರವಾಗಿ ಮಾತನಾಡಿದ್ದಾರೆ. ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇರುವುದರಿಂದ ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ಆದರೆ, ನನಗೆ ಅನ್ಯಾಯವಾಗಿದೆ ಅಂತ ಅವರು ಹೇಳಿಕೊಂಡಿದ್ದಾರೆ. ಇದರಿಂದ ಯಾವ ರೀತಿ ಅನ್ಯಾಯವಾಗಿದೆ ಎನ್ನುವುದನ್ನೂ ಅವರು ವಿವರಿಸಿದ್ದಾರೆ. ಸಿನಿಮಾ ತಂಡ ಹಾಗೂ ನನ್ನ ನಡುವೆ ಒಂದು ಅಗ್ರಿಮೆಂಟ್‌ ಇತ್ತು. ಆ ಅಗ್ರಿಮೆಂಟ್‌ನ ಪ್ರಕಾರ ಅವರು ನಡೆಸಿಕೊಂಡಿಲ್ಲ ಎಂದು ರಮ್ಯಾ ಹೇಳಿದ್ದಾರೆ. ಹಾಸ್ಟೆಲ್ ಹುಡುಗರು ಸಿನಿಮಾ ಬಿಡುಗಡೆಯಾಗುವುದಕ್ಕೂ ಹತ್ತು ದಿನಗಳ ಮುಂಚೆ ಟ್ರೈಲರ್‌ ರಿಲೀಸ್‌ ಮಾಡಿದ್ದರು.

ಅದರಲ್ಲಿ ‌ಅವರು ನನ್ನ ಪಾತ್ರದ ದೃಶ್ಯಗಳನ್ನು / ಅಭಿನಯಿಸಿದ ದೃಶ್ಯಗಳನ್ನು ಬಳಸಿಕೊಂಡಿದ್ದಾರೆ. ಇದು ತಪ್ಪು. ಇನ್ನು ಈ ವಿಚಾರವಾಗಿ ಪ್ರಿಲಿಮಿನರಿ ವ್ಯೂನಲ್ಲಿ ಕೋರ್ಟ್‌ ಅವರೇ ಹೇಳಿದ್ದಾರೆ. ಬ್ರೀಚ್‌ ಆಫ್‌ ಕಾಂಟ್ರಾಕ್ಟ್‌ ಆಗಿದೆ ಅಂತ ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೋರ್ಟ್‌ ಅವರು 50 ಲಕ್ಷ ಡೆಪಾಸಿಟ್‌ ಮಾಡುವುದಕ್ಕೆ ಹೇಳಿದ್ದಾರೆ. ಇದೀಗ ಮುಂದಿನ ಪ್ರಕ್ರಿಯೆ ನಡೆದಿದೆ ಎಂದು ರಮ್ಯಾ ಅವರು ವಿವರಿಸಿದ್ದಾರೆ.

ನನಗೆ ನ್ಯಾಯ ಸಿಗುವ ನಂಬಿಕೆ ಇದೆ: ಇನ್ನು ಈ ವಿಚಾರವಾಗಿ ಮುಂದುವರಿದು ಮಾತನಾಡಿರುವ ನಟಿ ರಮ್ಯಾ ಅವರು ಈ ಕೇಸ್‌ನಲ್ಲಿ ನನಗೆ ನ್ಯಾಯ ಸಿಗಲಿದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ. ಯಾರಿಗೂ ಈ ರೀತಿ ಆಗಬಾರದು ಎಂದಿದ್ದಾರೆ. ಅಲ್ಲದೆ ಒಬ್ಬ ಸ್ಟಾರ್‌ ನಟಿಯಾಗಿ ನಾನು ಹೊಸಬರ ಪ್ರಾಜೆಕ್ಟ್‌ ಮಾಡಿದ್ದೇನೆ. ಈ ರೀತಿ ಯಾರು ಮಾಡುತ್ತಾರೆ ಹೇಳಿ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ನಾನು ಸಪೋರ್ಟ್‌ ಮಾಡಿದ್ದೀನಿ ಫ್ರೀ ಆಫ್‌ ಕಾಸ್ಟ್‌ ಸಿನಿಮಾ ಮಾಡಿದ್ದೀನಿ. ನಾನು ಅವರಿಗೆ ದುಡ್ಡು ಕೊಡಿ ಅಂತ ಕೇಳಿಲ್ಲ. ಅಷ್ಟೊಂದು ಚೆನ್ನಾಗಿ ನಡೆಸಿಕೊಂಡಿದ್ದೀನಿ. ಅವರು ಸಹ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಆದರೆ ಅವರು ಹೇಳಿದ್ದೇ ಬೇರೆ ಮಾಡಿದ್ದೇ ಬೇರೆ ಅಂತ ನಟಿ ರಮ್ಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ.

Ramya Says She Feels Injustice and Confident She Will Get Justice

ಎಲ್ಲಾ ಕಡೆ ನನ್ನದೇ ಪೋಸ್ಟ್‌ರ್ ಹಾಕಿದ್ದಾರೆ. ಕ್ಯಾಮಿಯೋ / ಅತಿಥಿ ನಟಿ ಅಂತ ಎಲ್ಲೂ ಹಾಕಲೇ ಇಲ್ಲ. ನಾನೇ ಈ ಸಿನಿಮಾ ಹೀರೋಹಿನ್‌ ಎನ್ನುವಂತೆ ತೋರಿಸಿದ್ದಾರೆ. ಇದು ತಪ್ಪಲ್ಲವಾ. ನಾನು ಬೇರೆ ಸಿನಿಮಾ ಮಾಡಬೇಕಾದರೆ. ಆ ಸಿನಿಮಾದ ನಿರ್ಮಾಪಕರು ಅಥವಾ ನಿರ್ದೇಶಕರು ಸಹ ಅವರ ಸಿನಿಮಾದ ಮೂಲಕ ಕಮ್‌ ಬ್ಯಾಕ್‌ ಮಾಡಲಿ ಎಂದು ನಿರೀಕ್ಷೆ ಮಾಡುತ್ತಾರೆ ಎಂದು ರಮ್ಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+