Ramcharan Upasana: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟ ರಾಮ್‌ ಚರಣ್‌ ಪತ್ನಿ ಉಪಾಸನಾ ಕಾಮಿನೇನಿ

Ramcharan Upasana Kamineni Konidela: ಮೆಗಾಸ್ಟಾರ್‌ ಚಿರಂಜೀವಿ ಅವರ ಪುತ್ರ ಹಾಗೂ ತೆಲುಗು ಸೂಪರ್‌ಸ್ಟಾರ್‌ ರಾಮ್‌ ಚರಣ್‌ ಪತ್ನಿ ಉಪಾಸನಾ ಕಾಮಿನೇನಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶನಿವಾರ (ಜನವರಿ 31) ಈ ಸಂತಸದ ಸುದ್ದಿಯನ್ನು ರಾಮ್‌ ಚರಣ್‌ ಅವರ ತಂದೆ ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿರುದಾಗಿ ತಿಳಿಸಿದ್ದಾರೆ.

ನಟ ಚಿರಂಜೀವಿ ಅವರು ತಮ್ಮ ಪುತ್ರ ರಾಮ್‌ ಚರಣ್‌ಗೆ ಅವಳಿ ಜವಳಿ ಮಕ್ಕಳು ಜನಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಅಭಿಮಾನಿಗಳು, ಸಿನಿ ತಾರೆಯರಿಂದ ಶುಭಾಶಯಗಳ ಸರಮಾಲೆಯೇ ಹರಿದುಬರುತ್ತಿವೆ. ರಾಮ್‌ ಚರಣ್‌ ಹಾಗೂ ಉಪಾಸನಾ ದಂಪತಿಗೆ ಜೋಡಿ ಮಕ್ಕಳ ಆಗಮನವು ಕುಟುಂಬದಲ್ಲಿ ಅಪಾರ ಸಂತೋಷ ತಂದಿದೆ. ಈ ಕುರಿತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

Ramcharan

ಸಂತಸದ ಸುದ್ದಿ ಹಂಚಿಕೊಂಡ ಚಿರಂಜೀವಿ: ಈ ಶುಭ ಸುದ್ದಿಯನ್ನು ಮೆಗಾ ಸ್ಟಾರ್ ಚಿರಂಜೀವಿ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿರುವುದು ಅಪಾರ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ. ತಾಯಿ ಹಾಗೂ ಇಬ್ಬರು ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿರುವ ಚಿರಂಜೀವಿ, ಅಜ್ಜ-ಅಜ್ಜಿ ಆಗಿರುವ ತಮ್ಮ ಸಂತಸವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕುಟುಂಬಕ್ಕೆ ದೊರೆತ ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸಂತದಲ್ಲಿ ರಾಮ್‌ ಚರಣ್‌ ಕುಟುಂಬ: ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ಅವರು 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಗೆ ಮುನ್ನ ಇವರಿಬ್ಬರು ಕೆಲ ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು. 2023ರಲ್ಲಿ ಈ ದಂಪತಿಗೆ ಮೊದಲ ಬಾರಿಗೆ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರು ಇಡಲಾಗಿತ್ತು. ಈಗ ಮತ್ತೆ ಅವಳಿ ಮಕ್ಕಳ ಆಗಮನದಿಂದ ಕುಟುಂಬದ ಸಂತಸ ಮತ್ತಷ್ಟು ಹೆಚ್ಚಾಗಿದೆ.

ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ: ಉಪಾಸನಾ ಅವರು ಗರ್ಭಿಣಿಯಾಗಿರುವ ವಿಷಯವನ್ನು 2025ರ ದೀಪಾವಳಿ ಸಂದರ್ಭದಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಆ ವೇಳೆ ಹಂಚಿಕೊಳ್ಳಲಾದ ಸೀಮಂತದ ವಿಡಿಯೋದಲ್ಲಿ 'ಡಬಲ್ ಸಂಭ್ರಮ, ಡಬಲ್ ಪ್ರೀತಿ' ಎಂಬ ಸಂದೇಶದ ಮೂಲಕ ಅವಳಿ ಮಕ್ಕಳ ಸೂಚನೆ ನೀಡಲಾಗಿತ್ತು. ಅಭಿಮಾನಿಗಳು ನಿರೀಕ್ಷಿಸಿದಂತೆಯೇ ಇದೀಗ ಅವಳಿ ಮಕ್ಕಳು ಜನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+