Ramachari Serial: ಕನ್ನಡದಲ್ಲಿ ಅತಿ ಹೆಚ್ಚು ಐಟಂ ಡಾನ್ಸ್ ಮಾಡಿದ್ದು ಇವರೇ!
ಮನೆಯೊಂದು ಮೂರು ಬಾಗಿಲು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಝಾನ್ಸಿ ಸುಬ್ಬಯ್ಯ ಸದ್ಯ ರಾಮಚಾರಿ ಧಾರಾವಾಹಿಯಲ್ಲಿ ನಾಯಕಿ ಚಾರು ಅಮ್ಮ ಮಾನ್ಯತಾ ಆಗಿ ಅಭಿನಯಿಸುತ್ತಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿರುವ ಝಾನ್ಸಿ ಸುಬ್ಬಯ್ಯ ಈ ಹಿಂದೆ ಕನ್ನಡದಲ್ಲಿ ಅತಿ ಹೆಚ್ಚು ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದಾರೆ ಎಂದರೆ ನೀವು ನಂಬುತ್ತೀರಾ?
ರಾಮಚಾರಿಯ ಮಾನ್ಯತಾ ಈ ಹಿಂದೆ ಕನ್ನಡದ ಬೇಡಿಕೆಯ ಡಾನ್ಸರ್ ಆಗಿದ್ದರು ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಈ ವಿಚಾರವನ್ನು ಸ್ವತಃ ಅವರೇ ಹಂಚಿಕೊಂಡಿದ್ದು, ಕನ್ನಡದಲ್ಲಿ ಅತಿ ಹೆಚ್ಚು ಐಟಂ ಸಾಂಗ್‌ಗಳನ್ನು ನಾನೇ ಮಾಡಿದ್ದು. ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಝಾನ್ಸಿ ಸುಬ್ಬಯ್ಯ, 'ರಾಮಾಚಾರಿ ಧಾರಾವಾಹಿ ನನಗೆ ಒಂದು ಕಂಬ್ಯಾಕ್ ಇದ್ದಂತೆ. ಈ ಪಾತ್ರಕ್ಕೆ ಆಡಿಶನ್ ಕೂಡ ಮಾಡಿಲ್ಲ. ನೇರವಾಗಿ ನನನ್ನು ಮಾನ್ಯತಾ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಆರೋಗ್ಯ ಸರಿ ಇಲ್ಲದ ಕಾರಣ ನಟನೆಯಿಂದ ಎರಡು ವರ್ಷ ಅಂತರ ಕಾಯ್ದುಕೊಂಡಿದ್ದೆ. ಆದರೆ ಜನ ನನನ್ನು ಇಲ್ಲಿಯವರೆಗೂ ವಿಲನ್ ಆಗಿಯೇ ಗುರುತಿಸಿದ್ದಾರೆ. ಕೆಲವರು ಮಾತ್ರ ಬೈತಾರೆ. ಇನ್ನೂ ಹೆಚ್ಚಿನ ಜನ ಇಷ್ಟಪಟ್ಟು ಮಾತನಾಡುತ್ತಾರೆ' ಎಂದರು.
'ವಿಲನ್ ಪಾತ್ರ ಮಾಡಲು ನನಗೆ ಇಷ್ಟ. ಅದು ಒಂಥರಾ ಕಿಕ್ ಕೊಡುತ್ತದೆ. ಅಂದರೆ ನೆಗೆಟಿವ್ ಶೆಡ್‌ನಲ್ಲಿ ತುಂಬಾ ರೀತಿಯ ಪಾತ್ರಗಳಿರುತ್ತದೆ. ನಿಮಗೆ ಹೇಗೆ ಬೇಕೋ ಹಾಗೇ ಆ ಪಾತ್ರವನ್ನು ಚೆನ್ನಾಗಿ ಮಾಡಬಹುದು. ನಟನೆಗೆ ತುಂಬಾ ಅವಕಾಶ ಇರುತ್ತದೆ. ನನಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆ ಇದೆ. ಹೀಗಾಗಿ ವಿಭಿನ್ನವಾದ ಪಾತ್ರಗಳನ್ನು ಒಪ್ಪಿಕೊಳ್ಳುತ್ತೇನೆ' ಎಂದು ಹೇಳಿದರು.
'ನಾನು ಎರಡು ಸಿನಿಮಾಗಳಿಗೆ ನಾಯಕಿಯಾಗಿದ್ದೇನೆ. ಒಂದು ಒಂಬತ್ತು ಐಟಂ ಸಾಂಗ್‌ಗಳಿಗೆ ಡಾನ್ಸ್ ಮಾಡಿದ್ದೇನೆ. ಆಗ ಬೋಲ್ಡ್ ಆಗಿ ನಾನೊಬ್ಬಳೆ ಡ್ರೆಸ್ ಮಾಡತ್ತಿದ್ದದ್ದು. ಕನ್ನಡದಲ್ಲಿ ಅತಿ ಹೆಚ್ಚು ಐಟಂ ಸಾಂಗ್‌ಗಳನ್ನು ನಾನೇ ಮಾಡಿದ್ದು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ವಿಲನ್ ಆಗಿ ಮಾಡುವಾಗ ಎನೋ ಒಂಥರಾ ಖುಷಿ ಕೊಡುತ್ತದೆ. ನಾವು ನಿಜ ಜೀವನದಲ್ಲಿ ಹಾಗೆ ಇರುವುದಿಲ್ಲ. ಆದರೆ ಸ್ಟ್ರಿಪ್ಟ್ ಕೈಗೆ ಕೊಟ್ಟಾಗ ಕ್ಯಾಮರಾ ಮುಂದೆ ನಾನು ತುಂಬಾ ಎಂಜಾಯ್ ಮಾಡಿಕೊಂಡು ಪಾತ್ರ ಮಾಡುತ್ತೇನೆ' ಎಂದರು.

'ನನಗೆ ವಿಲನ್ ಪಾತ್ರ ಮಾಡಲು ನಿಜಕ್ಕೂ ಖುಷಿ ಕೊಡುತ್ತದೆ. ಬಹುಶಃ ಆ ತನ್ಮಯತೆ ನನಗೆ ಇಷ್ಟೊಂದು ಹೆಸರು ತಂದುಕೊಟ್ಟಿದೆ. ನನಗೆ ತುಂಬಾ ಖುಷಿ ಇದೆ ಜನ ನನ್ನ ಪಾತ್ರವನ್ನು ಒಪ್ಪಿಕೊಂಡಿರುವುದಕ್ಕೆ. ಮನೆಯೊಂದು ಮೂರು ಬಾಗಿಲು ಆದ ಮೇಲೆ ನಾನು ಬಿಟ್ಟಿದ್ದೆ. ಆದರೆ ಈ ಮಾನ್ಯತಾ ಪಾತ್ರದ ಮೂಲಕ ಜನ ನನ್ನನ್ನು ಮತ್ತೆ ಪ್ರೀತಿ ಮಾಡುತ್ತಿದ್ದಾರೆ. ಗುರುತಿಸಿ ಮಾತನಾಡಿಸುತ್ತಾರೆ. ಇದೊಂಥರಾ ನನಗೆ ಜನರಿಂದ ಸಿಕ್ಕ ಆಶೀರ್ವಾದ' ಎಂದು ಝಾನ್ಸಿ ಸುಬ್ಬಯ್ಯ ಹೇಳಿದ್ದಾರೆ.












Click it and Unblock the Notifications