ಲವ್‌ ಅಥವಾ ಆ್ಯಕ್ಟಿಂಗ್‌: ಮಗನ ಆಯ್ಕೆ ಕಂಡು ರಕ್ಷಿತಾ ಫುಲ್‌ ಶಾಕ್‌

ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಹೀರೋ ಆಗಿ ನಟಿಸಿದ ಚೊಚ್ಚಲ ಸಿನಿಮಾ ಅಪ್ಪು ಭರ್ಜರಿಯಾಗಿ ರೀ-ರಿಲೀಸ್ ಆಗಿದೆ. ಕರ್ನಾಟಕದಾದ್ಯಂತ ಅಪ್ಪು ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದ್ದು, ಮತ್ತೆ ದೊಡ್ಡ ಪರದೆ ಮೇಲೆ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

ಅಪ್ಪು ಸಿನಿಮಾ ರೀ-ರಿಲೀಸ್ ಮೊದಲ ಶೋನಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದಾರೆ. ಅಪ್ಪು ಸಿನಿಮಾದ ನಾಯಕಿ ನಟಿ ರಕ್ಷಿತಾ ಪ್ರೇಮ್‌ ಕೂಡ, ಮಗ ಸೂರ್ಯ ಜೊತೆಗೆ ಬಂದು ಬೆಂಗಳೂರಿನ ವೀರೇಶ್‌ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದರು. ಅಪ್ಪು ಜೊತೆಗಿನ ದೃಶ್ಯಗಳನ್ನು ನೋಡುತ್ತಿದ್ದಂತೆ ರಕ್ಷಿತಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

Rakshitha Prem Shocked by Son s Choice Between Love and Acting

ಇನ್ನು ಸಿನಿಮಾ ನೋಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಕ್ಷಿತಾ ಪ್ರೇಮ್‌, 'ಜನರು ಮೊದಲ ಸಲ ಅಪ್ಪು ನೋಡಿ ಹೇಗೆ ಅಪ್ಪಿಕೊಂಡಿದ್ದರೋ, ಅದೇ ರೀತಿ ಈಗಲೂ ಆ ಭಾವನೆ ಇದೆ. ಎಲ್ಲರಿಗೂ ಧನ್ಯವಾದಗಳು. ನಾನು ಅಪ್ಪು ಸಿನಿಮಾಗೆ ಆಯ್ಕೆಯಾಗಲು ಕಾರಣ ಪಾರ್ವತಮ್ಮ ಅಮ್ಮ ಅವರೇ, ಬೇರೆ ಯಾರೂ ಅಲ್ಲ. ಅವರೇ ಮುಖ್ಯ ಕಾರಣ. ಇವತ್ತು ನನ್ನ ವೃತ್ತಿ ಜೀವನ ಇಷ್ಟು ಮುಂದುವರೆಯಲು ಅವರು ಒಬ್ಬರೇ ಕಾರಣ. ಯಾವಾಗಲೂ ಅವರೇ ನನ್ನ ಸ್ಫೂರ್ತಿ. ಅಮ್ಮನಿಗೆ ಆ ನಂಬಿಕೆ ಇದಿದ್ದಕ್ಕೆ ನನಗೆ ಅವಕಾಶ ಕೊಟ್ಟರು. ನನಗೆ ಅವರೇ ಎಂದಿಗೂ ಸ್ಫೂರ್ತಿ' ಎಂದರು.

ನಟಿ ರಕ್ಷಿತಾ ಪ್ರೇಮ್‌ ಪುತ್ರ ಸೂರ್ಯ ಕೂಡ ಮಾಧ್ಯಮಗಳ ಜೊತೆ ಮಾತನಾಡಿದ್ದು, 'ಮೊದಲ ಬಾರಿಗೆ ಅಮ್ಮನನ್ನು ದೊಡ್ಡ ಪರದೆ ಮೇಲೆ ನೋಡುತ್ತಿದ್ದೇನೆ. ಹಾಗೂ ಅಪ್ಪು ಸರ್‌ ಅವರನ್ನು ಕೂಡ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ನೋಡುತ್ತಿದ್ದೇನೆ. ಅಪ್ಪು ಸಿನಿಮಾವನ್ನು ಅಮ್ಮನ ಫ್ಯಾನ್ಸ್‌ ಜೊತೆ ಅಪ್ಪು ಸರ್‌ ಫ್ಯಾನ್ಸ್‌ ಜೊತೆ ನೋಡಿ ತುಂಬಾ ಖುಷಿ ಆಯ್ತು' ಎಂದಿದ್ದಾರೆ.

Rakshitha Prem Shocked by Son s Choice Between Love and Acting

ಅಪ್ಪು ಸಿನಿಮಾ ಮೊದಲು ನೋಡಿದ್ದೆ. ಆದರೆ ಈ ರೀತಿ ಥಿಯೇಟರ್‌ನಲ್ಲಿ ಅಮ್ಮನ ಫ್ಯಾನ್ಸ್‌ ಜೊತೆ ಅಪ್ಪು ಸರ್‌ ಫ್ಯಾನ್ಸ್‌ ಜೊತೆ ನೋಡಿ ತುಂಬಾ ಖುಷಿಯಾಗಿದೆ ಎಂದು ಸೂರ್ಯ ಅಪ್ಪು ಅವರಿಂದ ಕಲಿಯೋದು ತುಂಬಾ ಇದೆ. ಮುಂದೆ ನಾನು ಚಿತ್ರರಂಗಕ್ಕೆ ಬಂದಮೇಲೆ ಕಲಿಯಬೇಕು ಎಂದಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ಲವ್‌ ಮಾಡೋದು ಕಲಿತೀಯಾ? ಆಕ್ಟಿಂಗ್‌ ಮಾಡೋದಾ? ಎಂದು ಕೇಳಿದ್ದಾರೆ. ಸೂರ್ಯ ನಾಚಿಕೊಂಡು ಎಲ್ಲಾ ಎಂದು ಹೇಳಿದ್ದು, ಮಗನ ಉತ್ತರ ಕೇಳಿ ರಕ್ಷಿತಾ ಶಾಕ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+