Rakshak Bullet: ದುಡಿದ್ರೆ ನಿಯತ್ತಾಗಿ ದುಡಿಬೇಕು ಎಂದಿದ್ಯಾಕೆ ರಕ್ಷಕ್ ಬುಲೆಟ್!
Rakshak Bullet: ರಕ್ಷಕ್ ಬುಲೆಟ್ ಅವರು ಒಂದಿಲ್ಲೊಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದೇ ಹೆಚ್ಚು. ಈ ಬಾರಿ ಅವರು ಜನರ ಹಾಗೂ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ. ಬಿಗ್‌ಬಾಸ್‌ಗೆ ಬಂದ ಮೇಲೆ ರಕ್ಷಕ್‌ಗೆ ಟ್ರೋಲ್ ಜಾಸ್ತಿಯಾಗಿತ್ತು. ರಕ್ಷಕ್ ಓವರ್ ಬಿಲ್ಡಪ್ ಕೊಡುತ್ತಾರೆ ಎನ್ನುವುದು ಟ್ರೋಲ್ ಆಗಿರುವ ವಿಷಯಗಳಲ್ಲಿ ಒಂದು. ಅಲ್ಲದೆ ಇನ್ನೂ ದೊಡ್ಡ ಸಿನಿಮಾಗಳನ್ನೇ ಮಾಡಿಲ್ಲ, ಅಭಿನಯದ ಮೂಲಕ ಗುರುತಿಸಿಕೊಂಡಿಲ್ಲ ಎನ್ನುವ ಮಾತುಗಳ ನಡುವೆಯೇ ಇದೀಗ ಅವರ ಒಂದು ನಿರ್ಧಾರಕ್ಕೆ ಜನರಿಂದ ಬೇಷ್‌ಗಿರಿ ಸಿಕ್ಕಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್‌ನ ಒಂದು ನಿರ್ಧಾರದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ರಕ್ಷಕ್ ಇದೀಗ ಕನ್ನಡದ ಖಾಸಗಿ ವಾಹಿನಿಯಲ್ಲಿ ಬರುತ್ತಿರುವ ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಕ್ಷಕ್ ಟ್ರೋಲ್ ಆಗಿರುವುದೇ ಹೆಚ್ಚು. ನೆಗಿಟಿವ್ ಆಗುತ್ತಿದ್ದ ಹಾಗೂ ಟ್ರೋಲ್‌ಗೆ ಗುರಿಯಾಗುತ್ತಿದ್ದ ರಕ್ಷಕ್ ಬುಲೆಟ್ ಅವರು ಇದೀಗ ಬೆಟ್ಟಿಂಗ್ ಆ್ಯಪ್ ಪ್ರಮೋಷನ್ ಬಗ್ಗೆ ಮಾತನಾಡಿದ್ದು. ಜನ ಇದಕ್ಕೆ ಮೆಚ್ಚಿಕೊಂಡಿದ್ದಾರೆ.

ಕನ್ನಡದ ಪ್ರಮುಖ ನಟರೇ ಬೆಟ್ಟಿಂಗ್ ಆ್ಯಪ್ ವಿಚಾರದಲ್ಲಿ ಭಾರೀ ಚರ್ಚೆ ಹಾಗೂ ಮುಜುಗರಕ್ಕೆ ಒಳಗಾಗಿರುವುದು ಇದೆ. ಆ ರೀತಿ ಇರುವಾಗಲೇ ರಕ್ಷಕ್ ಬುಲೆಟ್ ಅವರು ತೆಗೆದುಕೊಂಡಿರುವ ಒಂದು ನಿರ್ಧಾರ ಮೆಚ್ಚುಗೆಗೆ ಕಾರಣವಾಗಿದೆ.
ದುಡಿದ್ರೆ ನಿಯತ್ತಾಗಿ ದುಡಿಬೇಕು
ದುಡಿದ್ರೆ ನಿಯತ್ತಾಗಿ ದುಡಿಬೇಕು ಎಂದು ರಕ್ಷಕ್ ಬುಲೆಟ್ ಅವರು ಹೇಳಿದ್ದಾರೆ. ನಿಯತ್ತಾಗಿ ದುಡಿಯಲಿಲ್ಲ ಎಂದರೆ ಬೇಡವೇ ಬೇಡ. ನನಗೂ ಕೆಲವೊಂದು ಬೆಟ್ಟಿಂಗ್ ಆ್ಯಪ್‌ಗಳಿಗೆ ಪ್ರಮೋಷನ್ ಮಾಡಿ ಎಂದು ಮೆಸೇಜ್ ಹಾಗೂ ಕಾಲ್‌ಗಳು ಬಂದಿದ್ದವು ಎಂದು ಅವರು ಹೇಳಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ನನಗೆ ಇಷ್ಟ ಇಲ್ಲ ಅಂತ ಅವರು ಇನ್ಸಟಾ ವಿಡಿಯೋದಲ್ಲಿ ಹೇಳಿದ್ದಾರೆ. ಬೆಟ್ಟಿಂಗ್ ಆ್ಯಪ್ ವೊಂದರಿಂದ ಕರೆ ಮಾಡಿದ್ದೇವೆ ಎಂದು ವ್ಯಕ್ತಿಯೊಬ್ಬರು ಮಾತನಾಡಿರುವ ವಿಡಿಯೋವನ್ನು ರಕ್ಷಕ್ ಇನ್ಸಟಾದಲ್ಲಿ ಹಂಚಿಕೊಂಡಿದ್ದಾರೆ.

ಈ ರೀತಿಯ ಆ್ಯಪ್‌ಗಳಲ್ಲಿ ಯಾರಾದರೂ ಜನ ದುಡ್ಡು ಹಾಕಿ, ಕಳೆದುಕೊಂಡರೆ ನನ್ನನ್ನೇ ಬೈಯುತ್ತಾರೆ. ಯಾಕೆಂದರೆ ಕ್ಯಾಮೆರಾದ ಮುಂದೆ ನಾನೇ ಬರುತ್ತೇನೆ. ಜನ ನನ್ನ ವಿಡಿಯೋಗಳನ್ನು ನೋಡಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಕೋಟಿ ಕೊಟ್ಟರೂ ಈ ಕೆಲಸ ಮಾಡಲ್ಲ: ನನಗೆ ಕೋಟಿ ರೂಪಾಯಿ ಕೊಟ್ಟರೂ ಈ ಕೆಲಸವನ್ನು ಮಾಡಲ್ಲ ಎಂದು ರಕ್ಷಕ್ ಅವರು ಹೇಳಿದ್ದಾರೆ. ಬೆಟ್ಟಿಂಗ್ ಆ್ಯಪ್‌ನಿಂದ ಒಂದು ಲಕ್ಷ ರೂಪಾಯಿ ಆಫರ್ ಬಂದಿದ್ದು ಅದನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ. ಕಷ್ಟಪಟ್ಟು ದುಡಿಯಲಿ ಅದರಿಂದ ಬರುವ ದುಡ್ಡಿನಲ್ಲಿ ಸಂತೋಷವಾಗಿರಲಿ ಎಂದು ಅವರು ಹೇಳಿದ್ದಾರೆ.

ಜನರಿಂದ ಮೆಚ್ಚುಗೆ: ಇನ್ನು ರಕ್ಷಕ್ ನಿರ್ಧಾರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಇದಕ್ಕೆ ಬೆಂಕಿ ಇಮೋಜ್ ಕಮೆಂಟ್ ಮಾಡಿದ್ದಾರೆ.
ಇವತ್ತ ನೋಡಿ ಬ್ರೋ ನೀ ಕನ್ನಡಿಗರಿಗೆ ಪಕ್ಕಾ ಇಷ್ಟಾ ಆದ್ರಿ 🙌❤️ , Mecchade kanayya 😍 ಹಾಗೂ Olle decision Bro 🙌 Say No to betting Apps, ಇದೊಂದು ಕೆಲಸ ಒಳ್ಳೆದು ಮಾಡಿದ್ಯಾ 😍😍❤️ , ಇವತ್ತು ಮೆಚ್ಚಿದೆ ಕಣೋ ನಿನ್ನಾ 🤍🫰 Bullet Not In Reel❎Bullet In Real✅ ಎನ್ನುವ ಕಮೆಂಟ್‌ಗಳು ಬಂದಿವೆ.












Click it and Unblock the Notifications