Drone Pratap: ರಚಿತಾ ರಾಮ್‌ಗೆ ಕಣ್ ಹೊಡೆದ ಡ್ರೋನ್ ಪ್ರತಾಪ್, ಬೆಂಕಿ ರಿಪ್ಲೈ ಕೊಟ್ಟ ಡಿಂಪಲ್ ಕ್ವೀನ್
ಬಿಗ್‌ಬಾಸ್ ಬಳಿಕ ಡ್ರೋನ್ ಪ್ರತಾಪ್ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ಈ ಶೋನಲ್ಲಿ ಈಗ ಗಗನಾ ಹಾಗೂ ಪ್ರತಾಪ್ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಗಗನಾಗೆ ಸದಾ ಸರ್‌ಪ್ರೈಸ್‌ಗಳ ಸುರಿಮಳೆ ಹರಿಸುವ ಮೂಲಕ ಪ್ರತಾಪ್ ಗಮನ ಸೆಳೆಯುತ್ತಿದ್ದಾರೆ. ಈ ಕಾರ್ಯಕ್ರಮದ ಜಡ್ಜ್ ಆಗಿರುವ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಕೂಡ ಪ್ರತಾಪ್ ನೀಡುವ ಸರ್‌ಪ್ರೈಸ್‌ಗಳು ಇಷ್ಟವಾಗುತ್ತವೆ. ಡ್ರೋನ್ ಹಾರಿಸಿ ಫೇಮಸ್ ಆಗಿದ್ದ ಪ್ರತಾಪ್ ಇದೀಗ ಡಿಂಪಲ್ ಕ್ವೀನ್ ಕಣ್ಣು ಹೊಡೆದಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ವೇದಿಕೆಯಲ್ಲಿ ಪ್ರತಾಪ್ ರಚಿತಾ ರಾಮ್ ಕಣ್ಣು ಹೊಡೆದಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎವರ್‌ಗ್ರೀನ್ "ಗಾಳಿಯೋ ಗಾಳಿಯೋ" ಹಾಡಿಗೆ ಡ್ರೋನ್ ಪ್ರತಾಪ್ ಹಾಗೂ ಗಗನ ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇದರಲ್ಲಿ ರೋಪ್ ಡ್ಯಾನ್ಸ್ ಆಡುವ ಮೂಲಕ ಪ್ರತಾಪ್ ಅಲ್ಲಿದ್ದವರನ್ನ ದಂಗಾಗಿಸಿದ್ದಾರೆ. ಇದರ ನಡುವೆ ಪ್ರತಾಪ್ ನಟಿ ರಚಿತಾಗೆ ಕಣ್ಣು ಹೊಡೆದಿದ್ದಲ್ಲದೆ, ಅದನ್ನು ಎಲ್ಲರ ಮುಂದೆ ಹೇಳಿದ್ದಾರೆ.
ಡ್ರೋನ್ ಪ್ರತಾಪ್ ಪರ್ಫಾರ್ಮೆನ್ಸ್‌ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಫಿದಾ ಆಗಿದ್ದು, ಇದೇ ಮೊದಲ ಡುಯೆಟ್ ಸಾಂಗ್, ನಾನೇ ಪಿಕ್ಚರೈಸ್ ಮಾಡಿದ್ದು ಎಂದು ಸಿನಿಮಾ ಚಿತ್ರೀಕರಣವನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನು ಪ್ರತಾಪ್ ಕೂಡ ಮೇಲೆ ಹಾರಾಡುವಾಗ ಡ್ರೋನ್ ವ್ಯೂ ಇತ್ತು ಎಂದಿದ್ದಾರೆ.

ಇನ್ನು ಇದೇ ವೇಳೆ ನಾನು ನಿಮಗೆ ಕಣ್ಣು ಹೊಡೆದೆ ನೋಡಿದ್ರಾ ಎಂದು ರಚಿತಾಗೆ ಪ್ರತಾಪ್ ಕೇಳಿದ್ದಾರೆ. ಮೊದಲಿಗೆ ಇದನ್ನು ಕೇಳಿ ಶಾಕ್ ಆದ ರಚಿತಾ ರಾಮ್, ಹೇಗೆ ಕಣ್ ಹೊಡೆದೆ ತೋರಿಸು ಎಂದು ಕೇಳಿದ್ದಾರೆ. ಆಗ ಮತ್ತೊಮ್ಮೆ ಪ್ರತಾಪ್ ಎಲ್ಲರೆದುರೇ ಕಣ್ಣು ಹೊಡೆದು ತೋರಿಸಿದ್ದಾರೆ. ಆಗ ರಚಿತಾ ರಾಮ್ ಕಣ್ಣು ಹೊಡೆಯೋದು ಹಾಗಲ್ಲ ಕಣೋ, ನೋಡು ಹೀಗೆ ಎಂದು ಅವರೇ ಕಣ್ಣು ಹೊಡೆದು ತೋರಿಸಿದ್ದಾರೆ. ರಚಿತಾ ರಿಪ್ಲೈಗೆ ಕಾರ್ಯಕ್ರಮದಲ್ಲಿದ್ದವರು ಜೋರಾಗಿ ಕೂಗಿದ್ದಾರೆ.
ʼಗಗನಾನ ತಬ್ಬಿಕೊಳ್ಳಬೇಕು ಅನಿಸ್ತುʼ
ಇತ್ತೀಚೆಗೆ ಭರ್ಜರಿ ಬ್ಯಾಚುಲರ್ಸ್ ಜೋಡಿಗಳನ್ನು ತಮ್ಮ ಜೊತೆಗಿನ ಸ್ಪರ್ಧಿಗಳ ಮನೆಗೆ ಕರೆದೊಯ್ದು ಆತಿಥ್ಯ ನೀಡುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಡ್ರೋನ್ ಪ್ರತಾಪ್ ಅವರನ್ನ ಚಿತ್ರದುರ್ಗದಲ್ಲಿರುವ ಗಗನಾ ಅವರ ಮನೆಗೆ ಭೇಟಿ ಕರೆದುಕೊಂಡು ಹೋಗಿದ್ದರು. ಮನೆಯವರನ್ನ ಭೇಟಿಯಾಗಿ ಊರಿನ ಹಬ್ಬದಲ್ಲಿ ಪಾಲ್ಗೊಂಡು ಪ್ರತಾಪ್ ಫುಲ್ ಖುಷಿಯಾಗಿದ್ದರು. ಈ ವೇಳೆ ಗಗನಾ ಅವರ ಅಡುಗೆ ಮನೆಯಲ್ಲಿ ನಡೆದ ಸಂಗತಿಯೊಂದನ್ನು ಪ್ರತಾಪ್ ವೇದಿಕೆಯಲ್ಲಿ ರಿವೀಲ್ ಮಾಡಿದ್ದರು. "ಗಗನಾ ಅವ್ರೇ, ನೀವು ಅಡುಗೆಮನೆಯಲ್ಲಿ ತುಂಬಾ ಚೆನ್ನಾಗಿ ಕಾಣ್ತಿದ್ರಿ, ಆಗ ನಿಮ್ಮನ್ನ ತಬ್ಬಿಕೊಳ್ಳೋಣ ಅನಿಸ್ತು" ಎಂದು ಪ್ರತಾಪ್ ಆಸೆ ಬಿಚ್ಚಿಟ್ಟಿದ್ದರು. ಇದನ್ನು ಕೇಳಿ ಎಲ್ಲರೂ ಒಂದು ಕ್ಷಣ ಶಾಕ್ ಆದರು.












Click it and Unblock the Notifications