Pushpa 2 OTT Release: ಇಷ್ಟರಲ್ಲೇ ಒಟಿಟಿಗೆ ಬರಲಿದೆ ಪುಷ್ಪ 2
Pushpa 2 OTT: ಪುಷ್ಪ - 2 ಸಿನಿಮಾ ಹೊಸ ಹವಾ ಸೃಷ್ಟಿ ಮಾಡಿದೆ. ನಟ ಅಲ್ಲು ಅರ್ಜುನ್ ಅವರ ಮೇಲೆ ಕೆಲವು ವಿವಾದಗಳು ಕೇಳಿ ಬಂದಿವೆ. ಆದರೆ, ಇದು ಸಿನಿಮಾದ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತಿಲ್ಲ. ಅವರ ಅಭಿಮಾನಿಗಳು ಹಾಗೂ ಸಿನಿ ರಸಿಕರು ಪುಷ್ಪ - 2 ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಇದರ ನಡುವೆ ಪುಷ್ಪ - 2 ಸಿನಿಮಾ ಒಟಿಟಿಗೆ ಬರುವ ಬಗ್ಗೆ ಬಿಗ್ ಅಪ್ಡೇಟ್ಸ್ ಬಂದಿದೆ. ಪುಷ್ಪ ಸಿನಿಮಾ ಇದೀಗ ದೇಶದಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ರೀತಿ ಇರುವಾಗಲೇ ಸಿನಿಮಾದ ನಿರ್ಮಾಪಕರು ಪುಷ್ಪ -2 ಯಾವಾಗ ಒಟಿಟಿಗೆ ಬರಲಿದೆ ಎನ್ನುವ ಬಗ್ಗೆ ಬಿಗ್ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ. ಪುಷ್ಪ ಈಗಾಗಲೇ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬರೋಬ್ಬರಿ 1000 ಸಾವಿರ ಕೋಟಿ ರೂಪಾಯಿ ದಾಖಲೆ ಬರೆದಾಗಿದೆ. ಇದೀಗ ಈ ಸಿನಿಮಾ ಯಾವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಅಂತ ಜನ ಕಾತುರದಿಂದ ಕಾಯುತ್ತಿದ್ದಾರೆ.
ಪುಷ್ಪ -2 ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಗೆ ಜನ ಫಿದಾ ಆಗಿದ್ದಾರೆ. ಇನ್ನು ಈ ಸಿನಿಮಾ 1 ಸಾವಿರ ಕೋಟಿಯಿಂದ 1,500 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ದಾಖಲೆಯತ್ತ ಮುನ್ನುಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಇರುವಾಗಲೇ ಪುಷ್ಪ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಮಾಹಿತಿ ಬರುತ್ತಿದೆ. ಈ ರೀತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ನಷ್ಟವಾಗುವುದಕ್ಕಿಂತ ಒಟಿಟಿಯಲ್ಲಿ ಬೇಗ ರಿಲೀಸ್ ಮಾಡಿದರೆ, ನಷ್ಟ ತಪ್ಪಿಸಬಹುದು ಎನ್ನುವ ಲೆಕ್ಕಾಚಾರ ಸಿನಿಮಾದ ನಿರ್ಮಾಪಕರದ್ದು ಎಂದು ಹೇಳಲಾಗುತ್ತಿದೆ.

ಸಿನಿಮಾ ಬಿಡುಗಡೆಯಾದ ಮೊದಲ ವಾರ ಹಾಗೂ 15 ದಿನಗಳಿಗೆ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಸುದ್ದಿ ಬಂದಿತ್ತು. ಪುಷ್ಪ ಸಿನಿಮಾ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುವ ಹಂತದಲ್ಲೇ ಈ ರೀತಿ ಆಗಿರುವುದು ಸಿನಿಮಾ ತಂಡಕ್ಕೆ ತಲೆಬಿಸಿಯಾಗಿದೆ. ಅಲ್ಲದೆ ಅಲ್ಲು ಅರ್ಜುನ್‌ನ ಮೇಲೆ ನೆಗೆಟಿವ್ ಟಾಕ್ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಬಹಿರಂಗವಾಗಿಯೇ ಅಲ್ಲು ಅರ್ಜುನ್ ಮೇಲೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇದು ತೆಲುಗು ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಪುಷ್ಪ - 2 ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಸಿನಿಮಾದ ನಿರ್ಮಾಪಕರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಪುಷ್ಪ -2 ಸಿನಿಮಾ ಡಿಸೆಂಬರ್ 5ಕ್ಕೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿತ್ತು. 1200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ಈಗಲೂ ಉತ್ತಮ ಗಳಿಗೆ ಆಗುತ್ತಿದ್ದು, ಕ್ರಿಸ್ಮಸ್ ಹಾಗೂ ಹೊಸ ವರ್ಷ ಹಿನ್ನೆಲೆಯಲ್ಲಿ ಇನ್ನಷ್ಟು ದುಡ್ಡು ಮಾಡುವ ಲೆಕ್ಕಾಚಾರದಲ್ಲಿ ಸಿನಿಮಾ ತಂಡ ಇದೆ.

ಒಟಿಟಿಗೆ ಯಾವಾಗ ಬರುತ್ತೆ ಪುಷ್ಪ - 2
ಪುಷ್ಪ - 2 ಒಟಿಟಿಗೆ ಬರುವ ಬಗ್ಗೆ ಮೈತ್ರಿ ಮೂವಿ ಮೇಕರ್ಸ್ (Mythri Movie Makers) ಬಿಗ್ ಅಪ್ಡೇಟ್ಸ್ ಕೊಟ್ಟಿದೆ. ಹಾಲಿಡೆ ಸೀಸನ್‌ನಲ್ಲಿ ಚಿತ್ರಮಂದಿರಗಳಲ್ಲಿ ಎಂಜಾಯ್ ಮಾಡಿ, ನಂತರ ನಾವು ಬರುತ್ತೇವೆ ಎಂದಿದೆ. 56 ದಿನಗಳ ನಂತರ ಒಟಿಟಿಗೆ ಬರುವುದಾಗಿಯೂ ಅಲ್ಲಿಯವರೆಗೆ ಬರುವುದಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ, ಈ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ಒಟಿಟಿಗೆ ಬರುವುದು ಬಹುತೇಕ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಇನ್ನು ಒಟಿಟಿಗೆ ಬರುವ ನಿಖರ ದಿನಾಂಕದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ಸ್ ಕೊಡುವುದಾಗಿ ಹೇಳಲಾಗಿದೆ.












Click it and Unblock the Notifications