Pushpa 2: ರಶ್ಶು-ಅಲ್ಲು ಕಪಲ್ ಪೋಸ್ಟರ್ ರಿಲೀಸ್, ದೀಪಾವಳಿಗೆ ಕ್ರೇಜ್ ಹೆಚ್ಚಿಸಿದ ಪುಷ್ಪಾ-2
Pushpa-2 Latest Update: ಪುಷ್ಪಾ 2 ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಕ್ರೇಜ್ ಹೆಚ್ಚುಸುತ್ತಿದೆ. ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಪ್ರಚಾರ ಕಾರ್ಯ ಆರಂಭಿಸಲಿರುವ ಚಿತ್ರತಂಡ ಒಂದೊಂದೆ ಸ್ಟಿಲ್ ಬಿಡುಗಡೆ ಮಾಡುವ ಮೂಲಕ ಕುತೂಹಲ ಸೃಷ್ಟಿಸುತ್ತಿದೆ. ಈ ಸಿನಿಮಾದಿಂದ ಮೊದಲ ಬಾರಿಗೆ ನಟಿ ರಶ್ಮೀಕಾ ಮಂದಣ್ಣಾ ಹಾಗೂ ಅಲ್ಲು ಅರ್ಜುನ್ ಜೊತೆಗೆ ಕಪಲ್ ಫೋಟೋ ದೀಪಾವಳಿ ವೇಳೆ ರಿಲೀಸ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ತೆಲುಗು ನಟ ಅಲ್ಲು ಅರ್ಜುನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಮೊದಲ ಭಾಗ 'ಪುಷ್ಪಾ' ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿತ್ತು. ಅದರ ಮುಂದುವರಿಗೆ ಭಾಗ 'ಪುಷ್ಪ-2' ರಿಲೀಸ್‌ಗೆ ಕೆಲವೇ ವಾರಗಳಷ್ಟೇ ಬಾಕಿ ಇವೆ. ಪೋಸ್ಟ ಪ್ರೊಡಕ್ಷನ್, ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿಸಿರುವ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಲಿದೆ.

ಅದರ ಭಾಗವಾಗಿಯೇ ದೀಪಾವಳಿಯ ಶುಭಾಯಷ ಕೋರಿದ ಪೋಸ್ಟ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟ್‌ರ್‌ನಲ್ಲಿ ನಟಿ ರಶ್ಮಿಕಾ ಹಾಗೂ ನಟ ಅಲ್ಲು ಅರ್ಜುನ್ ಅವರು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್ ಪೋಸ್ಟರ್ ಹೆಚ್ಚು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ.
ಕಪಲ್ ಪೋಸ್ಟರ್ ನಲ್ಲಿ ಏನಿದೆ?
ಈ ಫೋಟೋವು ಅಡುಗೆ ಮನೆಯಲ್ಲಿ ಚಿತ್ರೀಕರಿಸಿದ ರೀತಿಯಲ್ಲಿ ಕಾಣುತ್ತದೆ. ಮೊದಲ ಭಾಗದ ಪುಪ್ಟಾ ಕ್ಲೈಮ್ಯಾಕ್ ವೇಳೆ ನಟಿ ರಶ್ಮಿಕಾ ಅಲ್ಲು ಅರ್ಜುನ್‌ಗೆ ಮದುವೆ ಆಗಿತ್ತು. ಭಾಗ ಎರಡರಲ್ಲಿ ಈ ದಂಪತಿ ಅಡುಗೆ ಮನೆಯಲ್ಲಿ ರೋಮ್ಯಾಟಿಕ್ ಮೂಡ್‌ನಲ್ಲಿರುವಂತೆ ಪೋಸ್ಟರ್‌ನಲ್ಲಿ ಕಾಣಿಸುತ್ತಾರೆ.

ಕತ್ತಲ್ಲಿ ತಾಳಿ, ತಲೆಗೆ ಟಾವೆಲ್ ಸುತ್ತಿಕೊಂಡು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣಾ ಅವರ ಸನೀಹ ಮುತ್ತಿಕ್ಕುವಂತೆ ನಿಂತ ದೃಶ್ಯ, ಒಬ್ಬರೊಬ್ಬರು ರೋಮ್ಯಾಂಟಿಕ್ ಆಗಿ ನೋಡುವಂತೆ ಪೋಸ್ಟರ್‌ನಲ್ಲಿ ಕಾಣಿಸುತ್ತಿದೆ. ಪೋಸ್ಟರ್ ರಶ್ಮಿಕಾ ಹಂಚಿಕೊಂಡ ಮೂರು ಗಂಟೆಗಳಲ್ಲಿ 09 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿಕೊಂಡಿದ್ದಾರೆ. ಅಲ್ಲು ಅರ್ಜುನ್ ಟ್ಯಾಗ್ ಮಾಡಲಾಗಿದೆ.
ಒಂದು ದಿನ ಮೊದಲೇ ರಿಲೀಸ್
ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪೋಸ್ಟ್‌ನಲ್ಲಿ ಡಿಸೆಂಬರ್ 6ರ ಬದಲಾಗಿ ಒಂದು ದಿನ ಮೊದಲೇ ಡಿ.5ರಂದು ಪುಷ್ಪಾ ಥಿಯೇಟರ್‌ಗೆ ಬರಲಿದೆ ಎಂದು ತಿಳಿಸಲಾಗಿತ್ತು. ಇನ್ನೂ ಕರ್ನಾಟಕದಲ್ಲಿ ವಿತರಕರೊಬ್ಬರು ಈ ಸಿನಿಮಾ ಕೆಜಿಎಫ್ 2 ಗಿಂತಲೂ ದೊಡ್ಡ ಸಕ್ಸಸ್ ತಂದು ಕೊಡುತ್ತದೆ. ಗೆಲ್ಲಲಿದೆ ಎಂದು ಹೇಳುವ ಮೂಲಕ ಯಶ್, ಯಶ್ ಸಿನಿಮಾ ಪ್ರಸ್ತಾಪಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದರು.
ವಿವಾದ ಮಾಡಿಕೊಂಡಿತಾ ಪುಷ್ಪಾ ಟೀಂ
ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಆಕ್ರೋಶ ವ್ಯಕ್ತವಾದ ಬಲಿಕ ಅವರು ಕ್ಷಮೆ ಕೇಳಿದ್ದಾರೆ. ಸಮಜಾಯಿಸಿ ನೀಡಿದ್ದಾರೆ. ನಾನು ಯಾರಿಗೂ, ಯಾವ ಸಿನಿಮಾಗೂ ಅಪಮಾನ ಮಾಡಿಲ್ಲ. ಪುಷ್ಟಾ ಸಿನಿಮಾ ಸಹ ಒಳ್ಳೆಯ ಸಕ್ಸಸ್ ಕಾಣಲಿ ಎಂದು ವಿತರಕನಾಗಿ ಹಾರೈಸಿದ್ದೇನೆ ಎಂದು ಹೇಳಿದ್ದಾರೆ.
ಈಗಷ್ಟೇ ಮಾತ್ರವಲ್ಲದೇ, ಕಳೆದ ಬಾರಿ ರಿಲೀಸ್ ಸಮಯದಲ್ಲೂ ಒಂದು ಪುಷ್ಪಾ 10 ಕೆಜಿಎಫ್‌ಗೆ ಸಮಾ ಎಂದು ಹೇಳುವ ಮೂಲಕ ಹಲವರು ವಿವಾದ ಸೃಷ್ಟಿಸಿದ್ದರು. ಆದರೆ ಕೆಜಿಎಫ್‌ನಷ್ಟು ದೊಡ್ಡ ಸಕ್ಸಸ್ ಕಾಣದೇ ಒಂದು ಹಂತಕ್ಕೆ ಉತ್ತಮ ಸಿನಿಮಾ ಎಂದೆನಿಸಿಕೊಂಡಿತು.












Click it and Unblock the Notifications