ನಟ ಜೂನಿಯರ್‌ ಎನ್‌ಟಿಆರ್‌ ಪತ್ನಿ, ಕುಟುಂಬಕ್ಕೆ ನನ್ನ ಮೇಲೆ ಕೋಪ ಇದೆ: ನಿರ್ದೇಶಕ ಪ್ರಶಾಂತ್‌ ನೀಲ್‌

ಟಾಲಿವುಡ್‌ನ 'ಮ್ಯಾನ್ ಆಫ್ ಮಾಸಸ್' ಜೂನಿಯರ್ ಎನ್‌ಟಿಆರ್ (Jr NTR) ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಡ್ರಾಗನ್' (Dragon) ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಮೇ 20ರಂದು ನಟನ ಜನ್ಮದಿನದ ಅಂಗವಾಗಿ ಹೊರಬಂದ ಈ ಟೀಸರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರ ವಿಭಿನ್ನ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈ ಹೊಸ ಅವತಾರದ ಹಿಂದೆ ನಟ ಪಟ್ಟಿರುವ ಕಠಿಣ ಪರಿಶ್ರಮದ ರೋಚಕ ಕಥೆಯನ್ನು ಸ್ವತಃ ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಬಿಚ್ಚಿಟ್ಟಿದ್ದಾರೆ.

ಸಲಹೆ ನೀಡಿದ್ದಷ್ಟೇ, ತಾರಕ್‌ ಮಾಡಿದ್ದೇ ಬೇರೆ

ಸಂದರ್ಶನವೊಂದರಲ್ಲಿ ಮಾತನಾಡಿರುವ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರದ ಪಾತ್ರಕ್ಕಾಗಿ ಜೂನಿಯರ್ ಎನ್‌ಟಿಆರ್ ಕೇವಲ 4 ತಿಂಗಳಲ್ಲಿ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸುಮಾರು ಒಂದೂವರೆ ವರ್ಷದ ಹಿಂದೆ ಸಿನಿಮಾ ಶೂಟಿಂಗ್‌ ಆರಂಭವಾಗುವ ಮುನ್ನ ಲುಕ್ ಟೆಸ್ಟ್ ಮಾಡಲಾಗಿತ್ತು. ಆ ವೇಳೆ ಪಾತ್ರಕ್ಕೆ ಮತ್ತಷ್ಟು ಹೊಂದಿಕೊಳ್ಳಲು ತಾರಕ್‌ಗೆ ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಿದ್ದೆ. ಈ ಸಿನಿಮಾದಲ್ಲಿ ನೀನು ಹಂತಕನ ಪಾತ್ರ ಮಾಡುತ್ತಿರುವುದರಿಂದ, ಸ್ವಲ್ಪ ಸಣ್ಣಗಾದರೆ ಪಾತ್ರಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ನಾನು ಹೇಳಿದ್ದೆ" ಎಂದು ಪ್ರಶಾಂತ್ ನೀಲ್ ನೆನಪಿಸಿಕೊಂಡಿದ್ದಾರೆ.

Prashanth Neel

ವರ್ಕೌಟ್‌ ಬೇಡ ಅಂದ್ರೂ ತಾರಕ್‌ ಕೇಳಲಿಲ್ಲ

ಆದರೆ, ಈ ಮಾತನ್ನು ಸವಾಲಾಗಿ ಸ್ವೀಕರಿಸಿದ ಜೂನಿಯರ್ ಎನ್‌ಟಿಆರ್, ಮುಂದಿನ 4 ತಿಂಗಳು ಯಾವುದೇ ಶೂಟಿಂಗ್ ಮಾಡದೆ ತೂಕ ಇಳಿಸಿಕೊಳ್ಳಲು ಸಂಪೂರ್ಣವಾಗಿ ತೊಡಗಿಸಿಕೊಂಡರು. ಒಂದು ಹಂತದಲ್ಲಿ ಅವರು ತುಂಬಾ ನಿಶ್ಯಕ್ತರಾಗಿ, ಕಳೆಗುಂದಿದಂತೆ ಕಂಡಾಗ ಪ್ರಶಾಂತ್ ನೀಲ್ ಅವರೇ ವರ್ಕೌಟ್ ನಿಲ್ಲಿಸುವಂತೆ ಹಲವು ಬಾರಿ ಮನವಿ ಮಾಡಿದ್ದರಂತೆ. ಆದರೆ ತಾರಕ್ ಮಾತ್ರ ತಮ್ಮ ಹಠ ಬಿಡಲಿಲ್ಲ ಎಂದಿದ್ದಾರೆ.

ಅಂದು ಪ್ರಾಣಭಯದಿಂದ ಓಡಿಹೋಗಿದ್ದೆ: ಅಂಡರ್‌ವರ್ಲ್ಡ್‌ಗೆ ಹೆದರಿ ಚಿತ್ರರಂಗ ತೊರೆದಿದ್ದ
ಅಂದು ಪ್ರಾಣಭಯದಿಂದ ಓಡಿಹೋಗಿದ್ದೆ: ಅಂಡರ್‌ವರ್ಲ್ಡ್‌ಗೆ ಹೆದರಿ ಚಿತ್ರರಂಗ ತೊರೆದಿದ್ದ "ಸೈನಿಕ" ನಟಿ ಸಾಕ್ಷಿ ಶಿವಾನಂದ್

ಪ್ರಶಾಂತ್ ನೀಲ್ ಮೇಲೆ ಎನ್‌ಟಿಆರ್ ಕುಟುಂಬ ಕೋಪ

ಜೂನಿಯರ್ ಎನ್‌ಟಿಆರ್ ಅವರ ಈ ದಿಢೀರ್ ಮತ್ತು ಕಠಿಣ ತೂಕ ಇಳಿಕೆಯನ್ನು ಕಂಡು ಅವರ ಕುಟುಂಬ ಹಾಗೂ ಆಪ್ತರು ಆತಂಕಗೊಂಡಿದ್ದರು. "ತಾರಕ್‌ ಅವರ ತೂಕ ಇಳಿಕೆಯನ್ನು ನೋಡಿ ಅವರ ಪತ್ನಿ, ತಾಯಿ, ಸ್ನೇಹಿತರು ಮತ್ತು ನನ್ನ ಇಡೀ ಚಿತ್ರತಂಡ ನನ್ನ ಮೇಲೆಯೇ ಕೋಪ ಮಾಡಿಕೊಂಡಿದ್ದರು. ಎಲ್ಲರೂ ನನ್ನನ್ನೇ ಬೈಯುತ್ತಿದ್ದರು. ಆದರೆ ನಾನು ಅವರಿಗೆ ಸ್ವಲ್ಪ ತೂಕ ಇಳಿಸಲು ಮಾತ್ರ ಹೇಳಿದ್ದೆ. ತಾರಕ್ ಇಷ್ಟೊಂದು ಕಠಿಣವಾಗಿ ಕಷ್ಟಪಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಕೊನೆಗೆ ಎಲ್ಲರಿಗೂ ಸಮಜಾಯಿಷಿ ನೀಡಬೇಕಾಯಿತು" ಎಂದು ಪ್ರಶಾಂತ್ ನೀಲ್ ನಗುತ್ತಾ ಹೇಳಿದ್ದಾರೆ. ತಾರಕ್‌ ಪಟ್ಟ ಕಷ್ಟವನ್ನು ಕಣ್ಣಾರೆ ನೋಡುವುದು ಚಿತ್ರತಂಡಕ್ಕೂ ಇಷ್ಟವಾಗುತ್ತಿರಲಿಲ್ಲ ಎಂದಿದ್ದಾರೆ.

ನಿರ್ದೇಶಕರು ತೂಕ ಇಳಿಸುವಂತೆ ಹೇಳಿದ ತಕ್ಷಣವೇ ಜೂನಿಯರ್ ಎನ್‌ಟಿಆರ್ ಆಕ್ಷನ್ ಮೂಡ್‌ಗೆ ಬಂದಿದ್ದರು. ಮಾತುಕತೆ ಮುಗಿದ ಕೇವಲ 30 ನಿಮಿಷಗಳಲ್ಲಿ ಅವರ ಫಿಟ್‌ನೆಸ್ ಟ್ರೈನರ್ ಸ್ಥಳಕ್ಕೆ ಆಗಮಿಸಿದ್ದರು ಮತ್ತು ಮರುದಿನ ಬೆಳಗ್ಗೆಯಿಂದಲೇ ವರ್ಕೌಟ್ ಆರಂಭವಾಗಿತ್ತು. ಇದಕ್ಕಾಗಿ ಸಿನಿಮಾದ ಶೂಟಿಂಗ್ ಅನ್ನು ಕೆಲವು ತಿಂಗಳು ಮುಂದೂಡಲಾಗಿತ್ತು. ಇದು ಕೇವಲ ತೂಕ ಇಳಿಸುವ ಪ್ರಕ್ರಿಯೆಯಾಗಿರಲಿಲ್ಲ. ಬದಲಿಗೆ ದೇಹವನ್ನು ಹೆಚ್ಚು ಸ್ಲಿಮ್ ಮತ್ತು ಚುರುಕಾಗಿಸುವ ಪ್ರಯತ್ನವಾಗಿತ್ತು ಎಂದು ಜೂನಿಯರ್ ಎನ್‌ಟಿಆರ್ ಅವರ ಫಿಟ್‌ನೆಸ್ ಟ್ರೈನರ್ ಕುಮಾರ್ ಮನ್ನವ ಹೇಳಿದ್ದಾರೆ.

Prashanth Neel

ವರ್ಕೌಟ್ ಶೈಲಿ ಬದಲಾವಣೆ

ಭಾರೀ ತೂಕ ಎತ್ತುವ (Heavy Weight Lifting) ವರ್ಕೌಟ್ ನಿಲ್ಲಿಸಿ, ಕಾರ್ಡಿಯೋ (Cardio) ಮತ್ತು ಫಂಕ್ಷನಲ್ ಮೂವ್‌ಮೆಂಟ್‌ಗಳ ಕಡೆ ಗಮನ ಹರಿಸಲಾಯಿತು. ದಿನಕ್ಕೆ 45ರಿಂದ 90 ನಿಮಿಷಗಳ ಕಾಲ ಕಠಿಣ ತರಬೇತಿ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಬಾಡಿ ಬಿಲ್ಡಿಂಗ್ ಮಾಡಲು ಹೈ-ಪ್ರೋಟೀನ್ ಡಯಟ್ ಮಾಡಲಾಗುತ್ತದೆ. ಆದರೆ ಇಲ್ಲಿ ಈ ಹಿಂದೆ ಗಳಿಸಿದ್ದ ಸ್ನಾಯುವಿನ ತೂಕವನ್ನು ಕಡಿಮೆ ಮಾಡಬೇಕಾಗಿದ್ದರಿಂದ, ಕಡಿಮೆ ಪ್ರೋಟೀನ್ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ಈ ಎಲ್ಲ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತ ಜೂನಿಯರ್ ಎನ್‌ಟಿಆರ್, ಈಗ 'ಡ್ರಾಗನ್' ಚಿತ್ರದಲ್ಲಿ ತಮ್ಮ ಅತ್ಯಂತ ಭೀಕರ ಮತ್ತು ವಿಭಿನ್ನ ಲುಕ್ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ.

ನಟ ಜೂನಿಯರ್‌ ಎನ್‌ಟಿಆರ್‌ ಅವರು ಕೆಲ ತಿಂಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಗಾಬರಿಗೊಂಡಿದ್ದರು. ಉತ್ತಮ ದೇಹ ಹೊಂದಿದ್ದ ತಾರಕ್‌ ದಿಢೀರ್‌ ಗುರುತೇ ಸಿಗದಂತೆ ಸಣ್ಣ ಆಗಿದ್ದರು. ಮತ್ತೊಂದೆಡೆ ತಾರಕ್‌ಗೆ ಅನಾರೋಗ್ಯ ಎಂದೆಲ್ಲ ವದಂತಿಯೂ ಹಬ್ಬಿತ್ತು. ಆದರೆ ಇದು ಡ್ರಾಗನ್‌ ಚಿತ್ರಕ್ಕಾಗಿ ಮಾಡಲಾಗಿದ್ದ ತಯಾರಿ ಎಂದು ಪ್ರಶಾಂತ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಸದ್ಯ ತಾರಕ್‌ ಅವರ ಹೊಸ ಲುಕ್‌ ಅಭಿಮಾನಿಗಳ ನಿದ್ದೆಗೆಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+