ಕ್ಯಾನ್ಸರ್‌ನಿಂದ ತಂದೆ ನಿಧನ, ಖಿನ್ನತೆಯಲ್ಲಿದ್ದಾಗ ಸಾಕಷ್ಟು ಸಿನಿಮಾ ಅವಕಾಶ ಕೈತಪ್ಪಿತು: ಕಣ್ಣೀರಿಟ್ಟ ನಟಿ ಪಾಯಲ್‌ ರಜಪೂತ್‌

ಡಾಲಿ ಧನಂಜಯ್‌ ನಟನೆಯ "ಹೆಡ್‌ ಬುಷ್‌" ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ನಟಿ ಪಾಯಲ್ ರಜಪೂತ್ (Payal Rajput) ವೇದಿಕೆಯಲ್ಲಿ ಬಿಕ್ಕಳಿಸಿ ಅತ್ತಿದ್ದಾರೆ. ತಮ್ಮ 'RX 100' ಸಿನಿಮಾದ ಮೂಲಕ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದ ನಟಿ ಪಾಯಲ್ ರಾಜ್‌ಪುತ್ ಅವರ ಸಿನಿಮಾ ಪಯಣ ಇತ್ತೀಚಿನ ವರ್ಷಗಳಲ್ಲಿ ಏರಿಳಿತಗಳಿಂದ ಕೂಡಿದೆ. ತಮ್ಮ ಹೊಸ ಸಿನಿಮಾ 'ಫಸ್ಟ್ ಟೈಮ್' (First Time) ಚಿತ್ರದ ಪ್ರಚಾರದ ವೇಳೆ ಪಾಯಲ್ ಅವರು ತಮ್ಮ ತಂದೆಯ ಅಗಲಿಕೆ, ವೈಯಕ್ತಿಕ ಜೀವನದ ನೋವಿನ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಪಾಯಲ್‌ಗೆ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಉಳಿಸಿಕೊಳ್ಳಲು ಅವರ ನಂತರದ ಸಿನಿಮಾಗಳು ವಿಫಲವಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ 'ಮಂಗಳವಾರಂ' ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಮರ್ಷಿಯಲ್ ಯಶಸ್ಸು ತಂದುಕೊಡಲಿಲ್ಲ. ಬಳಿಕ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಅವರು ತಮ್ಮ ಹೊಸ ಚಿತ್ರದ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಉತ್ತರಿಸುವಾಗಿ ಗಳಗಳನೆ ಅತ್ತಿದ್ದಾರೆ.

Payal Rajput

ಕ್ಯಾನ್ಸರ್‌ನಿಂದ ಜೀವಬಿಟ್ಟ ತಂದೆ

ತಮ್ಮ ಬದುಕಿನ ಅತ್ಯಂತ ಕಠಿಣ ಹಂತದ ಬಗ್ಗೆ ಮಾಹಿತಿ ನೀಡಿದ ಪಾಯಲ್, ತಮ್ಮ ತಂದೆಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಇಡೀ ಕುಟುಂಬ ಆಘಾತಕ್ಕೊಳಗಾಗಿತ್ತು ಎಂದು ತಿಳಿಸಿದ್ದಾರೆ. ಈ ವಿಚಾರವು ತಮಗೆ ಮತ್ತು ತಮ್ಮ ತಾಯಿಗೆ ತೀವ್ರವಾದ ಮಾನಸಿಕ ನೋವು ಮತ್ತು ಆಘಾತವನ್ನುಂಟು ಮಾಡಿತ್ತು. ಈ ನೋವಿನಿಂದ ಹೊರಬರಲು ಮತ್ತು ಮಾನಸಿಕ ಸ್ಥೈರ್ಯ ಕಂಡುಕೊಳ್ಳಲು ತಾವು ಧ್ಯಾನದ ಮೊರೆ ಹೋಗಿದ್ದಾಗಿ ಅವರು ಭಾವುಕರಾಗಿ ಹಂಚಿಕೊಂಡಿದ್ದಾರೆ.

ಬೋಲ್ಡ್‌ ಪಾತ್ರಗಳನ್ನೂ ತಂದೆ ಬೆಂಬಲಿಸಿದ್ರು

ನನ್ನ ತಂದೆ ನನ್ನ ಜೀವನದಲ್ಲಿ ನಿಜವಾದ ನಾಯಕ. ನಾನು ನಟಿಸಿದ ಯಾವುದೇ ಸಿನಿಮಾವನ್ನು ಅವರು ನೋಡಿ ಪ್ರತಿಕ್ರಿಯೆ ನೀಡುತ್ತಿದ್ದರು. ಅವರು ನಿಜವಾಗಿಯೂ ನನ್ನ ಇತ್ತೀಚಿನ ಪಂಜಾಬಿ ಚಿತ್ರವನ್ನು ನೋಡಲು ಬಯಸಿದ್ದರು. ಆದರೆ ಅವರಿಗೆ ಆ ಅವಕಾಶ ಸಿಗದೆ ಹೊರಟುಹೋದರು ಎಂದು ಪಾಯಲ್‌ ಕಣ್ಣೀರಿಟ್ಟಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಒಂದು ತಿರುವು ನೀಡಿದ RX 100ನಂತಹ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಂಡರೂ ನನ್ನ ಪ್ರತಿಭೆಯನ್ನು ಗುರುತಿಸಿ ಮೆಚ್ಚಿದವರು ನನ್ನ ತಂದೆ ಎಂದು ಭಾವುಕರಾಗಿ ಹೇಳುತ್ತಾ ತಮ್ಮ ದುಃಖವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ತನ್ನ ತಂದೆಯ ನಿಧನದ ನಂತರ ತಾನು ತೀವ್ರ ಖಿನ್ನತೆಗೆ ಒಳಗಾಗಿದ್ದೆ ಮತ್ತು ಅದರಿಂದ ಹೊರಬರಲು ಚಿಕಿತ್ಸೆಯನ್ನು ಸಹ ಪಡೆದುಕೊಂಡೆ ಎಂದು ಪಾಯಲ್ ಬಹಿರಂಗಪಡಿಸಿದರು. ಆದರೆ, ಆ ನೋವನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ ಎನ್ನುತ್ತಲೇ ಅವರು ವೇದಿಕೆಯಿಂದ ಹೊರಬಂದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಉತ್ತಮ ಅವಕಾಶಗಳಿಗೆ ಕಾಯುತ್ತಿದ್ದೇನೆ

ಇನ್ನು ಇತ್ತೀಚೆಗೆ ತೆಲುಗು ಚಿತ್ರಗಳಿಂದ ದೂರ ಸರಿಯಲು ತಮ್ಮ ತಂದೆಯ ನಿಧನವೇ ಪ್ರಮುಖ ಕಾರಣ ಎಂದು ನಟಿ ಬಹಿರಂಗಪಡಿಸಿದರು. ಆ ದುಃಖದಿಂದಾಗಿ ನಾನು ಖಿನ್ನತೆಗೆ ಒಳಗಾಗಿ ಆ ಸಮಯದಲ್ಲಿ ತನಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ, ಅದು ತನ್ನ ತಪ್ಪು ಎಂದೂ ಅವರು ಒಪ್ಪಿಕೊಂಡರು. ಇನ್ನು ಮುಂದೆ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾಗರೂಕರಾಗಿರುತ್ತೇನೆ ಮತ್ತು ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ ಎಂದು ಪಾಯಲ್‌ ಹೇಳಿದ್ದಾರೆ. ವೇದಿಕೆಯ ಮೇಲೆ ಕಣ್ಣೀರಿಟ್ಟ ಪಾಯಲ್, ಕಳೆದ ಕೆಲವು ತಿಂಗಳುಗಳಿಂದ ತಾವು ಮಾನಸಿಕವಾಗಿ ಎದುರಿಸಿದ ನೋವುಗಳ ಬಗ್ಗೆ ವಿವರಿಸಿದ್ದಾರೆ. ಜೈಪುರದಲ್ಲಿ ಕೆಲವು ತಿಂಗಳುಗಳ ಕಾಲ ತಾವು ವಿಪಸ್ಸನ ಮೌನ ಧ್ಯಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಮಾನಸಿಕ ಶಾಂತಿ ಮತ್ತು ಸ್ಪಷ್ಟತೆಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+