Oscars 2025: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಲ್ಲಿ ವೀಕ್ಷಣೆ ಮಾಡಬಹುದು?
Oscars 2025: ಅತ್ಯನ್ನತ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರ ಆರಂಭವವಾಗಿದೆ. ಇದು 97ನೇ ಅವಾರ್ಡ್ ಕಾರ್ಯಕ್ರಮವಾಗಿದ್ದು, ಇಂದು (ಮಾರ್ಚ್ 3) ಅಮೆರಿಕದ ಕ್ಯಾಲಿಫೋರ್ನಿಯಾದ ಹಾಲಿವುಡ್‌ಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. ಹಾಗಾದ್ರೆ ಈ ಸಮಾರಂಭವನ್ನು ಎಲ್ಲಿ ವೀಕ್ಷಣೆ ಮಾಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತದಲ್ಲಿನ ವೀಕ್ಷಕರು ಭಾರತೀಯ ಕಾಲಮಾನದ ಪ್ರಮಾಣ ಇಂದು 5.30ರಿಂದ ಸ್ಟಾರ್ ಮೂವೀಸ್ ಮತ್ತು ಜಿಯೊ ಹಾಟ್‌ಸ್ಟಾರ್‌ನಲ್ಲಿ ಈ ಸಮಾರಂಭದ ನೇರ ಪ್ರಸಾರ ಆರಂಭವಾಗಿದೆ. ಈ ಕಾರ್ಯಕ್ರಮವನ್ನು ಎಮ್ಮಿ ಪ್ರಶಸ್ತಿ ವಿಜೇತ ದೂರದರ್ಶನ ನಿರೂಪಕ, ಬರಹಗಾರ, ನಿರ್ಮಾಪಕ ಮತ್ತು ಹಾಸ್ಯನಟ ಕೊನನ್ ಒ ಬ್ರಿಯಾನ್ ನಡೆಸಿಕೊಡುತ್ತಿದ್ದಾರೆ.

ಅಕಾಡೆಮಿ ಅವಾರ್ಡ್ ಅನ್ನು ಒ'ಬ್ರಿಯಾನ್ ನಿರ್ವಹಿಸುತ್ತಿರುವುದು ಇದೇ ಮೊದಲು. ಈ ಹಿಂದೆ 2002 ಮತ್ತು 2006ರಲ್ಲಿ ಎಮ್ಮಿಸ್ ಅನ್ನು ನಿರ್ವಹಿಸಿದ್ದ ಒ'ಬ್ರಿಯಾನ್ ವೇದಿಕೆಯಲ್ಲಿ ತಮ್ಮ ಚಾಣಕ್ಷತೆಯ ಹಾಸ್ಯವನ್ನು ಪ್ರಸ್ತುತಪಡಿಸಲಿದ್ದು, ಇದು ಚಲನಚಿತ್ರ ಅಭಿಮಾನಿಗಳಿಗೆ ಮರೆಯಲಾಗದ ಅನುಭವ ಆದಂತಾಗಲಿದೆ.
ಈಗಾಗಲೇ 2024ನೇ ಸಾಲಿನಲ್ಲಿ 96ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಲಾಸ್ ಏಂಜಲೀಸ್‌ಲ್ಲಿ ಕಳೆದ ಬಾರಿ ಈ ಕಾರ್ಯಕ್ರಮ ನಡೆಯಿತು. ವಿಶೇಷತೆ ಎಂದರೆ ಒಂದೇ ಸಿನಿಮಾ 13 ವಿಭಾಗಗಳಲ್ಲಿ ನಾಮ ನಿರ್ದೇಶನವಾಗಿ 7 ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆ ಸಿನಿಮಾವೇ ಒಪ್ಪೆನ್ ಹೈಮರ್ ಆಗಿದೆ. ಮತ್ತೊಂದೆಡೆ ಎಮ್ಮಾ ಸ್ಟೋನ್‌ಗೆ ಅತ್ಯುತ್ತಮ ನಟಿ ಸೇರಿದಂತೆ 'ಪೂರ್ ಥಿಂಗ್ಸ್' ಸಿನಿಮಾಗೆ 4 ಆಸ್ಕರ್ ಪ್ರಶಸ್ತಿಗಳು ಬಂದಿವೆ.
ಯಾರಿಗೆಲ್ಲ ಪ್ರಶಸ್ತಿ ಒಲಿದಿದೆ?
* ಅತ್ಯುತ್ತಮ ನಟಿ - ಮಿಕೀ ಮ್ಯಾಡಿಸನ್ (ಅನೋರಾ)
* ಅತ್ಯುತ್ತಮ ನಟ - ಆಡ್ರಿಯನ್ ನಿಕೋಲಸ್ ಬ್ರಾಡಿ (ದಿ ಬ್ರೂಟಲಿಸ್ಟ್)
* ಅತ್ಯುತ್ತಮ ನಿರ್ದೇಶಕ - ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ಮೂಲ ಸಂಗೀತ - ಡೇನಿಯಲ್ ಬ್ಲಂಬರ್ಗ್ (ದಿ ಬ್ರೂಟಲಿಸ್ಟ್)
* ಅತ್ಯುತ್ತಮ ಛಾಯಾಗ್ರಹಣ - ಲಾಲ್ ಕ್ರೇಲ್ (ದಿ ಬ್ರೂಟಲಿಸ್ಟ್)
* ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ - ಐ ಆಮ್ ನಾಟ್ ಎ ರೋಬೋಟ್
* ಅತ್ಯುತ್ತಮ ಧ್ವನಿ - ಡ್ಯೂನ್ ಪಾರ್ಟ್ 2
* ಅತ್ಯುತ್ತಮ ಸಾಕ್ಷ್ಯಚಿತ್ರ - ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
* ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ - ನೋ ಅದರ್ ಲ್ಯಾಂಡ್
* ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ - ನಾಥನ್ ಕ್ರೌಲಿ, ಲೀ ಸ್ಯಾಂಡಲ್ಸ್ (ವಿಕೆಡ್)
* ಅತ್ಯುತ್ತಮ ಮೂಲ ಹಾಡು - ಎಲ್ ಮಾಲ್ (ಎಮಿಲಿಯಾ ಪೆರೆಜ್)
* ಅತ್ಯುತ್ತಮ ಪೋಷಕ ನಟಿ - ಜೋ ಸಲ್ಡಾನಾ (ಎಮಿಲಿಯಾ ಪೆರೆಜ್)
* ಅತ್ಯುತ್ತಮ ಸಂಕಲನ - ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ - ದಿ ಸಬ್‌ಸೆನ್ಸ್
* ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ - ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್
* ಅತ್ಯುತ್ತಮ ಅನಿಮೇಟೆಡ್ ಫೀಚರ್ - ಫ್ಲೋ
* ಅತ್ಯುತ್ತಮ ವೇಷಭೂಷಣ ವಿನ್ಯಾಸ - ಪಾಲ್ ಟೇಜ್‌ವೆಲ್ (ವಿಕೆಡ್)
* ಅತ್ಯುತ್ತಮ ಮೂಲ ಚಿತ್ರಕಥೆ - ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ - ಪೀಟರ್ ಸ್ಟ್ರಾಘನ್ (ಕಾನ್ಕ್ಲೇವ್)
* ಅತ್ಯುತ್ತಮ ಪೋಷಕ ನಟ - ಕೀರನ್ ಕಲ್ಕಿನ್ (ಎ ರಿಯಲ್ ಪೇನ್)












Click it and Unblock the Notifications