ಮುಖ ತೋರಿಸಲು ಅರ್ಹನಲ್ಲ: ವಿರಾಟ್‌ ಕೊಹ್ಲಿಗೆ ಬೈದ್ರಾ ಪ್ರೀತಿ ಜಿಂಟಾ? ಅಭಿಮಾನಿಗಳು ರೊಚ್ಚಿಗೆದ್ದಿದ್ದೇಕೆ?

Virat Vs Preity Zinta: ಬಾಲಿವುಡ್‌ ನಟಿ ಹಾಗೂ ಪುರುಷರ ಪಂಜಾಬ್‌ ಕಿಂಗ್ಸ್‌ ತಂಡದ ಒಡತಿ ವಹಿಸಿಕೊಂಡಿರುವ ಪ್ರೀತಿ ಜಿಂಟಾ ಆಗಾಗ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಇದೀಗ ಆರ್‌ಸಿಬಿ ಹಾಗೂ ಟೀಂ ಇಂಡಿಯಾ ಶೇಷ್ಠ ಕ್ರಿಕೆಟ್‌ ಆಟಗಾರ ವಿರಾಟ್‌ ಕೊಹ್ಲಿಯವರ ಅಭಿಮಾನಿಯೊಬ್ಬರ ಪೋಸ್ಟರ್‌ ಬಗ್ಗೆ ತರವಲ್ಲದ ಕಾಮೆಂಟ್ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಪಂಜಾಬ್‌ ಕಿಂಗ್ಸ್‌ ತಂಡದ ಒಡತಿ ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ಕಿಯರಾಗಿರುತ್ತಾರೆ. ಕೆಲವೊಮ್ಮೆ ಬಿಡುವಿನ ವೇಳೆಯಲ್ಲಿ ತಮ್ಮ ಟ್ವೀಟ್‌ ಖಾತೆಯ ಕಾಮೆಂಟ್‌ ಬಾಕ್ಸ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಲೂ ಇರುತ್ತಾರೆ. ಹಾಗೆಯೇ ಇದೀಗ
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್‌ ಕಿಂಗ್‌ ಕೊಹ್ಲಿ ಅಭಿಮಾನಿಯೊಬ್ಬ ಪೋಸ್ಟರ್‌ ಬಗ್ಗೆ ಪ್ರತಿಕ್ರಿಸುವ ಬರದಲ್ಲಿ ಕಾಮೆಂಟ್‌ವೊಂದನ್ನು ಹಾಕುಮ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Not Eligible to Show Face Virat Kohli fans outrage against Preity Zinta

ಅವರು ಇನ್‌ಸ್ಟಾಗ್ರಾಮ್‌, ಟ್ವೀಟ್‌ ಖಾತೆ ಸೇರಿದಂತೆ ಹಲವು ಸಾಮಾಜಿಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿರುತ್ತಾರೆ. ಈ ಮೂಲಕ ಇವುಗಳಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಬಿಡುವಿನ ವೇಳೆಯಲ್ಲೇ ಅವರ ಪ್ರಶ್ನೆಗಳಿಗೆ ಉತ್ತರನ್ನೂ ನೀಡುತ್ತಾರೆ. ಇದೀಗ ಪೋಸ್ಟ್‌ವೊಂದಕ್ಕೆ ಉತ್ತರಿಸುವ ವೇಳೆ ಪ್ರೀತಿ ಜಿಂಟಾ ಸಮತೋಲನ ಕಳೆದುಕೊಂಡು ವಿವಾದಕ್ಕೆ ಕಾರಣವಾಗಿದ್ದಾರೆ.

ಪ್ರೀತಿ ಜಿಂಟಾ ಪೋಸ್ಟ್‌ಗೆ ಉತ್ತರಿಸುವಾಗ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿದ್ದಾರೆ. ಪ್ರೀತಿ ಮತ್ತು ಸಂಬಂಧಗಳಿಂದ ತುಂಬಿರುವ ಜೀವನದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯ ಇಲ್ಲ. ನನಗೆ ಭಾರತ ತುಂಬಾ ನೆನಪಾಗುತ್ತದೆ ಅಂತಾ ವಿದೇಶದಲ್ಲಿರುವ ನಟಿ ತವರು ದೇಶವನ್ನು ನೆನೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಬಳಕೆದಾರರೊಬ್ಬರು ಅವರನ್ನು ಟ್ರೋಲ್ ಮಾಡಲು ಪ್ರಯತ್ನಿಸಿದರು. ನಕಾರಾತ್ಮಕ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಟ್ರೋಲ್‌ ಪೇಜ್‌ನ ಪ್ರೊಫೈಲ್‌ನಲ್ಲಿ ವಿರಾಟ್ ಕೊಹ್ಲಿಯ ಫೋಟೋ ಇತ್ತು. ಇದಕ್ಕೆ ಪ್ರೀತಿ ಜಿಂಟಾ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿ. ಮುಖ ತೋರಿಸಲು ಅರ್ಹನಲ್ಲದವನು ವಿರಾಟ್ ಕೊಹ್ಲಿ ಫೋಟೋ ಬಳಸುತ್ತಿದ್ದಾನೆ. ಇಂತಹವರಿಗೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟಿಗನ ಹೆಸರು ತೆಗೆದುಕೊಂಡ ನಂತರ ಅವರ ಆಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು.

ಇನ್ನು ಪ್ರೀತಿ ಜಿಂಟಾ ವರು ಈ ಕಾಮೆಂಟ್‌ ಹಾಕುತ್ತಿಂದ್ದಂತೆ ಟ್ರೋಲ್‌ ಪೇಜ್‌ ಫೋಟೋವನ್ನು ಬದಲಾಯಿಸಿದರು. ಆದರೆ ಪ್ರೀತಿ ಜಿಂಟಾ ಅವರ ಹೇಳಿಕೆ ಇದೀಗ ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ. ಟ್ರೋಲ್‌ಗಳಿಗೆ ಉತ್ತರಿಸುವಾಗ ವಿರಾಟ್ ಕೊಹ್ಲಿ ಹೆಸರನ್ನೇಕೆ ಬಳಸಿದಿರಿ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ, ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಬೇಕೆಂದಲೂ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ಪ್ರೀತಿ ಜಿಂಟಾ ಬೈದಿರುವುದು ವಿರಾಟ್‌ ಕೊಹ್ಲಿಗಲ್ಲ. ಬದಲಾಗಿ ಅವರ ಅಭಿಮಾನಿಗೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ವಿರಾಟ್‌ ಕೊಹ್ಲಿ ಫೋಟೋ ಹಾಕಿಕೊಂಡಿದ್ದಕ್ಕೆ ಈ ಫೋಟೋ ಹಾಕಿಕೊಳ್ಳುವ ಅರ್ಹತೆ ನಿನಗಿಲ್ಲ ಎಂದು ಹೇಳಿದ್ದಾರೆ. ಆಗ ದಿಢೀರ್ ಫೋಟೋ ಬದಲಾಯಿಸಲಾಗಿದೆ. ಅವರು ನಿಜವಾಗ್ಲೂ ವಿರಾಟ್‌ ಕೊಹ್ಲಿ ಅಭಿಮಾನಿ ಆಗಿದ್ರೆ, ಏನು ತಪ್ಪಿಲ್ಲದಿದ್ದರೆ ಆ ಫೋಟೋವನ್ನು ಡಿಪಿಯಿಂದ ತೆಗೆಯುತ್ತಿರಲಿಲ್ಲ. ಆದರೆ, ಇದೀಗ ವಿಷಯ ಅದಲ್ಲ, ಪ್ರೀತಿ ಜಿಂಟಾ ಅವರು ವಿರಾಟ್‌ ಕೊಹ್ಲಿ ಅವರ ಹೆಸರು ತೆಗೆದಿರುವುದೇ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರೀತಿ ಜಿಂಟಾ ಅವರು ವಿರಾಟ್‌ ಕೊಹ್ಲಿ ಹೆಸರನ್ನು ಯಾಕೆ ತೆಗೆದರು? ಇದರ ಹಿಂದಿನ ಅಸಲಿ ಸತ್ಯವೇನು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಕಾಡೇ ಕಾಡುತ್ತದೆ. ಅದೇನೇ ಇರ್ಲಿ ಇದು ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ, ಕಾದುನೋಡಬೇಕಿದೆ ಅಷ್ಟೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+