ರಿಯಲ್‌ ಲೈಫ್‌ನಲ್ಲೂ ವೇದಾ-ವಿಕ್ರಮ್‌ ನಡುವೆ ಸಂಥಿಂಗ್‌-ಸಂಥಿಂಗ್‌?: ಕೊನೆಗೂ ಸತ್ಯ ರಿವೀಲ್‌

ಕನ್ನಡ ಕಿರುತೆರೆ ಬಹುದೊಡ್ಡ ಪ್ರೇಕ್ಷಕರ ಬಳಗ ಹೊಂದಿರುವ ಕಾರಣ ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಜೋಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿರುತ್ತದೆ. ನೋಡುಗರು ಅವರು ರಿಯಲ್‌ ಜೋಡಿಗಳಂತೆ ಅಂದುಕೊಳ್ಳುತ್ತಾರೆ. ಅವರು ರೀಲ್ ಮಾತ್ರವಲ್ಲದೇ ರಿಯಲ್‌ ಲೈಫ್‌ನಲ್ಲೂ ಜೋಡಿಗಳಾದರೆ ಚೆನ್ನ ಅಂದುಕೊಳ್ಳುತ್ತಾರೆ. ಇದೀಗ ಅದೇ ಸಾಲಿಗೆ ನೀನಾದೆ ನಾ ಧಾರಾವಾಹಿಯ ಜೋಡಿ ಕೂಡ ಸೇರಿದೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಧಾರಾವಾಹಿ ವಿಕ್ರಮ್‌-ವೇದಾ ಜೋಡಿ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ರೀಲ್‌ ಜೋಡಿ. ವಿಕ್ರಮ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ದಿಲೀಪ್ ಶೆಟ್ಟಿ ಹಾಗೂ ವೇದಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಖುಷಿ ಅವರ ಬಗ್ಗೆ ಆಗಾಗಾ ಗಾಸಿಪ್‌ಗಳು ಹರಿದಾಡುತ್ತಿರುತ್ತದೆ.

Neenadena Serial Actor Dileep Shetty Explain What Is The Relationship Between He And Khushi

ತೆಲುಗು ಶೋವೊಂದಕ್ಕೆ ಖುಷಿ ಅವರನ್ನು ದಿಲೀಪ್ ಶೆಟ್ಟಿ ಕರೆದುಕೊಂಡ ಹೋದ ಬಳಿಕವಂತೂ ಈ ಊಹಾಪೋಹಗಳು ಜಾಸ್ತಿಯಾಗಿವೆ. ಈ ಜೋಡಿ ರೀಲ್‌ನಲ್ಲಿ ಮಾತ್ರವಲ್ಲದೇ ರಿಯಲ್‌ ಲೈಫ್‌ನಲ್ಲೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಿರುತ್ತದೆ. ಈ ಬಗ್ಗೆ ಸ್ವತಃ ದಿಲೀಪ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ನ್ಯಾಷನಲ್‌ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವೇದಾ-ವಿಕ್ರಮ್‌ ರಿಯಲ್ ಲೈಫ್‌ನಲ್ಲಿ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆಗೆ ದಿಲೀಪ್ ಶೆಟ್ಟಿ ಉತ್ತರಿಸಿದ್ದಾರೆ. ರಿಯಲ್‌ ಲೈಫ್‌ ಅಲ್ಲಿ ನಾರ್ಮಲ್‌ ಆಗಿದ್ದೇವೆ. ತೆಲುಗು ಶೋ ಹೋಗಿ ಕನ್ನಡಕ್ಕೆ ಬಂದ ಮೇಲೆ ಕ್ಲೋಸ್‌ ಫ್ರೆಂಡ್‌ಯಿಂದ ಸ್ಪೆಷಲ್‌ ಫ್ರೆಂಡ್‌ ಅಂತಾ ಮಾಡಿದರು. ಸ್ಪೆಷಲ್‌ ಫ್ರೆಂಡ್‌ ಅಂತಾ ನಾನು ಹೇಳೇ ಇಲ್ಲ. ನಮ್ಮ ಮಧ್ಯ ಒಳ್ಳೆ ಹೊಂದಾಣಿಕೆ ಇದೆ ಎಂದರು.

ಇನ್ನು ನಾವಿಬ್ಬರು ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಜೋಡಿ ಜನಗಳಿಗೆ ಇಷ್ಟವಾಗಿದೆ. ಜನರಿಂದ ತುಂಬಾ ಪ್ರೀತಿ ಸಿಗುತ್ತಿದೆ. ಧಾರಾವಾಹಿಯೂ ಚೆನ್ನಾಗಿ ಹೋಗುತ್ತಿದೆ. ಅವರು ನನಗೆ ಒಳ್ಳೆ ಫ್ರೆಂಡ್‌. ಹೀಗಿರುವಾಗ ಏನೇ ಗಾಸಿಪ್‌ ಬಂದರೂ ತೊಂದರೆ ಇಲ್ಲ ಎಂದು ಹೇಳಿದರು.

Neenadena Serial Actor Dileep Shetty Explain What Is The Relationship Between He And Khushi

ಯಾಕೆ ರಿಯಲ್‌ ಲೈಫ್‌ನಲ್ಲೂ ಜೋಡಿ ಆಗಬಾರದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ವಿಧಿ. ಡೆಸ್ಟಿನಿಯಲ್ಲಿ ಏನು ಬರೆದಿರುತ್ತಾರೆ ಅದೇ ಆಗುವುದು. ನಾವು ಅದಕ್ಕೆ ಉತ್ತರಿಸಲು ಆಗುವುದಿಲ್ಲ. ನೋಡೋಣ ಡೆಸ್ಟಿನಿ ಏನು ಹೇಳುತ್ತದೆ ಎಂದು ನಗುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಂತೆ ಉತ್ತರಿಸಿದ್ದಾರೆ.

ನೀನಾದೆ ನಾ ಧಾರಾವಾಹಿಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಸೀನ್‌ಗಳ ಬಗ್ಗೆ ಮಾತನಾಡಿದ ದಿಲೀಪ್, ರೋಮ್ಯಾನ್ಸ್‌ ಅಂದರೆ ಕಷ್ಟ. ಬೇಕಾದರೆ ಆ್ಯಕ್ಷನ್‌ ಸೀಕ್ವೆನ್ಸ್‌ ಸುಲಭವಾಗಿ ಮಾತನಾಡಬಹುದು. ನಮ್ಮ ಧಾರಾವಾಹಿ ಅಷ್ಟೊಂದು ರೋಮ್ಯಾಂಟಿಕ್‌ ಆಗಿಲ್ಲ. ನಾವು ಫ್ಯಾಮಿಲಿ ಪ್ರೇಕ್ಷರನ್ನು ಟಾರ್ಗೆಟ್‌ ಮಾಡುತ್ತಿದ್ದೇವೆ. ಮಕ್ಕಳು ನಮ್ಮ ಧಾರಾವಾಹಿ ನೋಡುತ್ತಿರುತ್ತಾರೆ. ದೊಡ್ಡವರು ನೋಡುತ್ತಿರುತ್ತಾರೆ ನಮ್ಮ ಸೀನ್‌ ನೋಡಿದಾಗ ಅವರಿಗೆ ಮುಜುಗರ ಆಗಬಾರದು. ಇಬ್ಬರ ಮಧ್ಯ ಪ್ರೀತಿ ಇರೋದು ಕಂಡು ಬಂದರೆ ಚೆನ್ನಾಗಿ ಇರುತ್ತದೆ. ಹೀಗಾಗಿ ನಮ್ಮ ನೀನಾದೆ ನಾ ಧಾರಾವಾಹಿ ತಂಡಕ್ಕೆ ಧನ್ಯವಾದ ಹೇಳಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+