ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ ₹99ಕ್ಕೆ ಸಿನಿಮಾ ನೋಡಬಹುದು, ಯಾವತ್ತು ಗೊತ್ತಾ?

ಸಿನಿಮಾಗಳಿಗೆ ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವೇ ಇದೆ. ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಿಸಬೇಕು ಎಂದುಕೊಳ್ಳುವವರು ಖರ್ಚು ಜಾಸ್ತಿ ಕಣ್ರೀ.. ಎಂದು ಹೇಳೋದನ್ನೂ ಕೇಳಿರ್ತೀವಿ. ಆದ್ರೆ ಸಿನಿರಸಿಕರು ಖುಷಿ ಪಡೋ ವಿಚಾರವೊಂದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ನೀವು ನಿಮ್ಮ ಮೆಚ್ಚಿನ ಸಿನಿಮಾಗಳನ್ನು ಕೇವಲ 99 ರೂಪಾಯಿ ಕೊಟ್ಟು ನೋಡಬಹುದು.

ಇದೇನ್‌ ಜೋಕ್ ಅಂತ ಅನ್ಕೋಬೇಡಿ. ಯಾವುದೋ ಥಿಯೇಟರ್‌ನಲ್ಲಿ ಸಿನಿಮಾ ನೋಡೋ ಬಗ್ಗೆ‌ ಹೇಳ್ತಿಲ್ಲ ನಾವು. ಮಲ್ಟಿಪ್ಲೆಕ್ಸ್‌ನಲ್ಲೇ ಈ ದರಕ್ಕೆ ನೀವು ಸಿನಿಮಾ ನೋಡಬಹುದು. ಈ ಬಗ್ಗೆ Multiplex Association Of Indiaನೇ ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಪ್ರೇಕ್ಷಕರಿಗೆ ಈ ಆಫರ್‌ ನೀಡಿರುವುದಾಗಿ ಘೋಷಿಸಿದೆ.

Movie Ticket Prices Reduced On The Occasion Of National Cinema Day

ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸೆಪ್ಟೆಂಬರ್‌ 20ರಂದು ಈ ಸಂಭ್ರಮದ ಹಿನ್ನೆಲೆ ಸಿನಿಮಾ ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ ಸಿನಿಮಾ ವೀಕ್ಷಿಸಲು ಅವಕಾಶ ನೀಡಿದೆ. ಈ ಆಫರ್‌ ಕೇವಲ ಯಾವುದೋ ಒಂದು ಊರು ಅಥವಾ ರಾಜ್ಯಕ್ಕೆ ಸೀಮಿತವಾದದ್ದಲ್ಲ, ದೇಶದಾದ್ಯಂತ ಬರೋಬ್ಬರಿ 4,000 ಸ್ಕ್ರೀನ್‌ಗಳಲ್ಲಿ ಕೇವಲ 99 ರೂಪಾಯಿಗೆ ಸಿನಿಮಾ ನೋಡಬಹುದು ಎಂದು ಘೋಷಣೆ ಮಾಡಿದೆ.

ಅದರಂತೆ ಸೆಪ್ಟೆಂಬರ್‌ 20ರಂದು (ಶುಕ್ರವಾರ) ಪಿವಿಆರ್, ಸಿನಿಪೊಲೀಸ್, ಐನಾಕ್ಸ್, ಮಿರಾಜ್‌, ಸಿಟಿ ಪ್ರೈಡ್‌, ಏಷಿಯನ್‌, ಮುಕ್ತಾ ಎಟು, ಮೂವಿ ಟೈಮ್‌, ವೇವ್‌, ಮೂವಿಮ್ಯಾಕ್ಸ್‌, ಡಿಲೈಟ್‌ ಸೇರಿದಂತೆ 4,000ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಈ ಸಿನಿಪ್ರೇಕ್ಷಕರಿಗೆ ಈ ಕೊಡುಗೆ ನೀಡಲಾಗಿದೆ. ಸದ್ಯ ಈಗಾಗಲೇ ಈ ಪರದೆಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳನ್ನು ಆ ದಿನವೇ ಇಷ್ಟು ಕಡಿಮೆ ದರಕ್ಕೆ ವೀಕ್ಷಿಸುವ ಭಾಗ್ಯ ನಿಮಗೆಲ್ಲ ಸಿಗಲಿದೆ.

ಇನ್ನು ಈ ಆಫರ್‌ ಘೋಷಣೆಯಾದ ಬೆನ್ನಲ್ಲೇ ಸಿನಿಪ್ರೇಕ್ಷಕರು ಈ ಶುಕ್ರವಾರ ತಮ್ಮ ನೆಚ್ಚಿನ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಎರಡೇ ದಿನ ಬಾಕಿ ಇರುವುದರಿಂದ ಆ ದಿನ ಮಲ್ಟಿಪ್ಲೆಕ್ಸ್‌ಗಳೆಲ್ಲ ಈ ಆಫರ್‌ನಿಂದಾಗಿ ಹೌಸ್‌ಫುಲ್‌ ಪ್ರದರ್ಶನ ಕಾಣುವ ಸಾಧ್ಯತೆ ಇದೆ.

ಇನ್ನು ಸಿನಿಮಾ ವೀಕ್ಷಣೆಗೆ ಎಲ್ಲ ವಯೋಮಾನದವರಿಗೂ ಈ ಕೊಡುಗೆ ಅನ್ವಯಿಸಲಿದೆ. ಈ ವರ್ಷ ಸಿನಿಮಾರಂಗದಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಇದಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿ, ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಇದಕ್ಕಾಗಿ ಸಿನಿಪ್ರೇಕ್ಷಕರೆಲ್ಲರಿಗೂ ಧನ್ಯವಾದಗಳು ಎಂದು ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ತಿಳಿಸಿದೆ.

ಸದ್ಯ ಕನ್ನಡ ಸಿನಿಮಾಗಳು ಕೂಡ ಮಲ್ಟಿಪ್ಲೆಕ್ಸ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಆಫರ್‌ ಪಡೆದು ಕಡಿಮೆ ದರಕ್ಕೆ ಸಿನಿಮಾ ವೀಕ್ಷಿಸುವ ಅವಕಾಶ ಕನ್ನಡ ಪ್ರೇಕ್ಷಕರಿಗೂ ಸಿಗಲಿದೆ. ಈ ಕೊಡುಗೆಯನ್ನು ಸಂಘವು ಪ್ರತಿ ವರ್ಷ ನೀಡುತ್ತಾ ಬಂದಿದೆ. ಕಳೆದ ವರ್ಷವೂ ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಇದೇ ರೀತಿಯ ಆಫರ್‌ ಅನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಅದರಂತೆ ಈ ವರ್ಷ ಕೂಡ ಆಫರ್‌ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+