ಸ್ಯಾಂಡಲ್‌ವುಡ್‌ನಲ್ಲಿ 15 ವರ್ಷ ಪೂರೈಸಿದ "ಚಾರ್‌ಮಿನಾರ್‌" ನಟಿಗೆ ದೊಡ್ಡ ಕನಸು, ಏನದು?

"ಚಾರ್‌ಮಿನಾರ್‌" ಸಿನಿಮಾ ಮೂಲಕ ಮೋಡಿ ಮಾಡಿದ್ದ ನಟಿ ಮೇಘನಾ ಗಾಂವ್ಕರ್ (Meghana Gaonkar) ಅವರಿಗೆ ಇಂದು ತುಂಬಾ ವಿಶೇಷವಾದ ದಿನ. ಏಕೆಂದರೆ ಅವರು ಸ್ಯಾಂಡಲ್‌ವುಡ್‌ ಇದೇ ಕಾಲಿಟ್ಟು, 15 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ಅವರು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಅಭಿಮಾನಿಗಳಿಗೆ ಸಂತಸ ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ 15 ವರ್ಷಗಳು ಹೇಗಿತ್ತು? ಎಂಬ ಅನುಭವವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಚಾರ್‌ಮಿನಾರ್‌ ಸಿನಿಮಾದಲ್ಲಿ ನಟ ಪ್ರೇಮ್‌ ಅವರೊಂದಿಗೆ ಮೇಘನಾ ಅವರ ಅಭಿನಯಕ್ಕೆ ಜನ ಫಿದಾ ಆಗಿದ್ದರು. ಅಂದಿನಿಂದಲೂ ಅವರನ್ನು ಚಾರ್‌ಮಿನಾರ್‌ ಬೆಡಗಿ ಎಂದೇ ಕರೆಯಲಾಗುತ್ತಿದೆ.

ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಂದಿಗೆ 15 ವರ್ಷಗಳು ಕಳೆದಿವೆ. ಇಲ್ಲಿ ಸಿಕ್ಕ ಪ್ರೀತಿ, ಆಶೀರ್ವಾದ ಮತ್ತು ಅನುಭವಕ್ಕಾಗಿ ಕೃತಜ್ಞಳಾಗಿದ್ದೇನೆ. ನಾನು ಇಲ್ಲಿಯವರೆಗೆ ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಿರ್ಮಾಪಕರು, ಸಹ-ನಟರು ಮತ್ತು ತಂಡಗಳಿಗೆ, ನಿಮ್ಮ ಅಮೂಲ್ಯ ಕೊಡುಗೆಗೆ ಧನ್ಯವಾದಗಳು. ಹೆಮ್ಮೆ ಮತ್ತು ವಿನಮ್ರತೆಯಿಂದ ಮುಂದಿನ 15 ವರ್ಷಗಳು ಮತ್ತು ಅದರ ನಂತರದ 15 ವರ್ಷಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಕನಸು ಹೇಳಿಕೊಂಡಿದ್ದಾರೆ.

Meghana Gaonkar Completes 15 Years In Sandalwood

ಇದಕ್ಕೆ ಕಾಮೆಂಟ್‌ ಮಾಡಿರುವ ಅವರ ಅಭಿಮಾನಿಗಳು, ಮೇಘನಾ ಅವರೇ, ನಾನಂತೂ ಚಾರ್‌ಮಿನಾರ್‌ ಸಿನಿಮಾದಿಂದ ನಿಮ್ಮ ಅಪ್ಪಟ ಅಭಿಮಾನಿ, ನಿಮ್ಮ ಪುಸ್ತಕ ಓದುವ ಹವ್ಯಾಸ ಇದೆ ನೋಡಿ, ಅದು ಕೂಡ ಮೂಕವಿಸ್ಮಿತ ಮಾಡಿದೆ ಎಂದು ಶುಭಕೋರಿದ್ದಾರೆ. ಇದಕ್ಕೆ ಮೇಘನಾ ಧನ್ಯವಾದಗಳು ಎಂದು ಕಾಮೆಂಟ್‌ನಲ್ಲಿ ಉತ್ತರಿಸಿದ್ದಾರೆ.

ಮೇಘನಾ ಅವರು 2010ರಲ್ಲಿ 'ನಮ್ ಏರಿಯಲ್ ಒಂದ್ ದಿನ' ಸಿನಿಮಾ ಮೂಲಕ ಮೇಘನಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಅವರು ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿಗೆ ಎರಡು ಬಾರಿ ನಾಮನಿರ್ದೇಶನಗೊಂಡಿದ್ದಾರೆ. ಮೇಘನಾ ಅವರು ಅನೇಕ ಜನಪ್ರಿಯ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನೃತ್ಯ ಕಂಪನಿಯಲ್ಲಿ ಸಹಾಯಕ ನೃತ್ಯ ಬೋಧಕರಾಗಿಯೂ ಕೆಲಸ ಮಾಡಿದ್ದರು. ಇಂಗ್ಲಿಷ್, ಕನ್ನಡ ಮತ್ತು ಫ್ರೆಂಚ್ ರಂಗಭೂಮಿ ನಾಟಕಗಳಲ್ಲಿ ಪ್ರದರ್ಶನ ನೀಡಿದ್ದ ಅವರು, ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದರು.

Meghana Gaonkar Completes 15 Years In Sandalwood

ರಕ್ಷಿತ್ ಶೆಟ್ಟಿ ಮತ್ತು ಅನೀಶ್‌ ಅವರೊಂದಿಗೆ ನಮ್‌ ಏರಿಯಾದಲ್‌ ಒಂದ್‌ ದಿನ ಚಿತ್ರದಲ್ಲಿ ಅವರು ಚೊಚ್ಚಲವಾಗಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡರು. ಅವರ ಪಾತ್ರವು ಪ್ರಶಂಸನೀಯ ವಿಮರ್ಶೆಗಳನ್ನು ಗಳಿಸಿತು. ಆದರೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಬಳಿಕ ವಿನಾಯಕ ಗೆಳೆಯರ ಬಳಗ, ರಕ್ಷಿತ್ ಶೆಟ್ಟಿ ಜೊತೆಗೆ ತುಘಲಕ್, ನಟ ಪ್ರೇಮ್ ಕುಮಾರ್ ಜೊತೆಗಿನ ಅವರ ನಾಲ್ಕನೇ ಚಿತ್ರ ಚಾರ್‌ಮಿನಾರ್‌ 2013ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್‌ ಹಿಟ್‌ ಕಂಡಿತ್ತು.

ಬಳಿಕ ಸಿಂಪಲ್ಲಾಗ್‌ ಇನ್ನೊಂದ್ ಲವ್ ಸ್ಟೋರಿ, ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು, ಶುಭಮಂಗಳ, ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ಐಪಿಎಸ್ ಅಧಿಕಾರಿಯ ಪಾತ್ರ ನಿರ್ವಹಿಸಿದರು. ರವಿಚಂದ್ರನ್ ಅಭಿನಯದ ದಿ ಜಡ್ಜ್‌ಮೆಂಟ್, ಶರಣ್ ಅಭಿನಯದ ಚೂಮಂತರ್‌ನಲ್ಲೂ ಗಮನ ಸೆಳೆದಿದ್ದಾರೆ. ಇನ್ನೂ ಸಾಲು ಸಾಲು ಸಿನಿಮಾಗಳಲ್ಲಿ ಮೇಘನಾ ನಟಿಸಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+