ಆ ವಿಚಾರಕ್ಕೆ ಮೇಘಾ ಶೆಟ್ಟಿ ನನಗೆ ಬೈದಿದ್ರು: ಸೀಕ್ರೇಟ್‌ ರಿವೀಲ್‌ ಮಾಡಿದ ತ್ರಿವಿಕ್ರಮ್‌

ಬಿಗ್‌ಬಾಸ್‌ ಕನ್ನಡದ ಇತ್ತೀಚಿನ ಸೀಸನ್‌ನಲ್ಲಿ ರನ್ನರ್‌ ಅಪ್‌ ಆದ ಬಳಿಕ ನಟ ತ್ರಿವಿಕ್ರಮ್‌ ಅವರು ಮತ್ತೆ ಸೀರಿಯಲ್‌ಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಮುದ್ದು ಸೊಸೆ ಸೀರಿಯಲ್‌ನಲ್ಲಿ ತ್ರಿವಿಕ್ರಮ್‌ ನಟಿಸುತ್ತಿದ್ದು, ಪ್ರೇಕ್ಷಕರು ಕೂಡ ಫುಲ್‌ ಖುಷಿಯಾಗಿದ್ದಾರೆ. ಇನ್ನು ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ತ್ರಿವಿಕ್ರಮ್‌ ಹಾಗೂ ಸಹ ಸ್ಪರ್ಧಿ ಭವ್ಯಾ ಗೌಡ ಅವರೊಂದಿಗೆ ಸಖತ್‌ ಕ್ಲೋಸ್‌ ಆಗಿದ್ರು. ಇವರಿಬ್ಬರೂ ಒಳ್ಳೆಯ ಜೋಡಿ ಎಂದು ಹರಸಿದ್ದ ಪ್ರೇಕ್ಷಕರು ಸಿಹಿಸುದ್ದಿಯ ನಿರೀಕ್ಷೆಯಲ್ಲಿದ್ದರು. ಆದರೆ, ಬಿಗ್‌ಬಾಸ್‌ ಮುಗಿದ ಮೇಲೆ ಇಬ್ಬರೂ ಜಸ್ಟ್‌ ಫ್ರೆಂಡ್ಸ್‌ ಎಂದು ಶಾಕ್‌ ಕೊಟ್ಟಿದ್ದರು. ಆದರೆ, ಇದೀಗ ತ್ರಿವಿಕ್ರಮ್‌ ವಿಚಾರದಲ್ಲಿ ನಟಿ ಮೇಘಾ ಶೆಟ್ಟಿ ಅವರ ಹೆಸರು ಕೇಳಿಬಂದಿದೆ.

ಹೌದು, ಕಿರುತೆರೆಯಲ್ಲಿ ಮಿಂಚಿ ಸಿನಿಮಾಗಳಲ್ಲೂ ಖ್ಯಾತಿ ಗಳಿಸಿರುವ ಮೇಘಾ ಶೆಟ್ಟಿ ಅವರ ಸೀಕ್ರೇಟ್‌ವೊಂದನ್ನು ತ್ರಿವಿಕ್ರಮ್‌ ರಿವೀಲ್‌ ಮಾಡಿದ್ದಾರೆ. ತ್ರಿವಿಕ್ರಮ್‌ ಹಾಗೂ ಮೇಘಾ ಶೆಟ್ಟಿ ಬಗ್ಗೆ ಗುಸುಗುಸು ಕೂಡ ಶುರುವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇವರಿಬ್ಬರ ಫೋಟೋ ಕೂಡ ಹರಿದಾಡಿತ್ತು. ಅಲ್ಲದೆ ಮೇಘಾ ಶೆಟ್ಟಿ ಅವರು ತ್ರಿವಿಕ್ರಮ್‌ಗೆ ಫುಲ್‌ ಬೈದಿದ್ದರಂತೆ. ಈ ವಿಚಾರವನ್ನು ತ್ರಿವಿಕ್ರಮ್‌ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಮೇಘಾ ಶೆಟ್ಟಿ ಗರಂ ಆಗಿದ್ದರು ಎಂಬುದನ್ನೂ ತ್ರಿವಿಕ್ರಮ್‌ ಹೇಳಿಕೊಂಡಿದ್ದಾರೆ.

Megha Shetty Scolded Me For Sharing Muddhu Sose Serial Photo Trivikram

ಮುದ್ದು ಸೊಸೆ ಸೀರಿಯಲ್‌ನಲ್ಲಿ ನಟಿ ಮೇಘಾ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ನಿರ್ಮಾಣಕ್ಕೂ ಅವರು ಕೈಜೋಡಿಸಿದ್ದಾರೆ. ಇನ್ನು ಶೂಟಿಂಗ್‌ನಲ್ಲಿ ಮೇಘಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ತ್ರಿವಿಕ್ರಮ್‌ ಅವರು ಮೇಘಾ ಜೊತೆಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಬಳಿಕ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ವೈರಲ್‌ ಆಗಿ ಹಲವು ಗಾಸಿಪ್‌ ಕೂಡ ಕೇಳಿಬಂದಿತ್ತು. ಫೋಟೋ ಶೇರ್‌ ಮಾಡಿದ ವಿಚಾರಕ್ಕೆ ತ್ರಿವಿಕ್ರಮ್‌ಗೆ ಮೇಘಾ ಶೆಟ್ಟಿ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ತ್ರಿವಿಕ್ರಮ್‌ ಹಂಚಿಕೊಂಡಿದ್ದ ಆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಸೀರಿಯಲ್‌ ಇನ್ನೂ ಪ್ರಸಾರವಾಗದೆ, ಪಾತ್ರದ ಬಗ್ಗೆಯೂ ರಿವೀಲ್‌ ಮಾಡಿದ್ದ ತ್ರಿವಿಕ್ರಮ್‌ ಎಡವಟ್ಟಿಗೆ ಮೇಘಾ ಶೆಟ್ಟಿ ಕೋಪಗೊಂಡು ಬೈದಿದ್ದರಂತೆ. ಮೇಘಾ ಶೆಟ್ಟಿ ಅವರೊಂದಿಗೆ ಒಂದು ಸೀನ್‌ ಮಾಡಬೇಕಿತ್ತು. ನಾನು ಅವರ ಜೊತೆಗಿದ್ದ ಫೋಟೋ ಶೇರ್‌ ಮಾಡಿಕೊಂಡು ಅವರಿಂದ ನಾನೇ ಬೈಸ್ಕೊಂಡೆ. ಸೀರಿಯಲ್‌ನಲ್ಲಿ ಅವರೊಂದಿಗೆ ಚಿಕ್ಕ ಸೀನ್‌ ಇತ್ತು. ಈ ಫೋಟೋ ವೈರಲ್‌ ಬಳಿಕ ಆ ಸೀನ್‌ ಮತ್ತೊಮ್ಮೆ ಶೂಟ್‌ ಮಾಡಿದರು. ಆದ್ರೆ ಮೇಘಾ ಶೆಟ್ಟಿ ಅವರು ಶೂಟಿಂಗ್‌ ಸೆಟ್‌ಗೆ ಬಂದಿದ್ದಕ್ಕೆ ನಾನು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ ಎಂದೂ ತ್ರಿವಿಕ್ರಮ್‌ ಹೇಳಿಕೊಂಡಿದ್ದಾರೆ.

ಇನ್ನು ಮೇಘಾ ಶೆಟ್ಟಿ ಅವರು ಸೀರಿಯಲ್‌ಗಳಲ್ಲಿ ಮಿಂಚಿದ್ದರಿಂದ ಸಿನಿಮಾಗಳ ಆಫರ್‌ ಕೂಡ ಬಂತು. ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿದ್ದು, ಇದೀಗ ಮುದ್ದು ಸೊಸೆ ಸೀರಿಯಲ್‌ನಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲೂ ಸದ್ದು ಮಾಡಿರುವ ಮೇಘಾ ಶೆಟ್ಟಿ ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದು, ಇದಲ್ಲದೆ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ', ಚೀತಾ, ಗ್ರಾಮಾಯಣ ಸೇರಿದಂತೆ ಹಲವು ಸಿನಿಮಾಗಳು ಇವರ ಕೈಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+