ಪರಪುರುಷನಿಂದ ವೇದಿಕೆಯಲ್ಲೇ ಖಾಸಗಿ ಭಾಗದ ಬಟ್ಟೆ ಕತ್ತರಿಸಿಕೊಂಡ ವಿವಾಹಿತ ಮಹಿಳೆ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ಟ್ರೋಲ್ ಆಗುತ್ತಿದ್ದಾರೆ. ಮೊದಲಿಗೆ ಈ ವಿಡಿಯೋ ನೋಡಿದವರು ಇದರಲ್ಲಿ ಟ್ರೋಲ್ ಮಾಡುವಂತದ್ದೇನಿದೆ? ಎಂಬ ಪ್ರಶ್ನೆ ಮುಂದಿಟ್ಟರೂ, ಅಸಲಿ ವಿಚಾರ ತಿಳಿದು ಹಲವರು ಬೇಸರ ಹಂಚಿಕೊಂಡಿದ್ದಾರೆ. ಈಗಿನ ಜನರೇಷನ್ ಏನಪ್ಪಾ ಹೀಗಾಗಿದೆ? ಎಂದು ತಲೆಚಚ್ಚಿಕೊಂಡಿದ್ದಾರೆ.
ಪ್ರಿಯಾಂಕಾ ಹಲ್ದಾರ್ (Priyanka Haldar) ಎನ್ನುವ ಮಹಿಳೆಯೊಬ್ಬರು ಇಂಡಿಯಾಸ್ ಗಾಟ್ ಲ್ಯಾಟೆಂಟ್ (India's Got Latent show) ಎನ್ನುವ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇನ್ನು ಈ ಮಹಿಳೆಯ ವೇದಿಕೆ ತೋರಿರುವ ನಡೆಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇಷ್ಟಕ್ಕೂ ಇಲ್ಲಿ ನಡೆದಿದ್ದು ಕೆಲವರಿಗೆ ಒಪ್ಪುವಂತದ್ದಾದರೆ, ಹಲವರು ಎತ್ತ ಸಾಗಿದೆ ಸಮಾಜ? ಎಂದು ಯೋಚಿಸುವಂತೆ ಮಾಡಿದೆ.

ಪ್ರಿಯಾಂಕಾ ಹಲ್ದಾರ್ ಎಂಬ ಮಹಿಳೆಯು ವೇದಿಕೆ ಮೇಲೆಯೇ ತನ್ನ ಎದೆ ಮೇಲಿದ್ದ ಬಟ್ಟೆಯನ್ನು ಯಾವುದೇ ಮುಜುಗರವಿಲ್ಲದೆ ಪರಪುರುಷನೊಂದಿಗೆ ಕತ್ತರಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಟ್ರೋಲ್ ಕೂಡ ಆಗುತ್ತಿದೆ. ಇಷ್ಟಕ್ಕೂ ಈ ವಿಡಿಯೋಗೆ ವಿರೋಧ ವ್ಯಕ್ತವಾಗಲು ಕಾರಣ ಹೀಗಿವೆ..
ಪ್ರಿಯಾಂಕಾ ಹಲ್ದಾರ್ ಅವರಿಗೆ ಮದುವೆಯಾಗಿದ್ದರೂ ಮತ್ತೊಬ್ಬ ಪುರುಷನ ಕೈಯಲ್ಲಿ ಈ ರೀತಿ ತಮ್ಮ ಮೈಮೇಲಿದ್ದ ಬಟ್ಟೆಯನ್ನು ಸಾರ್ವಜನಿಕವಾಗಿ ಕತ್ತರಿಸಿಕೊಂಡಿದ್ದಾರೆ ಎಂದು ಹಲವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಪರಪುರುಷನೊಂದಿಗೆ ವೇದಿಕೆಯಲ್ಲೇ ಇಷ್ಟು ಸಲುಗೆಯ ಅಗತ್ಯವಿತ್ತೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇಷ್ಟಕ್ಕೂ ಪ್ರಿಯಾಂಕಾ ಹಲ್ದಾರ್ ಅವರ ಪತಿ ರೈಲ್ವೆ ಉದ್ಯೋಗದ ನಿಮಿತ್ತ ನಾಗ್ಪುರದಲ್ಲಿ ವಾಸಿಸುತ್ತಿದ್ದಾರೆ. ಆದರೆ ಪ್ರಿಯಾಂಕಾ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಈ ಮಹಿಳೆಗೆ 15 ವರ್ಷದ ಮಗು ಕೂಡ ಇದೆ ಎಂದು ತಿಳಿದುಬಂದಿದೆ. ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ಮುಸ್ಲಿಂ ಹುಡುಗನಿಂದ ತನ್ನ ಬಟ್ಟೆಗಳನ್ನು ಎಷ್ಟು ನಾಚಿಕೆಯಿಲ್ಲದೆ ಕತ್ತರಿಸಿಕೊಳ್ಳುತ್ತಾಳೆ ಎಂದು ಆಕ್ಷೇಪ ಹೊರಹಾಕಿದ್ದಾರೆ.
ಫ್ಯಾಷನ್ ಡಿಸೈನಿಂಗ್ ಹೆಸರಿನಲ್ಲಿ ನಡೆಯುತ್ತಿದ್ದ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಈ ಬೆಳವಣಿಗೆ ನಡೆದಿದೆ. ಇಷ್ಟಕ್ಕೂ ಪ್ರಿಯಾಂಕಾ ನೀಡಿರುವ ಬೋಲ್ಡ್ ಉತ್ತರಗಳು ಕೂಡ ಟ್ರೋಲ್‌ಗೆ ಕಾರಣವಾಗಿವೆ. ಕಾರ್ಯಕ್ರಮದಲ್ಲಿ ತೀರ್ಪುಗಾರರು ನಿಮಗೆ ಮದುವೆಯಾಗಿದೆಯಾ? ಎಂದು ಕೇಳಿದಾಗ ಹೌದು ಆಗಿದೆ ಎಂದು ಹೇಳಿದ್ದಾರೆ. ಪತಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರಾ ಎಂದಾಗ ಇಲ್ಲ, ನನಗೆ 15 ವರ್ಷದ ಮಗು ಕೂಡ ಇದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಅಲ್ಲಿದ್ದವರೆಲ್ಲ ಶಾಕ್ ಆಗಿದ್ದಾರೆ.
ಸಾಮಾನ್ಯವಾಗಿ ತಮ್ಮ ಪತ್ನಿ ಈ ರೀತಿ ಬಟ್ಟೆ ಕತ್ತರಿಸಿಕೊಳ್ಳುವುದು ನೋಡುವ ಯಾವ ಪುರುಷನೂ ಅದನ್ನು ಸಹಿಸಿಕೊಳ್ಳುವುದಿಲ್ಲ. ನಿಮ್ಮ ಪತಿ ತುಂಬಾ ಕೂಲ್ ಅನಿಸುತ್ತೆ ಎಂದು ತೀರ್ಪುಗಾರ ಕೇಳಿದಾಗ ಪ್ರಿಯಾಂಕಾ ಕೊಟ್ಟ ಉತ್ತರವೇ ಅವರನ್ನು ವಿವಾದಕ್ಕೆ ಸಿಲುಕಿಸಿದೆ. ನನ್ನ ಪತಿಗೆ ಇಲ್ಲಿವರೆಗೆ ಇದೆಲ್ಲವೂ ಗೊತ್ತೇ ಇಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ. ಇದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದು, ಚೀಟಿಂಗ್ ಪ್ರಿಯಾಂಕಾ ಎಂದು ಟ್ಯಾಗ್ ಮಾಡಿದ್ದಾರೆ.
ಗಂಡ ಬೇರೆಲ್ಲೋ ನಿಮಗಾಗಿ ಕಷ್ಟ ಪಟ್ಟು ದುಡಿಯುತ್ತಿದ್ದರೆ, ನೀವಿಲ್ಲಿ ಮೈಮೇಲೆ ಪರಿಜ್ಞಾನವಿಲ್ಲದೆ ಬೇರೊಬ್ಬನ ಜೊತೆ ಬಟ್ಟೆ ಕತ್ತರಿಸಿಕೊಳ್ತೀರಲ್ಲ, ನಾಚಿಕೆಯಾಗಬೇಕು. ಇದೆಲ್ಲ ಗಂಡನಿಗೆ ಗೊತ್ತಿಲ್ಲದೆ ನಡೆಯುತ್ತಿದೆ ಎಂದು ಹೇಳುವ ನೀವು ಮಹಿಳಾ ಕುಲಕ್ಕೆ ಕಳಂಕ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಜನರೇಷನ್ ಹೇಗಿದೆ ಎನ್ನುವುದಕ್ಕೆ ನೀವೇ ಉತ್ತಮ ಉದಾಹರಣೆ ಎಂದೂ ಕಾಮೆಂಟ್ ಮಾಡಿದ್ದಾರೆ. ಹಿಂದೂ ಮಹಿಳೆಯಾಗಿ ಮುಸ್ಲಿಂ ವ್ಯಕ್ತಿಯ ಕೈಯಲ್ಲಿ ಬಟ್ಟೆ ಕಟ್ ಮಾಡಿಸಿಕೊಳ್ತೀರಿ. ಅವರ ಹೆಣ್ಣುಮಕ್ಕಳಿಗೆ ಅವರೂ ಹೀಗೆ ಮಾಡ್ತಾರಾ? ಎಂದೂ ಪ್ರಶ್ನೆ ಮುಂದಿಟ್ಟಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.












Click it and Unblock the Notifications