ಪ್ರಭಾಸ್‌ ಸಾಮಾನ್ಯ ನಟ, ಲೆಜೆಂಡ್‌ ಅಲ್ಲ: ಸ್ನೇಹಿತನ ಬಗ್ಗೆ ನಟ ಮಂಚು ವಿಷ್ಣು ಹೀಗಂದಿದ್ದೇಕೆ?

ಟಾಲಿವುಡ್‌ ನಟ ಪ್ರಭಾಸ್‌ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತೆಲುಗಿನ ಟಾಪ್‌ ನಟರಲ್ಲಿ ಪ್ರಭಾಸ್‌ ಕೂಡ ಒಬ್ಬರು. ಬಾಹುಬಲಿ ಸಿನಿಮಾ ಮೂಲಕ ಅವರು ಪ್ಯಾನ್‌ ಇಂಡಿಯಾ ನಟರಾಗಿಯೂ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಇವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು, ಡಾರ್ಲಿಂಗ್‌ ಸಿನಿಮಾ ಬಳಿಕ ಅದೇ ಹೆಸರಿನಿಂದ ನಟನನ್ನು ಕರೆಯುತ್ತಾರೆ. ಇಷ್ಟೆಲ್ಲ ಕ್ರೇಜ್‌ ಹೊಂದಿರುವ ಪ್ರಭಾಸ್‌ ಅವರನ್ನು ಸಾಮಾನ್ಯ ನಟ, ಲೆಜೆಂಡ್‌ ಅಲ್ಲ ಎಂದು ಕರೆಯಲಾಗಿದೆ. ಈ ವಿಚಾರ ಕೇಳಿ ಪ್ರಭಾಸ್‌ ಅಭಿಮಾನಿಗಳು ಫುಲ್‌ ಗರಂ ಆಗಿದ್ದಾರೆ. ಇಷ್ಟಕ್ಕೂ ಪ್ರಭಾಸ್‌ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಕೂಡ ಮತ್ತೊಬ್ಬ ನಟ.

ಹೌದು ಪ್ರಭಾಸ್‌ ಒಬ್ಬ ಸಾಮಾನ್ಯ ನಟ ಎಂದು ಕರೆದಿರುವುದು ಅವರ ಆಪ್ತ ಸ್ನೇಹಿತ ಹಾಗೂ ಟಾಲಿವುಡ್‌ನ ಮತ್ತೊಬ್ಬ ನಟನಾದ ಮಂಚು ವಿಷ್ಣು. ಹಿರಿಯ ನಟ ಮೋಹನ್‌ ಬಾಬು ಪುತ್ರನೂ ಆಗಿರುವ ಮಂಚು ವಿಷ್ಣು ಅವರು ಪ್ರಭಾಸ್‌ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Manchu Vishnu Calls Prabhas A Normal Actor Fans Outraged

ಈ ವಿಡಿಯೋದಲ್ಲಿ ಮಂಚು ವಿಷ್ಣು ಅವರು ಪ್ರಭಾಸ್‌ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್‌ ನನ್ನ ಪ್ರಕಾರ ಒಬ್ಬ ಸಾಮಾನ್ಯ ನಟ. ಆತ ಲೆಜೆಂಡ್‌ ಆಗಲು ತುಂಬಾ ಸಮಯ ಬೇಕಾಗುತ್ತೆ. ಉದಾಹರಣೆಗೆ ಮಲಯಾಳಂನ ಮೋಹನ್‌ ಲಾಲ್‌ ಅವರು ಒಬ್ಬ ಲೆಜೆಂಡ್‌, ಏಕೆಂದರೆ ಅವರ ಟೈಮ್‌ ಫ್ರೇಮ್‌. ಅದರಂತೆ ಪ್ರಭಾಸ್‌ ಅವರನ್ನು ನಾವೆಲ್ಲ ಲೆಜೆಂಡ್‌ ಮಾಡುತ್ತೇವೆ ಎಂದು ವಿಷ್ಣು ಆಡಿರುವ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಭಾಸ್‌ ಅವರನ್ನು ಲೆಜೆಂಡ್‌ ಆಗಿ ಮಾಡೋಣ ಎಂದು ಮಂಚು ವಿಷ್ಣು ಹೇಳಿದ್ದರೂ, ಸಾಮಾನ್ಯ ನಟ ಎಂದಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮಂಚು ವಿಷ್ಣು ಅವರ ಬಹುನಿರೀಕ್ಷಿತ ಕಣ್ಣಪ್ಪ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅಚ್ಚರಿಯೆಂದರೆ ಈ ಸಿನಿಮಾದಲ್ಲಿ ನಟ ಪ್ರಭಾಸ್‌ ಕೂಡ ಒಂದು ಪಾತ್ರ ನಿರ್ವಹಿಸಿದ್ದು, ಅತಿಥಿ ಪಾತ್ರ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಟಿಸಲು ಪ್ರಭಾಸ್‌ ಅವರು ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ನಟಿಸಿದ್ದಾರೆ ಎಂದೂ ತಿಳಿದುಬಂದಿದೆ. ಹೀಗಿದ್ದರೂ ಮಂಚು ವಿಷ್ಣು ಅವರು ಪ್ರಭಾಸ್‌ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

Manchu Vishnu Calls Prabhas A Normal Actor Fans Outraged

ನನ್ನ ಅಭಿಪ್ರಾಯದಲ್ಲಿ, ಪ್ರಭಾಸ್ ಕೇವಲ ಸಾಮಾನ್ಯ ನಟ. ಅವರು ಇನ್ನೂ ಲೆಜೆಂಡ್‌ (ದಂತಕಥೆ) ಅಲ್ಲ. ಪ್ರಭಾಸ್‌ ಲೆಜೆಂಡ್‌ ಆಗಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇನ್ನು ಮೋಹನ್ ಲಾಲ್ ಅವರು ನಿಸ್ಸಂದೇಹವಾಗಿ ಒಬ್ಬ ಲೆಜೆಂಡ್‌. ಕಾಲ ಅವರನ್ನು ಲೆಜೆಂಡ್‌ ಆಗಿ ಮಾಡಿದೆ. ಪ್ರಭಾಸ್ ಮಾಡುವ ಸಿನಿಮಾಗಳು ಖಂಡಿತವಾಗಿಯೂ ಒಂದು ದಿನ ಅವರನ್ನು ಲೆಜೆಂಡ್‌ ಆಗಿ ಮಾಡುತ್ತದೆ ಎಂದು ವಿಷ್ಣು ಹೇಳಿದ್ದಾರೆ. ಆದರೆ. ಸಾಮಾನ್ಯ ನಟ ಎಂದಿರುವುದು ಸಂಚಲನ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+