Mammootty: ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಾ ಖ್ಯಾತ ನಟ ಮಮ್ಮುಟ್ಟಿ?

ಮಲಯಾಳಂ ಸೂಪರ್‌ ಸ್ಟಾರ್‌ ಮಮ್ಮುಟ್ಟಿ (Mammootty) ಅವರ ಬಗ್ಗೆ ಕಹಿಸುದ್ದಿಯೊಂದು ಹರಿದಾಡುತ್ತಿದೆ. ಮಾಲಿವುಡ್‌ ಹಿರಿಯ ನಟ ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮಮ್ಮುಟ್ಟಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಹಾಗೂ ಅವರ ಸ್ಥಿತಿ ಗಂಭೀರಗೊಂಡು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ಈ ಬಗ್ಗೆ ನಟನ ಆಪ್ತರು ಪ್ರತಿಕ್ರಿಯಿಸಿದ್ದಾರೆ.

ನಟ ಮಮ್ಮುಟ್ಟಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯನ್ನು ಅವರ ಸಾರ್ವಜನಿಕ ಸಂಪರ್ಕ (ಪಿಆರ್) ತಂಡವು ಸುಳ್ಳು ಎಂದು ಹೇಳಿದೆ. ಈ ಬಗ್ಗೆ ಮಮ್ಮುಟ್ಟಿ ತಂಡವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ಈ ವದಂತಿಗಳನ್ನು ಸುಳ್ಳು ಸುದ್ದಿ ಎಂದು ಕರೆದಿದೆ. ನಟ ಮಮ್ಮುಟ್ಟಿ ಅವರು ರಂಜಾನ್ ಉಪವಾಸ ಆಚರಿಸುತ್ತಿರುವ ಹಿನ್ನೆಲೆ ರಜೆಯಲ್ಲಿದ್ದಾರೆ. ಅಲ್ಲದೆ ಅವರು ಶೂಟಿಂಗ್‌ನಿಂದಲೂ ಬ್ರೇಕ್‌ ತೆಗೆದುಕೊಂಡಿದ್ದಾರೆ. ಸದ್ಯ ಅವರು ಚೆನ್ನೈನಲ್ಲಿ ತಮ್ಮ ಕುಟುಂಬದೊಂದಿಗೆ ವೈಯಕ್ತಿಕ ಸಮಯ ಕಳೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಅವರು ಸದ್ಯ ವಿರಾಮ ಪಡೆಯುತ್ತಿದ್ದಾರೆ. ಕೆಲ ದಿನಗಳ ನಂತರ ಅವರು ನಟ ಮೋಹನ್ ಲಾಲ್ ಅವರೊಂದಿಗೆ ಮಹೇಶ್ ನಾರಾಯಣನ್ ಅವರ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಹೇಳಿದೆ.

Malayalam Actor Mammootty PR Team Denies Cancer Rumors Calls It Fake News

ಮಮ್ಮುಟ್ಟಿ ಅವರು ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿದ್ದಾರೆ ಎಂಬ ಪೋಸ್ಟ್‌ ಹರಿದಾಡಿತ್ತು. ಅಲ್ಲದೆ ಇದು ಆರಂಭಿಕ ಹಂತದಲ್ಲಿದ್ದು, ಕ್ಯಾನ್ಸರ್‌ ಗುಣಪಡಿಸಬಹುದು ಎಂಬ ಭರವಸೆ ನೀಡಲಾಗಿದೆ ಎಂದು ಪೋಸ್ಟ್‌ನಲ್ಲಿತ್ತು. ಇದು ಕೂಡಲೇ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಮ್ಮುಟ್ಟಿ ಅಭಿಮಾನಿಗಳು ಕೂಡ ಇದರಿಂದ ಶಾಕ್‌ಗೆ ಒಳಗಾಗಿ ಕಳವಳಗೊಂಡಿದ್ದರು. ಈ ಹಿನ್ನೆಲೆ ಮಮ್ಮುಟ್ಟಿ ಅವರ ತಂಡವು ಈ ಊಹಾಪೋಹವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ನಟನ ಆರೋಗ್ಯವಾಗಿದ್ದಾರೆ ಹಾಗೂ ಅವರು ಯಾವುದೇ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ದೃಢಪಡಿಸಿದೆ.

ಮಲಯಾಳಂ ನಟರಾದ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಅವರು ಇತ್ತೀಚೆಗೆ ಶ್ರೀಲಂಕಾದಲ್ಲಿ ತಮ್ಮ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್‌ ಆರಂಭಿಸಿದ್ದರು. ತಾತ್ಕಾಲಿಕವಾಗಿ ಈ ಸಿನಿಮಾಗೆ ಎಂಎಂಎಂಎನ್‌ ಎಂದು ಹೆಸರಿಸಲಾಗಿತ್ತು. ಈ ಸಿನಿಮಾಗೆ ಮಹೇಶ್ ನಾರಾಯಣನ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕುಂಚಾಕೊ ಬೋಬನ್, ನಯನತಾರಾ ಮತ್ತು ಫಹದ್ ಫಾಸಿಲ್ ಕೂಡ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

Malayalam Actor Mammootty PR Team Denies Cancer Rumors Calls It Fake News

ಸುಮಾರ್‌ 16 ವರ್ಷಗಳ ಬಳಿಕ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಒಟ್ಟಿಗೆ ನಡೆಸುತ್ತಿರುವ ಸಿನಿಮಾ ಇದಾಗಿದೆ. ಈ ನಟರು ಈ ಹಿಂದೆ 2013ರಲ್ಲಿ ತೆರೆಕಂಡಿದ್ದ ಕಡಲ್ ಕಡನ್ನು ಒರು ಮಾತುಕುಟ್ಟಿ ಸಿನಿಮಾದಲ್ಲಿ ಒಟ್ಟಾಗಿ ನಡಿಸಿದ್ದರು. ಇದರಲ್ಲಿ ಮೋಹನ್ ಲಾಲ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದಕ್ಕೂ ಹಿಂದೆ ಮೋಹನ್ ಲಾಲ್ ಅವರ ಕ್ರಿಶ್ಚಿಯನ್ ಬ್ರದರ್ಸ್ ಸಿನಿಮಾದಲ್ಲಿ ಮಮ್ಮುಟ್ಟಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಒಂದೂವರೆ ದಶಕದ ಬಳಿಕ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+