ಸಿನಿಮಾ ಹೀರೋಗಳ ಶ್ರೀಮಂತ ಹೆಂಡತಿಯರು ಇವರು: ಮಾಹಿತಿ ತಿಳಿಯಿರಿ!

ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹಣ ಇದ್ದು, ಕೋಟಿ ಇಲ್ಲದೆ ಅಲ್ಲಿ ಮಾತುಗಳೇ ನಡೆಯೋದಿಲ್ಲ. ಕೆಲ ಸಿನಿಮಾ ನಟರ ಪತ್ನಿಯರು ನಟರಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ ಅದ್ರಲ್ಲೂ ದಕ್ಷಿಣ ಭಾರತ ಸಿನಿಮಾ ನಟರ ಪತ್ನಿಯರು, ಸಾವಿರ ಸಾವಿರ ಕೋಟಿಯಷ್ಟು ಸಂಪತ್ತು ಹೊಂದಿದ್ದಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ.

'ಸ್ಟೈಲಿಶ್ ಸ್ಟಾರ್' ಅಂತ ಖ್ಯಾತರಾದ ಅಲ್ಲು ಅರ್ಜುನ್ ಅವರು ಸೈಂಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ ಮತ್ತು ಶಿಕ್ಷಣ ತಜ್ಞರಾದ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಅವರ ಪುತ್ರಿಯನ್ನು ವಿವಾಹ ಆಗಿದ್ದಾರೆ. ಅಲ್ಲು ಅರ್ಜುನ್ ಅವರ ಪತ್ನಿ ಹೆಸರು ಸ್ನೇಹಾ ರೆಡ್ಡಿ. ಅರ್ಜುನ್ ಮತ್ತು ಸ್ನೇಹಾ ಅವರು 2011 ರಲ್ಲಿ ಮದುವೆ ಆದರು. ಈ ಮುದ್ದಾದ ಜೋಡಿಗೆ ಅಲ್ಲು ಅರ್ಹ ಮತ್ತು ಅಲ್ಲು ಅಯಾನ್‌ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸ್ನೇಹಾ ರೆಡ್ಡಿ ಅವರ ಹೆಸರಿನಲ್ಲೇ, ಕೋಟಿ ಕೋಟಿ ಆಸ್ತಿ ಇದೆ.

List of the South Indian film actors & their rich wives

'ರೋಲೆಕ್ಸ್' ಫ್ಯಾಮಿಲಿ ಹೀಗಿದೆ

ಸೂರ್ಯ, ತಮಿಳು ಸಿನಿ ರಂಗದ ಈ ನಟ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಅವರ ಜತೆಗೆ ಸೂರ್ಯ ಅವರು ನಟಿಸಿ 'ವಿಕ್ರಂ' ಸಿನಿಮಾ ಮೂಲಕ ರೋಲೆಕ್ಸ್ ಆಗಿ ಮಿಂಚಿದ್ದರು. ನಟ 2006ರಲ್ಲಿ ಜ್ಯೋತಿಕಾ ಅವರನ್ನು ವಿವಾಹವಾದರು. ಸೂರ್ಯ & ಜ್ಯೋತಿಕಾ ಅವರಿಗೆ ಈಗ ಇಬ್ಬರು ಮಕ್ಕಳು ಇದ್ದು, ಸೂರ್ಯ ಅವರ ಪತ್ನಿ ತಂದೆ ಚಂದರ್ ಸದನಾ ಜನಪ್ರಿಯ ಸಿನಿಮಾ ನಿರ್ಮಾಪಕರು ಜ್ಯೋತಿಕಾ ಅವರು ಕೂಡ ಕೋಟಿ ಕೋಟಿ ಆಸ್ತಿಯ ಒಡತಿ ಆಗಿದ್ದಾರೆ.

List of the South Indian film actors & their rich wives

ರಾಮ್ ಚರಣ್ ಕುಟುಂಬ ನೋಡಿ

ಹಾಗೇ ತೆಲುಗು ಸಿನಿಮಾ ರಂಗದ ಮೆಗಾ ಫ್ಯಾಮಿಲಿ, ಅಂದರೆ ಚಿರಂಜೀವಿ ಕುಟುಂಬದ ಕುಡಿ ನಟ ರಾಮ್ ಚರಣ್ ಕೂಡ ಸಿಕ್ಕಾಪಟ್ಟೆ ಫೇಮಸ್. ನಟ ರಾಮ್ ಚರಣ್, ಉಪಾಸನಾರ ಜೊತೆ ಮದುವೆ ಆಗಿದ್ದಾರೆ. 2012 ರಲ್ಲಿ ಜೂನ್ 14 ರಂದು ಈ ದಂಪತಿಗಳು ವಿವಾಹವಾದರು. ಇನ್ನು ಉಪಾಸನಾ ಅವರ ತಂದೆ ಕೆಇಐ ಗ್ರೂಪ್‌ ಸಂಸ್ಥಾಪಕರು ಎನ್ನಲಾಗಿದೆ. ಅಲ್ಲದೆ ಇವರು ಹೈದರಾಬಾದ್‌ನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಉಪಾಸನಾ ಅವರು ಸ್ವತಃ ಅಪೋಲೋ ಫೌಂಡೇಶನ್‌ ಉಪಾಧ್ಯಕ್ಷರಾಗಿದ್ದು, ಸಾವಿರಾರು ಕೋಟಿ ಒಡತಿ ಕೂಡ ಹೌದು.

List of the South Indian film actors & their rich wives

ಜ್ಯೂನಿಯರ್ ಎನ್‌ಟಿಆರ್ & ಕನ್ನಡ!

ಕನ್ನಡ ನಾಡಿನ ನಂಟು ಹೊಂದಿರುವ ನಟ ಜ್ಯೂ.ಎನ್‌ಟಿಆರ್ ಅವರು ಕೂಡ ಸಖತ್ ಫೇಮಸ್. ಹಾಗೇ ಈ ನಟ RRR ಸಿನಿಮಾ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದಾರೆ. ಹಿಂದೆ, ನಟ ಜ್ಯೂ.ಎನ್‌ಟಿಆರ್ ಅವರು ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದರು. ಜೂನಿಯರ್ NTR ಅವರು ಜನಪ್ರಿಯ ಉದ್ಯಮಿ ಮತ್ತು ಮಾಧ್ಯಮ ಉದ್ಯಮಿ ಶ್ರೀನಿವಾಸ್ ರಾವ್ ಅವರ ಪುತ್ರಿ ಲಕ್ಷ್ಮಿ ಪ್ರಣತಿ ಅವರನ್ನು ವಿವಾಹ ಆಗಿದ್ದಾರೆ. ಇನ್ನು ಈ ದಂಪತಿ 2011 ರಲ್ಲಿ ಮದುವೆ ಆಗಿದ್ದರು. ಇದೀಗ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

List of the South Indian film actors & their rich wives

ಮಮ್ಮುಟ್ಟಿ ಪುತ್ರ ಫುಲ್ ಫೇಮಸ್

ದುಲ್ಕರ್ ಸಲ್ಮಾನ್ ಅಂದ್ರೆ ಭಾರತದಲ್ಲಿ ಮಾತ್ರವಲ್ಲ, ಹೊರ ದೇಶದಲ್ಲೂ ಕ್ರೇಜ್ ಇದೆ. ಈ ನಟನ ಕುಟುಂಬ ಕೂಡ ಮಲಯಾಳಂ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದು, ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ ದುಲ್ಕರ್ ಸಲ್ಮಾನ್. ಮಮ್ಮುಟ್ಟಿ ಕುಟುಂಬದಲ್ಲಿ ಜನಿಸಿದ ಅವರು ಅಮಲ್ ಸೂಫಿಯಾ ಅವರನ್ನು ಮದುವೆ ಆಗಿದ್ದಾರೆ. ಈ ದಂಪತಿ 2011ರ ಸಮಯದಲ್ಲಿ ಮದುವೆ ಆಗಿದ್ದು, ಇದೀಗ ಒಂದು ಮಗು ಇದೆ. ಹೀಗೆ ಅಮಲ್ ಸೂಫಿಯಾ ಅವರು ಹೆಸರಾಂತ ಉದ್ಯಮಿ ಸೈಯದ್ ನಿಜಾಮುದ್ದೀನ್ ಅವರ ಮಗಳಾಗಿದ್ದು ಕೋಟಿ ಕೋಟಿ ಆಸ್ತಿ ಇದೆ.

List of the South Indian film actors & their rich wives

'ಇಳಯ ದಳಪತಿ' ಮದುವೆ ಮಾಹಿತಿ

ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ, ತಮಿಳು ನಟ ವಿಜಯ್ ಅವರು ಕೂಡ ಒಬ್ಬರು. ಇಳಯ ದಳಪತಿ ಎಂಬ ಹೆಸರು ಪಡೆದಿರುವ ಈ ನಟ, ಭಾರತದ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ. ನಟ ವಿಜಯ್ 1999 ರಲ್ಲಿ ಮದುವೆ ಆಗಿದ್ದರು. ಸೋರ್ನಲಿಂಗಂ ಅವರನ್ನು ನಟ ವಿಜಯ್ ಮದುವೆ ಆಗಿದ್ದು, ವಿಜಯ್ ಅವರ ಧರ್ಮಪತ್ನಿ ಶ್ರೀಲಂಕಾದ ತಮಿಳು ಕೈಗಾರಿಕೋದ್ಯಮಿ ಒಬ್ಬರ ಪುತ್ರಿ. ಇವರು ಕೂಡ ಕೋಟಿ ಕೋಟಿ ರೂಪಾಯಿ ಒಡತಿ.

List of the South Indian film actors & their rich wives

ರಾಣಾ ದಗ್ಗುಬಾಟಿ ಪತ್ನಿ ಯಾರು?

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ವಿರುದ್ಧವೇ ಸೆಣೆಸಾಟ ನಡೆಸಿದ್ದ ರಾಣಾ ದಗ್ಗುಬಾಟಿ ಅವರು ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ. ದಕ್ಷಿಣ ಭಾರತದ ಫೇಮಸ್ ನಟರ ಪೈಕಿ ಈ ನಟ ಕೂಡ ಒಬ್ಬರು. ಹೀಗೆ ನಟ ರಾಣಾ ದಗ್ಗುಬಾಟಿ ಅವರು ಮಿಹೀಕಾ ಬಜಾಜ್ ಅವರನ್ನು ಮದುವೆ ಆಗಿದ್ದಾರೆ. ಹೈದರಾಬಾದ್‌ನ ಶ್ರೀಮಂತ ಉದ್ಯಮಿಯ ಮಗಳಾದ ರಾಣಾ ದಗ್ಗುಬಾಟಿ ಅವರ ಪತ್ನಿ, ಸಾವಿರಾರು ಕೋಟಿ ಒಡತಿ ಎನ್ನಲಾಗಿದೆ. ಈ ಜೋಡಿ 2020ರಲ್ಲಿ ಮದುವೆ ಆಗಿದ್ದರು. ಮಿಹೀಕಾ ಬಾಜಾಜ್ ಅವರ ತಾಯಿ ಕ್ರಸಾಲಾ ಜ್ಯುವೆಲ್ಸ್‌ ನಿರ್ದೇಶಕಿ ಎನ್ನಲಾಗಿದೆ.

List of the South Indian film actors & their rich wives

ಒಟ್ನಲ್ಲಿ ಸಿನಿಮಾದ ನಟ & ನಟಿಯರು ಸಿಕ್ಕಾಪಟ್ಟೆ ಶ್ರೀಮಂತರು. ಅದರಲ್ಲೂ ಸಿನಿಮಾಗಳ ಹೀರೋ ಪತ್ನಿಯರು ಅಂದರೆ ಹೆಂಡತಿಯರು ಕೂಡ ಕೋಟಿ ಕೋಟಿ ಆಸ್ತಿ ಹೊಂದಿದ್ದಾರೆ. ಹೀಗೆ ಹೀರೋಗಿಂತ ಹೀರೋ ಪತ್ನಿಯರೇ ಶ್ರೀಮಂತರಾಗಿದ್ದಾರೆ. ಅದ್ರಲ್ಲೂ ದಕ್ಷಿಣ ಭಾರತ ಮೂಲದ ಹೀರೋಗಳ ಪತ್ನಿಯರೇ ಈ ಪಟ್ಟಿಯಲ್ಲಿ ಟಾಪ್ ಎನ್ನಬಹುದು. ಮತ್ತೊಂದ್ಕಡೆ ಈಗ ಇಡೀ ಜಗತ್ತಿನಾದ್ಯಂತ ದಕ್ಷಿಣ ಭಾರತದ ಸಿನಿಮಾಗಳೇ ಅಬ್ಬರಿಸುತ್ತಿದ್ದು, ಬಾಲಿವುಡ್ ಸಿನಿಮಾಗಳು ಕೂಡ ದಕ್ಷಿಣ ಭಾರತದ ಸಿನಿಮಾ ಎದುರು ಸೋಲುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+