Tamannaah Bhatia Property: ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಆಸ್ತಿ ಬಗ್ಗೆ ಶಾಕ್ ಆಗೋದಂತೂ ಗ್ಯಾರಂಟಿ
Actress Tamannaah Bhatia Asset: ಆಗಾಗ ಕೆಲವರ ಆಸ್ತಿ ವಿಚಾರಗಳು ಭಾರೀ ಸುದ್ದಿಯಾಗಿ ಸಖತ್ ಸೌಂಡ್ ಮಾಡುತ್ತವೆ. ಹಾಗೇಯೇ ಇದೀಗ ಮಿಲ್ಕಿ ಬ್ಯೂಟಿ ಅಂತಲೇ ಕರೆಸಿಕೊಳ್ಳುವ ನಟಿ ತಮನ್ನಾ ಭಾಟಿಯಾ ಅವರ ಆಸ್ತಿ ವಿಚಾರ ಮುನ್ನೆಲೆಗೆ ಬಂದಿದ್ದು, 20 ವರ್ಷದಲ್ಲಿ ಅವರು ಮಾಡಿದ ಆಸ್ತಿ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗೋದಂತೂ ಗ್ಯಾರಂಟಿ. ಇಲ್ಲಿದೆ ನೋಡಿ ಮಾಹಿತಿ.
ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಅಷ್ಟೇ ದೊಡ್ಡ ಮಟ್ಟದಲ್ಲಿ ಆಸ್ತಿಯನ್ನೂ ಕೂಡ ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ಚಾಂದ್ ಸ ರೋಶನ್ ಚೆಹ್ರಾ ಚಿತ್ರದ ಮೂಲಕ ಎಂಟ್ರಿ ಕೊಡ್ಡಿದ್ದು, ಈ ಚಿತ್ರ 2005ರಲ್ಲಿ ತೆರೆ ಕಂಡಿತ್ತು. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಲ್ಲಿಗೆ 20 ದಶಕ ಕಳೆದಿದೆ. ಅಲ್ಲದೆ, ಈವರೆಗೂ ಅವರಿಗೆ ಅಷ್ಟೇ ಬೇಡಿಕೆ ಇದೆ. ನೃತ್ಯದ ಮೂಲಕವೂ ಪ್ರೇಕ್ಷರನ್ನು ಸೆಳೆಯುತ್ತಲೇ ಇದ್ದಾರೆ.

ನಟಿ ತಮನ್ನಾ ಭಾಟಿಯಾ ಅವರು 20 ವರ್ಷಗಳ ಸಿನಿರಂದಲ್ಲಿ ದೊಡ್ಡ ಮೊತ್ತದ ಆಸ್ತಿ ಗಳಿಸಿದ್ದು, ಆದಾಯದ ಮುಖ್ಯ ಮೂಲಗಳು ಸಿನಿಮಾಗಳು ಮತ್ತು ಬ್ರಾಂಡ್ ಪ್ರಚಾರ ಆಗಿವೆ. ಮುಂಬೈನಲ್ಲಿ 16,00,00,000 ರೂಪಾಯಿಯ ಫ್ಲ್ಯಾಟ್, ಬಿಎಂಡಬ್ಲ್ಯೂ 320ಐ, ಮರ್ಸೀಡಿಸ್ ಬೆಂಜ್ ಜಿಎಲ್ಇ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಹಲವು ಹೂಡಿಕೆಗಳಿಂದ ಅವರ ಆಸ್ತಿ ಹೆಚ್ಚಾಗಿದೆ. ಜೊತೆಗೆ ದೊಡ್ಡ ಬಂಗಲೆಯನ್ನೂ ಸಹ ಹೊಂದಿದ್ದು, 2 ದಶಕಗಳಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಈ ಹಿನ್ನೆಲೆ ಅವರ ಆಸ್ತಿ ಹೆಚ್ಚಳ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸಿನಿಮಾಗಳ ಮೂಲಕಬೂ ನಟಿ ತಮನ್ನಾ ಭಾಟಿಯಾ ಹೆಚ್ಚು ಸಂಭಾವನೆ ಪಡೆಯುತ್ತಾರೆ.
ಬಬ್ಲಿ ಬೌನ್ಸರ್, ಕಲ್ಲೂರಿ, ಹ್ಯಾಪಿ ಡೇಸ್, ಬಾಹುಬಲಿ ಈ ರೀತಿಯ ದೊಡ್ಡ ದೊಡ್ಡ ಬಂಡವಾಳದ ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ. ಅಲ್ಲದೆ, ನೃತ್ಯದ ಮೂಲಕವೂ ಗಮನ ಸೆಳೆದಿದ್ದಾರೆ. ಸ್ತ್ರೀ 2 ಚಿತ್ರದಲ್ಲಿ ಅವರು ಆಜ್ ಕಿ ರಾತ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೆ, ಅಲ್ಲದೆ ವಿಶ್ವಮಟ್ಟದಲ್ಲಿ ಸದ್ದು ಮಾಡಿದ ದೊಡ್ಡ ಮತ್ತದ ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ತಮನ್ನಾ ಭಾಟಿಯಾ ಅವರಿಗೆ ಬ್ರ್ಯಾಂಡ್ ಪ್ರಚಾರದ ಮೂಲಕ ದೊಡ್ಡ ಮಟ್ಟದದ್ಲಿ ಸಂಭಾವನೆ ಹರಿದುಬರುತ್ತಿದೆ. ಜ್ಯುವೆಲರಿ, ಸೋಪ್ ಬ್ರ್ಯಾಂಡ್, ಹಲವು ಸೌಂದರ್ಯ ವರ್ಧಕ ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಇವುಗಳಿಗೆ ಅವರು ದೊಡ್ಡ ಮಟ್ಟದದಲ್ಲಿ ಸಂಭಾವನೆ ಪಡೆಯುತ್ತಾರೆ.ಇನ್ನು ತಮನ್ನಾ ಅವರು ಮುಂಬೈನಲ್ಲಿ 16 ಕೋಟಿ ರೂಪಾಯಿಯ ಫ್ಲ್ಯಾಟ್ ಹೊಂದಿದ್ದು, ಈ ಮನೆ 14ನೇ ಫ್ಲೋರ್ನಲ್ಲಿದೆ. ಇದು ಸಮುದ್ರದ ಹತ್ತಿರದಲ್ಲಿದೆ. ಇನ್ನು ಅನೇಕ ಕಡೆಗಳಲ್ಲಿ ಅವರು ಕಟ್ಟಡಗಳನ್ನು ಬಾಡಿಗೆ ನೀಡಿದ್ದು, ಇದರಿಂದ ತಿಂಗಳಿಗೆ 18 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications