Kipi Keerthi: ಹೊಸ ಮನೆಗೆ ಕಿಪಿ ಕೀರ್ತಿಯೇ ದೃಷ್ಟಿಗೊಂಬೆ! ವಿಡಿಯೋ ವೈರಲ್, ನೆಟ್ಟಿಗರು ಹೇಳಿದ್ದೇನು?
Viral Video: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದ ಕಿಪಿ ಕೀರ್ತಿ ಆಗಾಗ ಸುದ್ದಿಯಲ್ಲಿರುತ್ತಾಳೆ. ಲವ್, ಬ್ರೇಕಪ್, ಬಾಯ್‌ಫ್ರೆಂಡ್ ಹಾಗೂ ಇನ್ನಿತರ ವಿಷಯಗಳಿಂದ ಚರ್ಚೆಗೀಡಾಗಿದ್ದ ಕಿಪಿ ಕೀರ್ತಿ ಕುರಿತು ವಿಡಿಯೋವೊಂದು ವೈರಲ್ ಆಗುತ್ತಿದೆ. 'ಬನ್ನಿ ಬನ್ನಿ ಜನರೇ...ಜಾಯ್ ಜನರೇ..'ಎಂದು ವಿಡಿಯೋ ಶುರು ಮಾಡುವ ಕಿಪಿ ಕೀರ್ತಿ ಫೋಟೋ ಹೊಸ ಕಟ್ಟಡದ ಮೇಲೆ ಹಾಕಲಾಗಿದೆ. ಇದು ಸದ್ಯ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ.
ಇತ್ತೀಚೆಗೆ ತಮಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದ ಕಿಪಿ ಕೀರ್ತಿ ಸಾಕಷ್ಟು ರೀಲ್ಸ್ ಮೂಲಕ, ಕೆಲವು ಕಾಮೆಂಟ್‌ಗಳಿಗೆ ಪ್ರತ್ಯುತ್ತರ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದಳು. ಟಿವಿ ರಿಯಾಲಿಟಿ ಶೋನ ಕಾಮಿಡಿ ವೇದಿಕೆಯಲ್ಲೂ ಬಂದು ನಗುವಿನ ಕಚಗುಳಿ ಇಟ್ಟ ಕಿಪಿ ಕೀರ್ತಿ ಫೋಟೋ ಅನ್ನು ಹೊಸ ಕಟ್ಟಡಕ್ಕೆ ದೃಷ್ಟಿ ಗೊಂಬೆ ರೀತಿಯಲ್ಲಿ ಬಳಸಲಾಗಿದೆ.

ಈ ಹಿಂದೆ ಮಹಿಳೆಯೊಬ್ಬರು ದಪ್ಪ ಕಣ್ಣುಗಳನ್ನು ಬಿಟ್ಟುಕೊಂಡಿದ್ದ ಫೋಟೋವನ್ನು ದೃಷ್ಟಿಗೊಂಬೆ ರೀತಿಯಲ್ಲಿ ಹಾಕಲಾಗಿತ್ತು. ದೃಷ್ಟಿಗೊಂಬೆ ಆಂಟಿ ಅಂತಲೇ ಫೇಮಸ್ ಆಗಿದ್ದರು. ಇದೀಗ ಆ ಜಾಗಕ್ಕೆ ಕಿಪಿ ಕೀರ್ತಿಯ ಪೋಟೋವನ್ನು ಹೊಸ ಕಟ್ಟಡಕ್ಕೆ ಸಣ್ಣ ಬ್ಯಾನರ್ ರೀತಿಯಲ್ಲಿ ಹಾಕಲಾಗಿದೆ. ಇದರ ಕುರಿತ ವಿಡಿಯೋ ವೈರಲ್ ಆಗಿದೆ. ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಿಪಿ ಕೀರ್ತಿ ವೈರಲ್ ಫೋಟೋ ಬಗ್ಗೆ ನೆಟ್ಟಿಗರು ಏನಂದ್ರು?
ಈ ಮೊದಲೇ ತಿಳಿಸಿದಂತೆ ದಪ್ಪ ಕಣ್ಣು ಫೋಟೋಗೆ ಪೋಸ್ ಕೊಟ್ಟಿದ್ದ ದೃಷ್ಟಿಗೊಂಬೆ ಆಂಟಿಯ ಫೋಟೋ ಸಿಕ್ಕಿಲ್ಲ ಅನ್ನಿಸುತ್ತೆ. ಅದಕ್ಕೆ ಕಿಪಿ ಕೀರ್ತಿ ಪೋಟೋ ಹಾಕಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆ ದೃಷ್ಟಿಗೊಂಬೆ ಆಂಟಿಗೆ ಬೇಡಿಕೆ ಕಡಿಮೆ ಆಗಿದೆ. ಕಿಪಿ ಕೀರ್ತಿಗೆ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ. ಈ ದೃಷ್ಟಿಗೊಂಬೆ ಫೋಟೋ ಎಲ್ಲಿ ಸಿಗುತ್ತೆ ಅಂತಲೂ, ಇವಾಗ ಕಿಪಿ ಕೀರ್ತಿ ಫೋಟೋಗೆ ಒಂದು ಬೆಲೆ ಬಂತು! ಅಂತಲೂ ಅನೇಕರು ಕಾಮೆಂಟ್ ಮಾಡಿದ್ದಾರೆ. ಪಾಪಾ ಅವರಿಗೂ ಮನಸಿರುತ್ತೆ, ಹರ್ಟ್ ಆಗುತ್ತೆ. ಈ ರೀತಿ ಮಾಡಬೇಡ್ರೋ ಎಂದು ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ಬುದ್ದಿವಾದ ಹೇಳಿದ್ದಾರೆ.
ರೀಲ್ಸ್ ವಿಡಿಯೋ ಮೂಲಕ ಸುದ್ದಿಯಾಗುತ್ತಿದ್ದ ಕಿಪಿ ಕೀರ್ತಿಯ ಫೋಟೋ ಅನ್ನು solo_in_live ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ನೋಡಲು ಇದು ಮನರಂಜನೆ ಅನ್ನಿಸಬಹುದು. ಆದರೂ ಸಹಿತ ಹೊಸ ಕಟ್ಟಡಕ್ಕೆ ದೃಷ್ಟಿಗೊಂಬೆ ರೀತಿ ಒಬ್ಬ ಹೆಣ್ಣುಮಗಳ ಫೋಟೋ ಹಾಕಿರುವುದು, ಅವರ ಸೌಂದರ್ಯ ಬಗ್ಗೆ ಈ ರೀತಿ ಟೀಕೆ, ಅಪಹಾಸ್ಯ ಮಾಡುವುದು ಎಷ್ಟು ಸರಿ? ಎಂಬ ಚರ್ಚೆಗಳು ಶುರುವಾಗಿವೆ.
ಸದ್ಯ ವೈರಲ್ ಆಗುತ್ತಿರುವ ದೃಷ್ಟಿಗೊಂಬೆ ಕಿಪಿ ಕೀರ್ತಿ ವಿಡಿಯೋಗೆ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 240ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಸುಮಾರು 2.58 ಲಕ್ಷ ವೀಕ್ಷಣೆ ಪಡೆದಿದೆ.












Click it and Unblock the Notifications