kichcha sudeep: ಮ್ಯಾಕ್ಸ್ ಕುದುರೆಯಂತೆ ಓಡಿದೆ ಅಂತ ಹೇಳಿ, ಹೊಸ ಅಪ್‌ಡೇಟ್ ಕೊಟ್ಟ ಕಿಚ್ಚ ಸುದೀಪ್!
kichcha sudeep: ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಜನವರಿ 19ಕ್ಕೆ 25 ದಿನಗಳು ಪೂರ್ತಿಯಾಗಿದ್ದು. ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ಸ್ಪೆಷಲ್ ವಿಡಿಯೋ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಮ್ಯಾಕ್ಸ್ ಸಿನಿಮಾ ಭರ್ಜರಿ 25 ದಿನಗಳ ಪೂರ್ತಿ ಮಾಡಿ ಮುನ್ನುಗುತ್ತಿದೆ. ಈ ಖುಷಿಯ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ವಿಶೇಷ ವಿಡಿಯೋವೊಂದನ್ನು ಮಾಡಿಕೊಂಡು ಕಿರುನಗೆ ಬೀರಿದ್ದಾರೆ. ಮ್ಯಾಕ್ಸ್ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿ ಸಣ್ಣ ವಿಡಿಯೋವೊಂದನ್ನು ಸುದೀಪ್ ಮಾಡಿದ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ಸಹ ಕೊಟ್ಟಿದ್ದಾರೆ. ಸುದೀಪ್ ಹೇಳಿದ್ದೇನು ಎನ್ನುವ ವಿಡಿಯೋ ಮಾಹಿತಿ ಇಲ್ಲಿದೆ.
ಕಿಚ್ಚ ಸುದೀಪ್ ಅವರು ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಸಿನಿಮಾವೊಂದನ್ನು ಮಾಡಿದ್ದರು. ಅವರ ಅಭಿಮಾನಿಗಳು ಕಿಚ್ಚ ಸುದೀಪ್ ಅವರ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದರು. ಮ್ಯಾಕ್ಸ್‌ನಲ್ಲಿ ಕಿಚ್ಚ ಸುದೀಪ್ ಅವರ ಮಾಸ್ ಅಭಿನಯಕ್ಕೆ ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾ ಚಿತ್ರಮಂದಿರಗಳಲ್ಲಿ ಮುನ್ನುಗುತ್ತಿದೆ. ಚೆನ್ನಾಗಿ ಓಡಿಸಿದ್ದಕ್ಕೆ ಥ್ಯಾಂಕ್ಸ್ ಅಂತ ಸುದೀಪ್ ಹೇಳಿದ್ದಾರೆ. ಸುದೀಪ್ ವಿಡಿಯೋದಲ್ಲಿ ಮಾತನಾಡಿದ್ದು ಏನಂತ ನೋಡೋಣ...

ನಿಮ್ಮ ಪ್ರೀತಿಗೆ ಧನ್ಯವಾದಗಳು ♥️ ಎನ್ನುವ ಸಾಲುಗಳೊಂದಿಗೆ ಕಿಚ್ಚ ಸುದೀಪ್ ಅವರು ಅವರ ಅಭಿಮಾನಿಗಳು ಹಾಗೂ ಮ್ಯಾಕ್ಸ್ ಸಿನಿಮಾವನ್ನು ಬೆಂಬಲಿಸಿದವರಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳನ್ನು ಉದ್ದೇಶಿಸಿ ನನ್ನ ಎಲ್ಲಾ ಗೆಳಯರಿಗೆ ಮ್ಯಾಕ್ಸ್ ಸಿನಿಮಾವನ್ನು ಸಕ್ಸಸ್‌ಫುಲ್ ಆಗಿ 25ನೇ ದಿನಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು.. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಇರುವವರಿಗೂ ಪ್ರತಿಯೊಬ್ಬರಿಗೂ ಧನ್ಯವಾದ.
ನಿಮ್ಮ ಪ್ರೀತಿಗೆ ಧನ್ಯವಾದಗಳು ♥️🙏🏼 pic.twitter.com/555cqPmXx4
— Kichcha Sudeepa (@KicchaSudeep) January 19, 2025
ಮ್ಯಾಕ್ಸ್ ಓಡ್ಸಿದ್ದಕ್ಕೆ ಧನ್ಯವಾದ
ಮ್ಯಾಕ್ಸ್ ಸಿನಿಮಾವನ್ನು ತುಂಬಾ ಚೆನ್ನಾಗಿ ಮುಂದಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎನ್ನುವುದನ್ನು ಸಂಭ್ರಮದಿಂದ ಹೇಳಿರುವ ಕಿಚ್ಚ ಸುದೀಪ್ ಅವರು. ಮ್ಯಾಕ್ಸ್ ಸಿನಿಮಾವನ್ನು ಕುದುರೆಯಂತೆ ಚೆನ್ನಾಗಿ ಓಡ್ಸಿದ್ದೀರಿ ಅಂತ ಅಭಿನಯದ ಮೂಲಕ ಹೇಳಿದ್ದಾರೆ. ನಿಮ್ಮ ಪ್ರೀತಿ ಹಾಗೂ ಸಪೋರ್ಟ್‌ಗೆ ಧನ್ಯವಾದ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮೇಲೆ ವಿಶ್ವಾಸ ಇರಿಸಿದಕ್ಕೆ ಧನ್ಯವಾದ. ಎರಡೂವರೆ ಬಂದ ನನ್ನ ಸಿನಿಮಾದ ಮೇಲೆ ವಿಶ್ವಾಸವಿರಿಸಿದ್ದಕ್ಕೆ ನನ್ನ ಎಲ್ಲಾ ಮ್ಯಾಕ್ಸ್ ಸಿನಿಮಾ ತಂಡದಿಂದ ಥ್ಯಾಂಕ್ಸ್ ಅಂತ ಹೇಳಿದ್ದಾರೆ.
ಹೊಸ ಅಪ್‌ಡೇಟ್‌ಗೆ ಕಾಯುತ್ತಿರುವ ಅಭಿಮಾನಿಗಳು
ಇನ್ನು ಕಿಚ್ಚ ಸುದೀಪ್ ಅವರ ಹೊಸ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ಹೊಸ ಅಪ್‌ಡೇಟ್‌ನ ಬಗ್ಗೆ ಮಾತನಾಡಿಲ್ಲ. ಆದರೆ ಎರಡೂವರೆ ವರ್ಷ ಕಾದಿದ್ದಕ್ಕೆ ಥ್ಯಾಂಕ್ಸ್ ಅಂತ ಒತ್ತಿ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಸಿನಿಮಾಗಾಗಿ ಇಷ್ಟೊಂದು ಕಾಯಿಸುವುದಿಲ್ಲ ಎನ್ನುವ ಸುಳಿವನ್ನು ನಗುತ್ತಲ್ಲೇ ಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮ್ಯಾಕ್ಸ್ ಸಿನಿಮಾ ನೋಡಿರುವ ಅಭಿಮಾನಿಗಳಿಗೂ ಕಿಚ್ಚ ಸುದೀಪ್ ಅವರು ವಿಶೇಷ ಧನ್ಯವಾದ ಹೇಳಿದ್ದಾರೆ.
ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ 25 ದಿನಗಳು ತುಂಬಬಿದ್ದು, ಭರ್ಜರಿ ಪ್ರದರ್ಶನ ಮುಂದುವರಿಯುತ್ತಿದೆ.
ಇನ್ನು ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಕನ್ನಡ ಸೀಸನ್ 11ನ ನಂತರ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ನಿರೂಪಣೆಯನ್ನು ಮಾಡುವುದಿಲ್ಲ. ಅವರು ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಉದ್ದೇಶದಿಂದಲೇ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ.
ಬಿಗ್‌ಬಾಸ್ ಸೀಸನ್ ಅನ್ನು ಮುಂದಿನ ದಿನಗಳಲ್ಲಿ ನಾನು ನಡೆಸಿಕೊಡುವುದಿಲ್ಲ ಎಂದು ಈ ಸೀಸನ್ ಪ್ರಾರಂಭವಾದಾಗಲೇ ಕಿಚ್ಚ ಸುದೀಪ್ ಅವರು ಹೇಳಿದ್ದರು.












Click it and Unblock the Notifications