ಕೆಜಿಎಫ್‌-3 ಬಗ್ಗೆ ಬಿಗ್‌ ಅಪ್ಡೇಟ್‌, ರಾಕಿ ಭಾಯ್‌ ಕಥೆಗೆ ಹೊಸ ಟ್ವಿಸ್ಟ್‌!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌-1 ಹಾಗೂ ಕೆಜಿಎಫ್-‌2 ಸಿನಿಮಾಗಳು ಭಾರತೀಯ ಸಿನಿಮಾರಂಗದಲ್ಲೇ ಒಂದು ಮೈಲಿಗಲ್ಲಾಗಿವೆ ಸದ್ದು ಮಾಡಿವೆ. ಈ ಪ್ಯಾನ್‌ ಇಂಡಿಯಾ ಸಿನಿಮಾಗೆ ಭಾರತ ಮಾತ್ರವಲ್ಲದೆ ಬೇರೆ ದೇಶದ ಜನ ಕೂಡ ಫಿದಾ ಆಗಿದ್ದಾರೆ. ಇನ್ನು ಇದರ ಮುಂದುವರಿದ ಭಾಗ ಕೆಜಿಎಫ್ ಚಾಪ್ಟರ್‌-‌3 ಕೂಡ ಬರಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಖಚಿತಪಡಿಸಿತ್ತು. ಆದರೆ ಅದು ಯಾವಾಗ? ಎಂದು ಹೇಳಿರಲಿಲ್ಲ. ಯಶ್‌ ಅಭಿಮಾನಿಗಳು ಕೂಡ ತುಂಬಾ ವರ್ಷ ಆಯ್ತು, ಸೀಕ್ವೆಲ್‌ ಬಗ್ಗೆ ಏನೂ ಅಪ್ಡೇಟ್‌ ಇಲ್ಲ ಎಂದು ಬೇಸರವಾಗಿದ್ದರು. ಇದೀಗ ಹೊಂಬಾಳೆ ಸಿಹಿಸುದ್ದಿಯೊಂದನ್ನು ನೀಡಿದೆ.

ಇತ್ತೀಚೆಗಷ್ಟೇ ಕೆಜಿಎಫ್‌-3 ಬಗ್ಗೆ ಹೊಂಬಾಳೆ ಸುಳಿವು ನೀಡಿತ್ತು. ಕೆಜಿಎಫ್-‌2ಗೆ ಮೂರು ವರ್ಷಗಳು ಪೂರೈಸಿದ ಹಿನ್ನೆಲೆ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು ಸಂಭ್ರಮಿಸಿತ್ತು. ಇದೇ ವೇಳೆ ಕೆಜಿಎಫ್‌-3 ಬಗ್ಗೆಯೂ ವಿಡಿಯೋ ಕೊನೆಯಲ್ಲಿ ಹಿಂಟ್‌ ನೀಡಿತ್ತು. ಇದನ್ನು ಕಂಡು ಯಶ್‌ ಅವರು ಫ್ಯಾನ್ಸ್‌ ಫುಲ್‌ ಆಕ್ಟೀವ್‌ ಆಗಿದ್ದು ಕೂಡ ನಿಜ. ಭಾಯ್‌ ಸಿನಿಮಾ ಬಗ್ಗೆ ಏನೋ ದೊಡ್ಡ ಸುದ್ದಿ ಬರ್ತಿದೆ ಎಂದು ಭಾವಿಸಿದ್ರು.

KGF Chapter 3 Big Update New Twist In Actor Yash Role As Rocky Bhai

ರಾಕಿಗಾಗಿ ಕಾಯುತ್ತಿರುವ ಆ ಕೈ ಯಾವುದು?

ಇದೀಗ ಹೊಂಬಾಳೆ ಮತ್ತೊಂದು ಐಎ ವಿಡಿಯೋ ಹಂಚಿಕೊಂಡು ಕೆಜಿಎಫ್‌-3 ಬಗ್ಗೆ ಸದ್ದಿಲ್ಲದೆ ಹೊಸ ವಿಚಾರವನ್ನು ಹಂಚಿಕೊಂಡಿದೆ. ರಾಕಿ ಭಾಯ್ ಪಕ್ಕದಲ್ಲಿ ನೀವು ಒಂದಾಗಿ ಮೇಲೇರುತ್ತೀರಿ. ಅದೊಂದು ಪಳಗಿಸಲು ಸಾಧ್ಯವಾಗದ ಶಕ್ತಿ ಎಂದು ಬರೆದುಕೊಂಡಿದೆ. ಮೊದಲಿಗೆ ಇದರರ್ಥ ಅಷ್ಟಾಗಿ ತಿಳಿಯದೇ ಇದ್ರೂ, ವಿಡಿಯೋದಲ್ಲಿ ಒಂದು ಸುಳಿವಂತೂ ಇದೆ.

Take a Poll

ಕೆಜಿಎಫ್‌ನ ನರಾಚಿ ಗೇಟ್‌, ರಾಕಿಯಾಗಿ ಯಶ್‌ ಅಲ್ಲಿ ಬೆಳೆದಿದ್ದು, ಕೊನೆಗೆ ಕೆಜಿಎಫ್-‌2 ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಚಿನ್ನ ಹೊತ್ತ ಹಡಗಿನೊಂದಿಗೆ ಸಮುದ್ರದಲ್ಲಿ ಹೋಗುವ ದೃಶ್ಯಗಳು ಇವೆ. ಇಲ್ಲೇ ಹೊಸ ಟ್ವಿಸ್ಟ್‌ವೊಂದನ್ನು ಹೊಂಬಾಳೆ ನೀಡಿದೆ. ಚಾಪ್ಟರ್‌ ಎರಡರಲ್ಲಿ ರಾಕಿಭಾಯ್‌ ಅಪಾರ ಪ್ರಮಾಣದ ಚಿನ್ನದೊಂದಿಗೆ ಬೃಹತ್‌ ಹಡಗಿನಲ್ಲಿ ಸಮುದ್ರದಲ್ಲಿ ಸಾಗುತ್ತಾರೆ. ಭಾರತೀಯ ಸೇನೆ ರಾಕಿಯನ್ನ ಹೊಡೆದುರುಳಿಸುವಂತೆ ಕ್ಲೈಮ್ಯಾಕ್ಸ್‌ನಲ್ಲಿ ತೋರಿಸಲಾಗಿದೆ. ಯಶ್‌ ಚಿನ್ನದೊಂದಿಗೆ ಸಮುದ್ರದ ಆಳಕ್ಕೆ ಬೀಳುವ ಮೂಲಕ ಆ ಸಿನಿಮಾ ಕಥೆ ಮುಗಿಯುತ್ತೆ. ಅಲ್ಲಿಗೆ ರಾಕಿ ಕಥೆ ಮುಗೀತು ಎಂದೇ ಜನ ಭಾವಿಸಿದ್ರು. ಕೊನೆಗೆ ಚಾಪ್ಟರ್‌ 3 ಕೂಡ ಬರುತ್ತೆ ಎಂದು ಕೊನೆಯಲ್ಲಿ ಅನೌನ್ಸ್‌ ಮಾಡಿ ಟ್ವಿಸ್ಟ್‌ ನೀಡಿತ್ತು.

ದೃಶ್ಯಗಳನ್ನು ಗಮನಿಸಿದರೆ ರಾಕಿಭಾಯ್‌ ಸಮುದ್ರಕ್ಕೆ ಬಿದ್ದ ನಂತರ ಸಾಯುತ್ತಾನೆ ಎಂದುಕೊಂಡಿದ್ದವರು, ಚಾಪ್ಟರ್‌ 3 ಕಥೆ ಹೇಗೆ ಬರಲು ಸಾಧ್ಯ ಎಂದು ತಲೆಕೆಡಿಸಿಕೊಂಡಿದ್ದರು. ಈಗ ಹೊಂಬಾಳೆ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಪ್ರಶ್ನೆಗೆ ಉತ್ತರ ನೀಡಲಾಗಿದೆ ಎಂದು ಚರ್ಚೆಗಳು ಶುರುವಾಗಿವೆ. ರಾಕಿ ಹಡಗಿನಲ್ಲಿ ಬರುತ್ತಿರುವಾಗ ಎದುರಿನ ಮತ್ತೊಂದು ಹಡಗಿನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದು ಈ ವಿಡಿಯೋದಲ್ಲಿದೆ. ಆ ವ್ಯಕ್ತಿಯ ಕೈ ಮಾತ್ರ ತೋರಿಸಿದ್ದು, ಎದುರುಗಡೆ ರಾಕಿ ಹಡಗಿನ ಮೇಲೆ ನಿಂತು ಬರುತ್ತಿರುವ ದೃಶ್ಯವಿದೆ. ಈ ಮೂಲಕ ಚಾಪ್ಟರ್‌ 3ಗೆ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+