ಎರಡನೇ ಹೆಂಡತಿ ಬೇಕಾ ಎಂದು ನೇರವಾಗಿ ಕೇಳಿದ ನಟಿ ಕವಿತಾ ಗೌಡ; ಶಾಕಿಂಗ್‌ ಉತ್ತರ ಕೊಟ್ಟ ಚಂದನ್‌

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ತಮ್ಮ ತುಂಟಾಟ ಹಾಗೂ ಪ್ರೀತಿಯ ಕ್ಷಣಗಳನ್ನು ಹಂಚಿಕೊಳ್ಳುವ ಈ ಜೋಡಿಯ ಹೊಸ ವಿಡಿಯೋವೊಂದು ಈಗ ನೆಟ್ಟಿಗರ ಗಮನ ಸೆಳೆದಿದೆ. ಇನ್ನು ಕವಿತಾ ಗೌಡ ಅವರು ತನ್ನ ಪತಿ ಚಂದನ್‌ಗೆ ಎರಡನೇ ಮದುವೆ ಬಗ್ಗೆ ಶಾಕಿಂಗ್‌ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದಕ್ಕೆ ಚಂದನ್‌ ಕೊಟ್ಟರ ಉತ್ತರ ಗಮನ ಸೆಳೆದಿದೆ.

ವೈರಲ್ ವಿಡಿಯೋದಲ್ಲೇನಿದೆ?

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಕವಿತಾ ಗೌಡ ಅವರು ಪತಿ ಚಂದನ್‌ಗೆ ಸಣ್ಣದೊಂದು 'ಚೀಟಿ' ನೀಡುವ ಮೂಲಕ ಕಾಲೆಳೆದಿದ್ದಾರೆ. ಆ ಚೀಟಿಯಲ್ಲಿ "ನಿನಗೆ ಎರಡನೇ ಪತ್ನಿ ಬೇಕು ಎನ್ನುವುದಾದರೆ ನಗು" ಎಂಬ ಬರಹವಿತ್ತು. ಅದನ್ನು ಓದಿದ ಚಂದನ್ ಮೊದಲು ನಗು ಬೀರಿದರೂ, ಕೂಡಲೇ ಪತ್ನಿಯತ್ತ ತಿರುಗಿ "ಬೇಡಪ್ಪಾ.. ನನಗೆ ನಿನ್ನನ್ನೇ ತಡೆದುಕೊಳ್ಳೋಕೆ ಆಗುತ್ತಿಲ್ಲ, ಇನ್ನು ಎರಡನೇ ಪತ್ನಿ ಎಲ್ಲಿಂದ?" ಎಂದು ತಮಾಷೆಯಾಗಿ ಹೇಳಿದ್ದಾರೆ. ಪತಿ-ಪತ್ನಿಯ ಈ ಕಿಚಾಯಿಸುವ ವಿಡಿಯೋ ಈಗ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿಯ ಕಾಲೆಳೆಯುತ್ತಿದ್ದಾರೆ.

Kavitha Gowda

ಕಿರುತೆರೆಯಿಂದ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ಕವಿತಾ ಗೌಡ ಅವರು 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನ 'ಚಿನ್ನು' ಪಾತ್ರದ ಮೂಲಕ ಮನೆಮಾತಾದವರು. ಬಳಿಕ ಬಿಗ್‌ಬಾಸ್ ಕನ್ನಡದಲ್ಲಿ ಭಾಗವಹಿಸಿ ಮೋಡಿ ಮಾಡಿದ್ದರು. ಇನ್ನು 'ರಾಧಾ ಕಲ್ಯಾಣ' ಮತ್ತು 'ಲಕ್ಷ್ಮಿ ಬಾರಮ್ಮ' ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಮಿಂಚಿದ ಚಂದನ್ ಕುಮಾರ್‌, 'ಪ್ರೇಮಬರಹ' ಸಿನಿಮಾ ಮೂಲಕ ಬೆಳ್ಳಿತೆರೆಗೂ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು.

ಚಂದನ್ ಮತ್ತು ಕವಿತಾ ಗೌಡ ಅವರ ಸ್ನೇಹ ಆರಂಭವಾಗಿದ್ದು ಸೂಪರ್ ಹಿಟ್ ಸೀರಿಯಲ್ 'ಲಕ್ಷ್ಮಿ ಬಾರಮ್ಮ' ಸೆಟ್‌ನಲ್ಲಿ. ಸುಮಾರು ಎಂಟು ವರ್ಷಗಳ ಕಾಲ ಸುದೀರ್ಘವಾಗಿ ಪ್ರಸಾರವಾದ ಈ ಧಾರಾವಾಹಿಯಲ್ಲಿ ಚಂದನ್, ಕವಿತಾ ಹಾಗೂ ನೇಹಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಕವಿತಾ ಮತ್ತು ಚಂದನ್ ಕೇವಲ ಆತ್ಮೀಯ ಗೆಳೆಯರಾಗಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು.

Toxic: ಟಾಕ್ಸಿಕ್ ಸಿನಿಮಾದಲ್ಲಿ ತನ್ನ ಬೋಲ್ಡ್ ದೃಶ್ಯ ತೆಗೆಯುವಂತೆ ಬೇಡಿಕೆ: ಇದು 'ಅಪ್ಪಟ ಸುಳ್ಳು' ಎಂದ ಕಿಯಾರಾ ಅಡ್ವಾಣಿ
Toxic: ಟಾಕ್ಸಿಕ್ ಸಿನಿಮಾದಲ್ಲಿ ತನ್ನ ಬೋಲ್ಡ್ ದೃಶ್ಯ ತೆಗೆಯುವಂತೆ ಬೇಡಿಕೆ: ಇದು 'ಅಪ್ಪಟ ಸುಳ್ಳು' ಎಂದ ಕಿಯಾರಾ ಅಡ್ವಾಣಿ

ಲಾಕ್‌ಡೌನ್ ಸಮಯದಲ್ಲಿ ಜಿಮ್‌ಗಳು ಮುಚ್ಚಿದ್ದಾಗ, ಚಂದನ್ ಮತ್ತು ಕವಿತಾ ತಮ್ಮ ಸ್ನೇಹಿತರ ತಂಡದೊಂದಿಗೆ ಟ್ರೆಕ್ಕಿಂಗ್ ಹೋಗಲು ಶುರು ಮಾಡಿದರು. ಈ ಪ್ರಕೃತಿಯ ಒಡನಾಟವೇ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಲು ಕಾರಣವಾಯಿತು. ನಂತರ ಚಂದನ್ ತಮ್ಮ ಪ್ರೀತಿಯನ್ನು ನಿವೇದಿಸಿಕೊಂಡ ಮೇಲೆ, ಕುಟುಂಬದವರ ಸಮ್ಮತಿಯೊಂದಿಗೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡರು. ಅಂತಿಮವಾಗಿ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಯ ಬದುಕಿನಲ್ಲಿ 2024 ಅತ್ಯಂತ ವಿಶೇಷವಾದ ವರ್ಷ. ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದರು. ಸದ್ಯ ಈ ಮುದ್ದಾದ ಮಗುವಿಗೆ 'ಅದ್ವಿಕ್' ಎಂದು ನಾಮಕರಣ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಂದನ್-ಕವಿತಾ ಜೋಡಿ ತಮ್ಮ ಪುತ್ರನೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಪರದೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡಿದ್ದವರು ಈಗ ರಿಯಲ್ ಲೈಫ್‌ನಲ್ಲೂ ಮಾದರಿ ದಂಪತಿಗಳಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಾಯಕನಾಗಿ ಮಿಂಚಿದ್ದ ಚಂದನ್ ಕುಮಾರ್ ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೆ, 'ಫ್ಲರ್ಟ್' (Flirt) ಎಂಬ ಸಿನಿಮಾದ ಮೂಲಕ ಅವರು ಇದೀಗ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ ಚಂದನ್, ಈ ಚಿತ್ರದ ಮೂಲಕ ತಮ್ಮೊಳಗಿನ ಕ್ರಿಯೇಟಿವಿಟಿಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+