Puttakkana Makkalu: ಯುವ ನಟಿಯರಿಗೆ ಭರ್ಜರಿ ಆಫರ್ ಕೊಟ್ಟ 'ಪುಟ್ಟಕ್ಕನ ಮಕ್ಕಳು' ತಂಡ
ಹಿರಿಯ ನಟಿ ಉಮಾಶ್ರೀ ಮತ್ತು ಮಂಜು ಭಾಷಿಣಿ ಮುಖ್ಯಭೂಮಿಕೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಯಾಶಸ್ವಿಯಾಗಿ ಸಾಗುತ್ತಿದ್ದು, ಟಿಆರ್‌ಪಿ ಪಟ್ಟಿಯಲ್ಲಿ ಕಳೆದ ಹಲವು ವಾರಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದೆ. ಒಬ್ಬ ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾ ಹಂದರವಿರುವ ಪುಟ್ಟಕ್ಕನ ಮಕ್ಕಳು ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ.
ಹೊಸತನದ ಜೊತೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಬಂಗಾರಮ್ಮನ ಬದಲು ಸಿಂಗಾರಮ್ಮನ ವರಸೆ ಜೋರಾಗಿದೆ. ಒಂದು ಕಡೆ ಕಂಠಿ-ಸ್ನೇಹ ಪುಟ್ಟಕ್ಕ ಜೊತೆಯಾಗಿದ್ದರೆ, ಅತ್ತ ಸಹನಾ ಹೊಸ ಬದುಕು ಆರಂಭಿಸಿದ್ದಾಳೆ. ಇದೇ ರೀತಿ ವಿಭಿನ್ನವಾದ ಕಥೆಯಿಂದ ನೋಡುಗರ ಗಮನ ಸೆಳೆಯುತ್ತಿರುವ ಈ ಧಾರಾವಾಹಿಯಲ್ಲಿ ನಟಿಸಲು ನಿಮಗೊಂದು ಸುವರ್ಣಾವಕಾಶವಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟಿಯೊಬ್ಬರು ಬೇಕಾಗಿದ್ದಾರೆ. ಈ ಬಗ್ಗೆ ಸ್ವತಃ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ತಿಳಿಸಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆರೂರು ಜಗದೀಶ್, ನಮಸ್ತೆ. ನಮ್ಮ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೊಸ ಪ್ರಧಾನ ಪಾತ್ರಕ್ಕೆ 23 ರಿಂದ 26 ವಯಸ್ಸಿನ ಒಳಗಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ, ನಟನೆ ಗೊತ್ತಿರುವ, ಗುಡ್ ಲುಕ್ ಇರುವ ಹುಡುಗಿ ಬೇಕಾಗಿದ್ದಾರೆ. ದಯವಿಟ್ಟು ನಿಮ್ಮ ಪೋಟೊ ಮತ್ತು ಬಯೊಡಾಟಾವನ್ನು ಶೀಘ್ರವಾಗಿ [email protected] ಗೇ ಮೇಲ್ ಮಾಡಿ ಎಂದು ತಿಳಿಸಿದ್ದಾರೆ.
ಇನ್ನು ನಟನೆಯಲ್ಲಿ ಆಸಕ್ತಿ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಾಗಲೇ ಇಂಟ್ರಸ್ಟಿಂಗ್ ಆಗಿದ್ದು, ಹೊಸ ಪ್ರಧಾನ ಪಾತ್ರ ಎಂದರೆ ಯಾವ ಪಾತ್ರ ಎಂಟ್ರಿ ಆಗಬಹುದು ಎನ್ನುವ ಕುತೂಹಲ ಮೂಡಿದೆ.

ಮನೋರಂಜನಾ ಕ್ಷೇತ್ರದಲ್ಲಿ ಕಿರುತೆರೆ ಅತಿದೊಡ್ಡ ವೇದಿಕೆ. ಇಲ್ಲಿ ರಿಯಾಲಿಟಿ ಶೋ ಹಾಗೂ ಧಾರವಾಹಿಗಳದ್ದೇ ಕಾರುಬಾರು. ಅದರಲ್ಲೂ ಪ್ರತಿ ದಿನ ಪ್ರಸಾರವಾಗುವ ಧಾರವಾಹಿಗಳದ್ದೇ ಕಿರುತೆರೆಯಲ್ಲಿ ಮೇಲು ಗೈ. ವೀಕ್ಷಕರು ತಮ್ಮ ದಿನ ನಿತ್ಯದ ಜೀವನದಲ್ಲಿ ಊಟ-ತಿಂಡಿಯಾದರೂ ಮಿಸ್ ಮಾಡಿಕೊಳ್ಳಬಹುದು ಆದರೆ ತಮ್ಮ ಮೆಚ್ಚಿನ ಧಾರವಾಹಿಯನ್ನಲ್ಲಾ ಎನ್ನುವ ಮಾತಿದೆ. ಅಷ್ಟರ ಮಟ್ಟಿಗೆ ಕೆಲವರ ಜೀವನದಲ್ಲಿ ಧಾರವಾಹಿಗಳು ಹಾಸು ಹೊಕ್ಕಿರುತ್ತದೆ.
ಮಧ್ಯಾಹ್ನ ಹಾಗೂ ಸಂಜೆ, ರಾತ್ರಿ ಪ್ರಸಾರವಾಗುವ ಧಾರಾವಾಹಿ ವೀಕ್ಷಿಸಲು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಧಾರಾವಾಹಿ ವೀಕ್ಷಕರ ಬಳಗಕ್ಕೆ ವಯಸ್ಸಿನ ಮಿತಿ ಇಲ್ಲ. ದೊಡ್ಡವರಿಂದ ಚಿಕ್ಕವರ ತನಕ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಇಂತಹ ಧಾರಾವಾಹಿಯಲ್ಲಿ ನಟಿಸಲು ಸುವರ್ಣವಕಾಶವಿದ್ದು, ನಟನೆಯಲ್ಲಿ ಆಸಕ್ತಿ ಇದ್ದವರು ಕೂಡಲೇ ಸಂಪರ್ಕಿಸಬಹುದಾಗಿದೆ.












Click it and Unblock the Notifications