Bank Janardhan: ಬ್ಯಾಂಕ್ ಜನರ್ಧಾನ್ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾಗಳು
Bank Janardhan Best Movies: ವಯೋಸಹಜ ಕಾಯಿಲೆ ಹಿನ್ನೆಲೆ ಕನ್ನಡದ ಹಿರಿಯ ಕಲಾವಿದ ಇಂದು (ಏಪ್ರಿಲ್ 14) ನಿಧನರಾಗಿದ್ದಾರೆ. ಇವರು ಇದುವರೆಗೂ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದು, ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾದ್ರೆ ಇವರ ಬೆಸ್ಟ್ ಸಿನಿಮಾಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪೋಷಕ ನಟ ಪಾತ್ರಕ್ಕೆ ಹೆಸರುವಾಸಿ ಆಗಿದ್ದ ಬ್ಯಾಂಕ್ ಜನಾರ್ಧನ್ ಅವರು ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ನಟನಟ ಮಾಡಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಛಾಪು ಮೂಡಿಸಿ ಜನಮನ್ನಣೆ ಪಡೆದಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ತರ್ಲೆ ನನ್ನ ಮಗ ಚಿತ್ರದಲ್ಲಿ ಬ್ಯಾಂಕ್ ಜನಾರ್ಧನ್ ಅವರ ಪಾತ್ರ ಹೆಚ್ಚು ಗಮನ ಸೆಳೆದಿದೆ. ಶ್ ಚಿತ್ರದಲ್ಲೂ ಗಮನ ಸೆಳದಿದ್ದು, ಬೈಕೊಂಡು ಓಡಾಡುವ ಇನ್ಸ್‌ಪೆಕ್ಟರ್ ಕಾಳಪ್ಪ ಆಗಿಯೇ ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಲಿಸಿದ್ದಾರೆ.
ಜನಾರ್ಧನ್ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾಗಳು
* ಬ್ಯಾಂಕ್ ಜನಾರ್ಧನ್ ಅವರು ಹೆಚ್ಚು ಗಮನ ಸೆಳದೆ ಸಿನಿಮಾಗಳ ಪಟ್ಟಿ ಕೂಡ ಇಲ್ಲಿದೆ. 'ಮೂರು ಮನಸು ನೂರು ಕನಸು' ಚಿತ್ರ ವಿಶೇಷವಾಗಿದ್ದು, ಈ ಚಿತ್ರದಲ್ಲಿ ಇವರಿಗೆ ತುಂಬಾ ಒಳ್ಳೇ ಹೆಸರು ಸಹ ಬಂದಿದೆ. ಈ ಚಿತ್ರವನ್ನ ಬ್ಯಾಂಕ್ ಜನಾರ್ಧನ್ ಅಭಿನಯದ ದಿ ಬೆಸ್ಟ್ ಸಿನಿಮಾ ಅಂತಲೇ ಕರೆಯುತ್ತಾರೆ.
* "ಅಳಿಯ ಅಲ್ಲ ಮಗಳ ಗಂಡ" ಚಿತ್ರ ಕೂಡ ವಿಶೇಷವಾಗಿದ್ದು, ಇದರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಅದ್ಭುತವಾಗಿ ನಟನೆ ಮಾಡಿದ್ದಾರೆ. ಇದು ಸಹ ಬ್ಯಾಂಕ್ ಜನಾರ್ಧನ್ ಅವರ ಸಿನಿಮಾ ಜೀವನದ ದಿ ಬೆಸ್ಟ್ ಸಿನಿಮಾ ಅಂತಲೇ ಕರೆಯಲಾಗುತ್ತದೆ.
* ಬ್ಯಾಂಕ್ ಜನಾರ್ಧನ್ ಅಭಿನಯದ "ಪಿತಾಮಹ" ಚಿತ್ರವೂ ತುಂಬಾ ವಿಶೇಷವಾಗಿದೆ. ಈ ಬಗ್ಗೆ ಬ್ಯಾಂಕ್ ಜನಾರ್ಧನ್ ಹೇಳಿಕೊಂಡಿರುವುದು ಇದೆ.
* ಗೋವಿಂದ ಗೋಪಾಲ ಹಾಸಿಗೆ ಇದ್ದಷ್ಟು ಕಾಲು ಚಾಲು ಎಂಬ ಸಿನಿಮಾದಲ್ಲೂ ಬ್ಯಾಂಕ್ ಜನಾರ್ಧನ್ ಕಾಮಿಡಿ ಸೂಪರ್ ಹಿಟ್ ಆಗಿದ್ದು, ಈಗಲೂ ಈ ಸಿನಿಮಾ ನೋಡಿದವರು ನಕ್ಕು ನಕ್ಕು ಸಾಕಾಗಿಬಿಡುತ್ತಾರೆ. ಅಷ್ಟರ ಮಟ್ಟಿಗೆ ಇದರಲ್ಲಿ ಹಾಸ್ಯ ಮಾಡಿದ್ದಾರೆ.
* ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ ಚಿತ್ರದಲ್ಲೂ ಬ್ಯಾಂಕ್ ಜನಾರ್ಧನ್ ಅಭಿನಯ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ಪ್ರಮುಖ ರೋಲ್ ಮಾಡಿದ್ದು, ಪೊಲೀಸ್ ಕಾನ್ಸ್‌ಟೇಬಲ್ ಪಾತ್ರದಲ್ಲಿಯೇ ಗಮನ ಸೆಳೆದಿದ್ದಾರೆ.
* "ಹೆತ್ತ ಕರುಳು" ಸಿನಿಮಾದಲ್ಲೂ ಬ್ಯಾಂಕ್ ಜನಾರ್ಧನ್ ಅಭಿನಯಿಸಿದ್ದು, ಇದರಲ್ಲಿ ಇವರ ಅಭಿನಯದ ಮೂಲಕವೂ ಹೆಚ್ಚು ಪ್ರೇಕ್ಷಕರ ಮನ ಗೆದ್ದಿದ್ದಾರೆ.
* "ಬಜಾರ್ ಭೀಮಾ" ಸಿನಿಮಾದಲ್ಲೂ ಬ್ಯಾಂಕ್ ಜನಾರ್ಧನ್ ನಟನಟ ಮಾಡಿದ್ದಾರೆ. ಈ ಚಿತ್ರದಲ್ಲಿ ಹಲವು ವೈವಿಧ್ಯತೆ ತೋರುವುದು ಹೇಗೆ ಅಂತಲೂ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಬಹುಬೇಡಿಕೆಯ ಹಾಸ್ಯನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ಜನಾರ್ಧನ್ ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮಾಂಗಲ್ಯ, ರೋಬೋ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಸೇರಿದಂತೆ ಹಲವು ಧಾರವಾಹಿಗಳಲ್ಲೂ ಕೂಡ ನಟಿಸಿ ವೀಕ್ಷಕರ ಮನ ಗೆದ್ದಿದ್ದರು.
ತಮ್ಮ ಹುಟ್ಟೂರಾದ ಹೊಳಲ್ಕೆರೆಯಲ್ಲೇ ಬ್ಯಾಂಕ್‌ವೊಂದರಲ್ಲಿ ಜನಾರ್ಧನ್ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಕೆಲಸದ ಜೊತೆ ಜೊತೆಗೆ ನಟನೆಯನ್ನೂ ಮಾಡುತ್ತಿದ್ದರು. ಆದ್ದರಿಂದ ಅವರು ಚಿತ್ರರಂಗದಲ್ಲಿ ಬ್ಯಾಂಕ್ ಜನಾರ್ಧನ್ ಎಂದೇ ಗುರುತಿಸಿಕೊಂಡರು. ಬಳಿಕ ಪಿತಾಮಹ ಚಿತ್ರದಿಂದ ಸಿನಿ ಪಯಣ ಶುರು ಮಾಡಿದರು. ಅಲ್ಲಿಂದ ಇಲ್ಲಿವರೆಗೂ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.












Click it and Unblock the Notifications