ಕರಳೆ ಪೋಸ್ಟರ್‌ ರಗಳೆ: ನಟಿ-ನಿರ್ದೇಶಕರ ನಡುವಿನ ಜಟಾಪಟಿ ಏನು?

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ರೀತಿಯ ಪ್ರಯೋಗಗಳು ನಡೆಯುತ್ತಿದ್ದು, ಇದೀಗ ಹೊಸ ಪ್ರಯೋಗ ಮಾಡಲು ಹೊರಟ ಸಿನಿಮಾ ತಂಡದ ನಡುವೆ ಪೋಸ್ಟರ್‌ ವಿವಾದ ಆರಂಭವಾಗಿದೆ. ಸಿನಿಮಾದ ನಟಿ ಹಾಗೂ ನಿರ್ದೇಶಕರ ನಡುವೆ ಪೋಸ್ಟರ್‌ ವಿವಾದ ಆರಂಭವಾಗಿದ್ದು, ಇದೀಗ ಚಿತ್ರ ಬಿಡುಗಡೆ ಆಗುತ್ತದೆಯೋ ಇಲ್ಲವೋ ಎನ್ನು ಪ್ರಶ್ನೆ ಎದುರಾಗಿದೆ.

ಈ ಹಿಂದೆ ಕನ್ನಡ ದೇಶದೊಳ್ ಹಾಗೂ ಕಲಿವೀರ ಸಿನಿಮಾಗಳನ್ನು ನಿರ್ದೇಶಿಸಿರುವ ಕನ್ನಡ ನಿರ್ದೇಶಕ ಅವಿರಾಮ್ ಕಂಠೀರವ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಒಂದು ಹೆಣ್ಣಿನ ಅಂತಃಕರಣವನ್ನು ಚಿತ್ರದ ಮೂಲಕ ವಿವರಿಸಬೇಕು ಎನ್ನುವ ಹೊಸ ಪ್ರಯತ್ನಕ್ಕೆ ನಿರ್ದೇಶಕ ಅವಿರಾಮ್ ಕಂಠೀರವ ಕೈ ಹಾಕಿದ್ದಾರೆ.

Kannada Karale Movie Poster Controversy And Clarity

ಕರಳೆ ಎನ್ನುವ ಹೊಸ ಸಿನಿಮಾವನ್ನು ಅವಿರಾಮ್ ಕಂಠೀರವ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಚೈನೀಸ್ ಎರಡೂ ಭಾಷೆಯಲ್ಲಿ ಸಿದ್ಧವಾಗುತ್ತಿದ್ದು, ಶೀಘ್ರವೇ ಬಿಡುಗಡೆಗೂ ಕೂಡ ಚಿತ್ರತಂಡ ಸಜ್ಜಾಗುತ್ತಿದೆ. ಇನ್ನೇನು ಸಿನಿಮಾದ ಅಂತಿಮ ಕೆಲಸಗಳು ನಡೆಯುತ್ತಿರುವ ಹೊತ್ತಲೇ ಈ ಸಿನಿಮಾದ ಬಗ್ಗೆ ವಿವಾದ ಹುಟ್ಟಿಕೊಂಡಿದೆ.

Take a Poll

ಕರಳೆ ಚಿತ್ರದ ನಾಯಕಿ ಕುಂಕುಮ್ ನಿರ್ದೇಶಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆಗ ತಾನೇ ಜನ್ಮ ನೀಡಿದ ಮಹಿಳೆಯ ಮೇಲೆ ಮಗುವನ್ನು ಮಲಗಿಸಿರುವ ಪೋಸ್ಟರ್‌ಅನ್ನು ಕರಳೆ ತಂಡ ರಿಲೀಸ್‌ ಮಾಡಿತ್ತು. ಇದನ್ನು ನೋಡಿದ ಚಿತ್ರ ನಟಿ ಕುಂಕುಮ್‌ ಗಾಬರಿಯಾಗಿದ್ದು, ಈ ಪೋಸ್ಟರ್‌ನಲ್ಲಿರುವುದು ನಾನಲ್ಲ, ಈ ಪೋಸ್ಟರ್‌ ಬಗ್ಗೆ ನನಗೆ ಗೊತ್ತೇ ಇಲ್ಲ, ಈ ಪೋಸ್ಟರ್‌ ಬಗ್ಗೆ ಕೇಳಿದರೆ ನಿರ್ದೇಶಕರು ಉತ್ತರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Kannada Karale Movie Poster Controversy And Clarity

ಇದರಲ್ಲಿ ಇರುವುದು ನಟಿ ಕುಂಕುಮ್ ಎಂದು ತಿಳಿದು ಅವರ ಆತ್ಮೀಯರು ಪ್ರಶ್ನಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗೆ ಕೆಟ್ಟ ಕಮೆಂಟ್‌ ಬರುತ್ತಿದೆ. ಹೀಗಾಗಿ ಈ ಬೋಲ್ಡ್ ಪೋಸ್ಟರ್‌ನಲ್ಲಿ ಇರುವುದು ನಾನಲ್ಲ ಅಂತ ನಿರ್ದೇಶಕರು ಸ್ಪಷ್ಟನೆ ಕೊಡಬೇಕು. ಇಲ್ಲವಾದರೆ ನಾನು ಮುಂದಿನ ದೃಶ್ಯಗಳಲ್ಲಿ ನಟಿಸುವುದಿಲ್ಲ. ಫಿಲ್ಮ್ ಚೇಂಬರ್‌ಗೆ ಹೋಗುತ್ತೇನೆ ಎಂದು ನಟಿ ಹೇಳಿದ್ದಾರೆ.

ನಟಿ ಆರೋಪದ ಬಗ್ಗೆ ನಿರ್ದೇಶಕರು ಕೂಡ ಮಾತನಾಡಿದ್ದು, ಸಿನಿಮಾ ಬೋಲ್ಡ್‌ ಅಂತಾ ಮೊದಲೇ ಅಗ್ರೀಮೆಂಟ್‌ ಆಗಿದೆ. ಹೆಣ್ಣಿನ ಬಗ್ಗೆ ಮಾಡುತ್ತಿರುವ ಸಿನಿಮಾಗೆ ಹೆಣ್ಣೇ ಅಡ್ಡಿಯಾಗಿದ್ದಾರೆ. ನಾನು ಕೂಡ ಫಿಲ್ಮ್ ಚೇಂಬರ್‌ನಲ್ಲಿಯೇ ಉತ್ತರ ಕೊಡುತ್ತೇನೆ. ಏನೇ ಇದ್ದರು ಅಲ್ಲೇ ನೋಡೋಣ ಎಂದು ಹೇಳಿದ್ದಾರೆ. ಇನ್ನು ಪೋಸ್ಟರ್‌ ರಿಲೀಸ್‌ ಆಗಿ ತಿಂಗಳು ಕಳೆದಿದ್ದು ಈಗ ಈ ವಿವಾದ ಆರಂಭವಾಗಿದೆ. ಕರಳೆ ಸಿನಿಮಾದ ನಟಿ-ಹಾಗೂ ನಿರ್ದೇಶಕರ ಜಟಾಪಟಿಗೆ ಫಿಲ್ಮ್ ಚೇಂಬರ್‌ನಲ್ಲೇ ಬ್ರೇಕ್‌ ಬೀಳಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+